ಅಡ್ವಾಣಿ, ಜೋಷಿ ಪಾತ್ರ: ಬಾಬ್ರಿ ಮಸೀದಿ ಧ್ವಂಸ ತೀರ್ಪಿನ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

|

Updated on: Aug 22, 2020 | 6:19 PM

ಹಿರಿಯ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಉಮಾ ಭಾರತಿ ಅವರನ್ನು ಆರೋಪಿಗಳೆಂದು ಹೂಡಿರುವ ಬಾಬ್ರಿ ಮಸೀದಿ ಧ್ವಂಸ ಆರೋಪಿಗಳೆಂದು ಹೂಡಿರುವ ಪ್ರಕರಣದ ತೀರ್ಪನ್ನು ನೀಡಲು ಒಂದು ತಿಂಗಳುಮಟ್ಟಿಗೆ ಸಮಯವನ್ನು ವಿಸ್ತರಿಸಿರುವ ಸರ್ವೋಚ್ಛ ನ್ಯಾಯಾಲಯವು, ಸೆಪ್ಟಂಬರ್ 30 ರೊಳಗಾಗಿ ಪ್ರಕರಣ ಇತ್ಯರ್ಥಗೊಳಿಸುವಂತೆ ವಿಶೇಷ ಸಿಬಿಐ ಕೋರ್ಟಿಗೆ ನಿರ್ದೇಶನ ನೀಡಿದೆ. ಅಯೋಧ್ಯೆ ವಿಶೇಷ ಕೋರ್ಟಿನ ನ್ಯಾಯಾಧೀಶರ ಮನವಿಯ ಮೇರೆಗೆ ನ್ಯಾಯಮೂರ್ತಿ ರೋಹಿಂಟನ್ ಎಫ್ ನಾರಿಮನ್ ಅವರ ನೇತೃತ್ವದ ಪೀಠವು ಅವಧಿಯನ್ನು ವಿಸ್ತರಿಸಿತು. ಪ್ರಕರಣದ […]

ಅಡ್ವಾಣಿ, ಜೋಷಿ ಪಾತ್ರ: ಬಾಬ್ರಿ ಮಸೀದಿ ಧ್ವಂಸ ತೀರ್ಪಿನ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್
Follow us on

ಹಿರಿಯ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಉಮಾ ಭಾರತಿ ಅವರನ್ನು ಆರೋಪಿಗಳೆಂದು ಹೂಡಿರುವ ಬಾಬ್ರಿ ಮಸೀದಿ ಧ್ವಂಸ ಆರೋಪಿಗಳೆಂದು ಹೂಡಿರುವ ಪ್ರಕರಣದ ತೀರ್ಪನ್ನು ನೀಡಲು ಒಂದು ತಿಂಗಳುಮಟ್ಟಿಗೆ ಸಮಯವನ್ನು ವಿಸ್ತರಿಸಿರುವ ಸರ್ವೋಚ್ಛ ನ್ಯಾಯಾಲಯವು, ಸೆಪ್ಟಂಬರ್ 30 ರೊಳಗಾಗಿ ಪ್ರಕರಣ ಇತ್ಯರ್ಥಗೊಳಿಸುವಂತೆ ವಿಶೇಷ ಸಿಬಿಐ ಕೋರ್ಟಿಗೆ ನಿರ್ದೇಶನ ನೀಡಿದೆ.

ಅಯೋಧ್ಯೆ ವಿಶೇಷ ಕೋರ್ಟಿನ ನ್ಯಾಯಾಧೀಶರ ಮನವಿಯ ಮೇರೆಗೆ ನ್ಯಾಯಮೂರ್ತಿ ರೋಹಿಂಟನ್ ಎಫ್ ನಾರಿಮನ್ ಅವರ ನೇತೃತ್ವದ ಪೀಠವು ಅವಧಿಯನ್ನು ವಿಸ್ತರಿಸಿತು. ಪ್ರಕರಣದ ಬಗ್ಗೆ ಪ್ರಗತಿ ವರದಿಯನ್ನು ಅಪೆಕ್ಸ್ ಕೋರ್ಟಿಗೆ ನೀಡಿರುವ ಅಯೋಧ್ಯೆ ಕೋರ್ಟಿನ ನ್ಯಾಯಾಧೀಶರು, ಅದರೊಂದಿಗೆ ಅವಧಿ ವಿಸ್ತರಿಸಬೇಕೆನ್ನುವ ಕೋರಿಕೆಯನ್ನು ಸಹ ಸಲ್ಲಿಸಿದ್ದರು.

ಕಳೆದ ತಿಂಗಳು, ವಿಡಿಯೊಕಾನ್ಫರೆನ್ಸಿಂಗ್ ಮೂಲಕ ಬಿಜೆಪಿ ಅತ್ಯಂತ ಹಿರಿಯ ನಾಯಕರಾಗಿರುವ ಅಡ್ವಾಣಿ ಹಾಗೂ ಜೋಷಿ ಅವರ ಹೇಳಿಕೆಗಳನ್ನು ಸಿಬಿಐ ಕೋರ್ಟ್ ದಾಖಲಿಸಿಕೊಂಡಿತ್ತು. ನಾಯಕರಿಬ್ಬರೂ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ತಳ್ಳಿ ಹಾಕಿದ್ದರಲ್ಲದೆ, ಅವುಗಳನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದೆ ಎಂದಿದ್ದರು.

ಮಸೀದಿ ಕೆಡವುವ ಕೃತ್ಯದಲ್ಲಿ ತಾವು ಭಾಗಿಯೇ ಆಗಿರಲಿಲ್ಲವೆಂದು ಸಹ ಹೇಳಿದ್ದ ಅಡ್ವಾಣಿ ಹಾಗೂ ಜೋಷಿ, ದೇಶದ ಐಕ್ಯತೆ ಹಾಗೂ ಸೌಹಾರ್ದತೆಗೆ ಧಕ್ಕೆಯಾಗುವ ಯಾವುದೇ ಕೆಲಸದಲ್ಲಿ ತಾವು ಭಾಗಿಯಾಗಿಲ್ಲ ಅಂತ ಕೋರ್ಟ್​ಗೆ ತಿಳಿಸಿದ್ದರು.