ಕೊರೊನಾರ್ಭಟದ ನಡುವೆ ICMRನಿಂದ ಶಾಕಿಂಗ್ ನ್ಯೂಸ್, ಭಾರತದಲ್ಲಿ ಹೆಚ್ಚುತ್ತಿವೆ ಕ್ಯಾನ್ಸರ್ ಕೇಸ್ಗಳು!
ದೆಹಲಿ: ಕಳೆದ 7 ತಿಂಗಳಿಂದ ದೇಶದಲ್ಲಿ ಕೊರೊನಾರ್ಭಟ ಜೋರಾಗಿದೆ. ಇದ್ರ ನಡ್ವೆ ಮತ್ತಷ್ಟು ಭಯಾನಕ ರೋಗಗಳು ಮನುಕುಲವನ್ನ ಹಿಂಡಿ ಹಿಪ್ಪೆ ಮಾಡ್ತಿವೆ. ಕ್ಯಾನ್ಸರ್ಗೆ ಸಂಬಂಧಿಸಿದಂತೆ ಐಸಿಎಂಆರ್ ವರದಿಯೊಂದನ್ನ ಬಿಡುಗಡೆ ಮಾಡಿದ್ದು, ಇದು ಭಾರತದ ಯುವಕರು & ಮಹಿಳೆಯರನ್ನ ಬೆಚ್ಚಿಬೀಳಿಸುವಂತೆ ಮಾಡಿದೆ. ಕೊರೊನಾ ದೇಶವನ್ನ ಕಂಗಲಾಗಿಸಿದೆ.. ಲಕ್ಷಾಂತರ ಮಂದಿಯನ್ನ ಸಾವಿನ ಮನೆಗೆ ದೂಡಿದೆ. ಶ್ರೀಮಂತರಿಂದ ಹಿಡಿದು ಬಡವರ ತನಕ ಎಲ್ಲರನ್ನೂ ಕಣ್ಣೀರ ಕಡಲಿಗೆ ತಳ್ಳಿದೆ. ಸಾಲು ಸಾಲು ಸಂಕಷ್ಟಗಳನ್ನ ತಂದೊಡ್ಡಿದೆ. ಇದ್ರ ನಡ್ವೆ ಐಸಿಎಂಆರ್ ದೇಶದ ಜನರಿಗೆ ಮತ್ತೊಂದು […]
ದೆಹಲಿ: ಕಳೆದ 7 ತಿಂಗಳಿಂದ ದೇಶದಲ್ಲಿ ಕೊರೊನಾರ್ಭಟ ಜೋರಾಗಿದೆ. ಇದ್ರ ನಡ್ವೆ ಮತ್ತಷ್ಟು ಭಯಾನಕ ರೋಗಗಳು ಮನುಕುಲವನ್ನ ಹಿಂಡಿ ಹಿಪ್ಪೆ ಮಾಡ್ತಿವೆ. ಕ್ಯಾನ್ಸರ್ಗೆ ಸಂಬಂಧಿಸಿದಂತೆ ಐಸಿಎಂಆರ್ ವರದಿಯೊಂದನ್ನ ಬಿಡುಗಡೆ ಮಾಡಿದ್ದು, ಇದು ಭಾರತದ ಯುವಕರು & ಮಹಿಳೆಯರನ್ನ ಬೆಚ್ಚಿಬೀಳಿಸುವಂತೆ ಮಾಡಿದೆ.
ಕೊರೊನಾ ದೇಶವನ್ನ ಕಂಗಲಾಗಿಸಿದೆ.. ಲಕ್ಷಾಂತರ ಮಂದಿಯನ್ನ ಸಾವಿನ ಮನೆಗೆ ದೂಡಿದೆ. ಶ್ರೀಮಂತರಿಂದ ಹಿಡಿದು ಬಡವರ ತನಕ ಎಲ್ಲರನ್ನೂ ಕಣ್ಣೀರ ಕಡಲಿಗೆ ತಳ್ಳಿದೆ. ಸಾಲು ಸಾಲು ಸಂಕಷ್ಟಗಳನ್ನ ತಂದೊಡ್ಡಿದೆ. ಇದ್ರ ನಡ್ವೆ ಐಸಿಎಂಆರ್ ದೇಶದ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ.
ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿವೆ ಕ್ಯಾನ್ಸರ್ ಕೇಸ್ಗಳು! ಹೌದು, ಭಾರತದಲ್ಲಿ ಕೊರೊನಾ ಅಬ್ಬರದ ನಡುವೆ ಕ್ಯಾನ್ಸರ್ ಕೂಡ ವೇಗವಾಗಿ ಹೆಚ್ಚುತ್ತಿದೆ. ಐಸಿಎಂಆರ್ ರಿಲೀಸ್ ಮಾಡಿರೋ ವರದಿ ಎಲ್ಲರನ್ನ ಬೆಚ್ಚಿಬೀಳಿಸಿದೆ. 2025ರ ವೇಳೆಗೆ ಭಾರತದಲ್ಲಿ 16 ಲಕ್ಷಕ್ಕೂ ಹೆಚ್ಚು ಮಂದಿ ಕ್ಯಾನ್ಸರ್ಗೆ ತುತ್ತಾಗಲಿದ್ದಾರೆ ಎಂದು ವರದಿ ನೀಡಿದೆ. ಇದ್ರ ಪ್ರಕಾರ, ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಕೊಲ್ಕತ್ತಾದಂತದ ಮಹಾ ನಗರದಲ್ಲೇ ಹೆಚ್ಚು ಮಂದಿ ಕ್ಯಾನ್ಸರ್ಗೆ ತುತ್ತಾಗಲಿದ್ದು, ಯುವಕರು & ಮಧ್ಯ ವಯಸ್ಕ ಮಹಿಳೆಯರೇ ಹೆಚ್ಚು ಎಂದು ವರದಿಯಲ್ಲಿ ತಿಳಿದು ಬಂದಿದೆ. ಹಾಗಾದ್ರೆ ಭಾರತದಲ್ಲಿ ಯಾವ್ಯಾವ ಪ್ರದೇಶಗಳಲ್ಲಿ ಯಾವ್ಯಾವ ಕ್ಯಾನ್ಸರ್, ಹೇಗೆ ಹರಡುತ್ತಿದೆ ಅಂತಾ ನೋಡೋದಾದ್ರೆ.
ಎಲ್ಲೆಲ್ಲಿ, ಯಾವ್ಯಾವ ಕ್ಯಾನ್ಸರ್? ಭಾರತದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚು ಕಂಡು ಬರ್ತಿದೆ. ಪೂರ್ವ ರಾಜ್ಯಗಳಲ್ಲಿ ಶ್ವಾಸಕೋಶ, ಮೆದುಳು, ಕುತ್ತಿಗೆ ಬಳಿ ಕ್ಯಾನ್ಸರ್ ಕಾಣಿಸಿಕೊಳ್ತಿದೆ. ಇದಕ್ಕೆ ತಂಬಾಕು ಸೇವನೆ, ಸೌದೆ ಒಲೆ ಬಳಕೆ ಕಾರಣ ಎಂದು ವರದಿ ಬಂದಿದೆ. ಮಧ್ಯಪ್ರದೇಶದ ಯುವಕರಲ್ಲಿ ಹೆಚ್ಚು ಬಾಯಿ ಕ್ಯಾನ್ಸರ್ ಕಂಡು ಬಂದ್ರೆ, ಉತ್ತರಪ್ರದೇಶ, ಬಿಹಾರ, ಪಶ್ಚಿಮಬಂಗಾಳದಲ್ಲಿ ಜಲಮಾಲಿನ್ಯ, ಪ್ರೊಟಿನ್ ರಹಿತ ಆಹಾರದಿಂದ ಪಿತ್ತಕೋಶದ ಕ್ಯಾನ್ಸರ್ ಬರ್ತಿದೆ. ಇನ್ನು ದಕ್ಷಿಣಭಾರತದಲ್ಲಿ ಮಸಲಾ ಪದಾರ್ಥಗಳ ಸೇವನೆಯಿಂದ ಉದರ ಸಂಬಂಧಿ ಕ್ಯಾನ್ಸರ್ ಬರುತ್ತೆ. ಪಂಜಾಬ್ನಲ್ಲಿ ಕಿಡ್ನಿ, ಮೂತ್ರಕೋಶ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಿದ್ರೆ, ಗುಜರಾತ್, ರಾಜಸ್ಥಾನದಲ್ಲಿ ಕತ್ತು, ತಲೆ ಕ್ಯಾನ್ಸರ್ ಪ್ರಮಾಣ ಹೆಚ್ಚಿದೆ. ಇತ್ತ ದೆಹಲಿ ಮತ್ತು ಮುಂಬೈನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಧಿಕವಾಗಿದೆ.
ಇನ್ನು 20ರಿಂದ 25 ವರ್ಷದ ಯುವಕರಲ್ಲೇ ಕ್ಯಾನ್ಸರ್ ಪ್ರಮಾಣ ಹೆಚ್ಚಿದೆ. ಒಟ್ಟು ಕ್ಯಾನ್ಸರ್ ಕೇಸ್ಗಳ ಪೈಕಿ ಶೇ.40ರಷ್ಟು ಪಾನ್ ಮಸಾಲಗೆ ಸಂಬಂಧಿಸಿವೆ. ಜೊತೆಗೆ ಸ್ತನ ಕ್ಯಾನ್ಸರ್ 2025 ರ ವೇಳೆಗೆ 4,27,273 ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು ಅಂತಾ ಐಸಿಎಂಆರ್ ವರದಿ ನೀಡಿದೆ. ಹೀಗಾಗಿ ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದ್ರೆ ಸರಿ, ಇಲ್ಲದಿದ್ರೆ ರೋಗಿಯ ಸಾವು ಖಚಿತ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.