ಪ್ರಧಾನಿ ಭದ್ರತೆ ಲೋಪದ ಬಗ್ಗೆ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್​​ ಜಡ್ಜ್​​ಗಳಿಗೆ ಬೆದರಿಕೆ; ತಾನು ಎಸ್​ಎಫ್​​ಜೆಯವನು ಎಂದ ಕರೆ ಮಾಡಿದಾತ !

| Updated By: Lakshmi Hegde

Updated on: Jan 10, 2022 | 3:03 PM

+447418365564 ಎಂಬ ನಂಬರ್​ನಿಂದ ನನಗೆ ಕರೆ ಬಂದಿತ್ತು. ಯುನೈಟೆಡ್​ ಕಿಂಗ್​ಡಮ್​​ನಿಂದ ಬರುತ್ತಿರುವ ಕರೆ ಎಂದು ತೋರಿಸುತ್ತದೆ. ಈ ನಂಬರ್​ನಿಂದ ಬಂದ್​ ಫೋನ್​ ಸ್ವೀಕರಿಸುತ್ತಿದ್ದಂತೆ ಒಂದು ರೆಕಾರ್ಡ್​ ಸಂದೇಶ ಕೇಳುತ್ತದೆ.

ಪ್ರಧಾನಿ ಭದ್ರತೆ ಲೋಪದ ಬಗ್ಗೆ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್​​ ಜಡ್ಜ್​​ಗಳಿಗೆ ಬೆದರಿಕೆ; ತಾನು ಎಸ್​ಎಫ್​​ಜೆಯವನು ಎಂದ ಕರೆ ಮಾಡಿದಾತ !
ಪ್ರಧಾನಿ ಮೋದಿಯವರು ಫ್ಲೈಓವರ್​ ಮೇಲೆ ಕಾಯುತ್ತಿದ್ದ ದೃಶ್ಯ
Follow us on

ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ( PM Security Breach In Punjab)ಯವರ ಭದ್ರತೆಯಲ್ಲಿ ಲೋಪವಾದ ಪ್ರಕರಣದ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್​ಗೆ ಹಲವು ಬೆದರಿಕೆ ಕರೆಗಳು ಬರುತ್ತಿವೆ. ಈಗಾಗಲೂ ಸುಪ್ರೀಂಕೋರ್ಟ್(Supreme Court)​ನ ಹಲವು ವಕೀಲರು ಈ ಅನಾಮಧೇಯ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ. ಕರೆ ಮಾಡುವವನು, ತಾನು ಯುಎಸ್​ಎಯಿಂದ ಫೋನ್​ ಮಾಡುತ್ತಿದ್ದೇನೆ. ಸಿಖ್ ಫಾರ್ ಜಸ್ಟೀಸ್​ ಸಂಘಟನೆಯ ಜನರಲ್​ ಕೌನ್ಸೆಲ್​ ಎಂದು ಹೇಳಿಕೊಳ್ಳುತ್ತಿದ್ದಾನೆ. ಅಷ್ಟೇ ಅಲ್ಲ, ಫಿರೋಜ್​​ಪುರಕ್ಕೆ ಹೊರಟಿದ್ದ ಪ್ರಧಾನಿ ಮೋದಿಯವರನ್ನು ಹುಸ್ಸೇನಿವಾಲಾ ಫ್ಲೈಓವರ್​ ಮೇಲೆ ತಡೆದಿದ್ದರ ಹೊಣೆಯನ್ನು ಎಸ್​ಎಫ್​ಜೆ (ಸಿಖ್​ ಫಾರ್​ ಜಸ್ಟೀಸ್​) ಸಂಘಟನೆಯೇ ಹೊತ್ತುಕೊಳ್ಳುತ್ತದೆ ಎಂದೂ ಹೇಳಿದ್ದಾನೆ ಎನ್ನಲಾಗಿದೆ.

ಪಂಜಾಬ್​​ನಲ್ಲಿ ಜನವರಿ 5ರಂದು ಉಂಟಾದ ಪ್ರಧಾನಿ ಭದ್ರತಾ ಲೋಪಕ್ಕೆ ಸಂಬಂಧಪಟ್ಟಂತೆ ಲಾಯರ್ಸ್ ವೈಸ್​ ಎಂಬ ಎನ್​ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿದ್ದಲ್ಲದೆ, ಘಟನೆಯ ತನಿಖೆಗಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದ ನಾಲ್ವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಹಾಗೇ, ಸದ್ಯ ನಡೆಯುತ್ತಿರುವ ಉಳಿದೆಲ್ಲ ತನಿಖೆಗಳನ್ನೂ ನಿಲ್ಲಿಸುವಂತೆ ಸೂಚನೆ ನೀಡಿದೆ. ಇಂದು ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ನಡೆಯುವುದಕ್ಕೂ ಮೊದಲು ಹೀಗೆ ಅನೇಕ ಸಲ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ. 1984ರಲ್ಲಿ ನಡೆದಿದ್ದ ಸಿಖ್​ ವಿರೋಧಿ ದಂಗೆಯ ಆರೋಪಿಗಳಿಗೆ ಇನ್ನೂ ಶಿಕ್ಷೆ ಕೊಡಲು ಸಾಧ್ಯವಾಗದ ಸುಪ್ರೀಂಕೋರ್ಟ್​ ಈಗ ಭದ್ರತಾ ಲೋಪದ ಬಗ್ಗೆಯೂ ಯಾವುದೇ ವಿಚಾರಣೆ ನಡೆಸಬಾರದು ಎಂದು ಕರೆ ಮಾಡಿದ್ದಾತ ಹೇಳಿದ್ದಾನೆ.

+447418365564 ಎಂಬ ನಂಬರ್​ನಿಂದ ನನಗೆ ಕರೆ ಬಂದಿತ್ತು. ಯುನೈಟೆಡ್​ ಕಿಂಗ್​ಡಮ್​​ನಿಂದ ಬರುತ್ತಿರುವ ಕರೆ ಎಂದು ತೋರಿಸುತ್ತದೆ. ಈ ನಂಬರ್​ನಿಂದ ಬಂದ್​ ಫೋನ್​ ಸ್ವೀಕರಿಸುತ್ತಿದ್ದಂತೆ ಒಂದು ರೆಕಾರ್ಡ್​ ಸಂದೇಶ ಕೇಳುತ್ತದೆ. ಮೋದಿಯವರ ಪ್ರಯಾಣದ ಮಾರ್ಗವನ್ನು ನಿರ್ಬಂಧಿಸಿದ್ದರ ಹೊಣೆಯನ್ನು ನಾವು ಹೊರುತ್ತೇವೆ. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರು ನಡೆಸಬಾರದು. ಪ್ರಕರಣದ ವಿಚಾರಣೆಗೂ ಮೊದಲು ಸುಪ್ರೀಂಕೋರ್ಟ್​ ಜಡ್ಜ್​​ಗಳು 1984 ದಂಗೆಯನ್ನು ನೆನಪಿಸಿಕೊಳ್ಳಲಿ ಎಂಬ ಮಾತುಗಳು ಕೇಳುತ್ತವೆ ಎಂದು ಸುಪ್ರೀಂಕೋರ್ಟ್​​ನ ವಕೀಲರು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪಿಎಂ ಭದ್ರತಾ ಲೋಪ: ನಡೆಸಲಾಗುತ್ತಿರುವ ತನಿಖೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸುಪ್ರೀಂಕೋರ್ಟ್​ ಆದೇಶ, ಕೇಂದ್ರದ ವಿರುದ್ಧ ಅಸಮಾಧಾನ

Published On - 3:02 pm, Mon, 10 January 22