
ಲಕ್ನೋ, ಆ.7: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ (Gyanvapi Mosque) ವೈಜ್ಞಾನಿಕ ಸಮೀಕ್ಷೆಯನ್ನು ಇಂದು 10.30ರಿಂದ ಆರಂಭವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಗಳ ತಂಡ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಪುನರಾರಂಭಿಸಲಿದ್ದಾರೆ. ಆದರೆ ಇಂದು ಶ್ರಾವಣ ತಿಂಗಳ ಐದನೇ ಸೋಮವಾರ (ಹಿಂದೂಗಳ ಅತ್ಯಂತ ಮಂಗಳಕರ ಅವಧಿಗಳಲ್ಲಿ ಒಂದಾಗಿದೆ) ಆಗಿರುವುದರಿಂದ ಸ್ವಲ್ಪ ವಿಳಂಬವಾಗಬಹುದು, ಹಿಂದೂ ಸಂಘಟನೆಯ ಪರ ವಕೀಲ ಸುಧೀರ್ ತ್ರಿಪಾಠಿ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.
ಈಗಾಗಲೇ ಈ ಸಮೀಕ್ಷೆಗೆ ಕಾರ್ಯಯೋಜನೆಯನ್ನು ಮಾಡಿದ್ದು, ಸಮೀಕ್ಷೆ ನಡೆಸಲು ಮಸೀದಿಯ ನಿರ್ವಹಕರಾದ ಅಂಜುಮನ್ ಇಂತೇಜಾಮಿಯಾ ಸಮಿತಿಯು ಸಹಕರಿಸುತ್ತಿದೆ ಎಂದು ವಕೀಲ ಸುಧೀರ್ ತ್ರಿಪಾಠಿ ತಿಳಿಸಿದ್ದಾರೆ. ಎಎಸ್‌ಐ ಸಮೀಕ್ಷೆಯ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಹಿಂದೂ ಸಂಘಟನೆ ಪರ ಮತ್ತೊಬ್ಬ ವಕೀಲ ಸುಭಾಷ್ ನಂದನ್ ಚತುರ್ವೇದಿ, ಸಮೀಕ್ಷೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
17 ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂಬದನ್ನು ಪತ್ತೆ ಮಾಡಲು ಜ್ಞಾನವಾಪಿ ಮಸೀದಿಯ ಮೂರು ಗುಮ್ಮಟಗಳ ಅಡಿಯಲ್ಲಿರುವ ಪ್ರದೇಶದ ವೈಜ್ಞಾನಿಕ ಪರೀಕ್ಷೆಗಳನ್ನು ಭಾನುವಾರ ನಡೆಸಲಾಯಿತು. ಕೆಲವು ನೆಲಮಾಳಿಗೆಗಳ ಶುಚಿಗೊಳಿಸುವಿಕೆಯೊಂದಿಗೆ ‘ಛಾಯಾಗ್ರಹಣ, ಮ್ಯಾಪಿಂಗ್ ಮತ್ತು ಪ್ರದೇಶದ ಅಳತೆ’ ಪೂರ್ಣಗೊಂಡಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದರು. ಆದರೆ ನ್ಯಾಯಂಗ ತೀರ್ಪಿನ ಪ್ರಕಾರ ಅಲ್ಲಿ ಸಮೀಕ್ಷೆ ನಡೆಯುತ್ತಿಲ್ಲ, ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಆರೋಪಿಸಿದ್ದರು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ಆರಂಭ, ಸುಪ್ರಿಂಕೋರ್ಟ್ ಮೆಟ್ಟಿಲೇರಿದ ಮಸೀದಿ ಆಡಳಿತ ಮಂಡಳಿ
ಇದೀಗ ನ್ಯಾಯಾಲಯದ ಆದೇಶದ ಪ್ರಕಾರ ಪ್ರಾಥಮಿಕ ಹಂತದ ಸಮೀಕ್ಷೆ ಮುಗಿದಿದ್ದು , ರಾಡಾರ್ ಸೇರಿದಂತೆ ಆಧುನೀಕ ಯಂತ್ರಗಳನ್ನು ಬಳಸಿ ದ್ವಿತೀಯ ಹಂತದ ಸಮೀಕ್ಷೆ ಪ್ರಾರಂಭವಾಗಿದೆ. ಡಿಫರೆನ್ಷಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಡಿಜಿಪಿಎಸ್) ಮತ್ತು ಇತರ ತಂತ್ರಗಳನ್ನು ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎಂದು ವಕೀಲ ಸುಧೀರ್ ತ್ರಿಪಾಠಿ ಅವರು ಶನಿವಾರ ಹೇಳಿದರು. ಇಲ್ಲಿಯವರೆಗಿನ ಸಮೀಕ್ಷೆಯಿಂದ ಹಿಂದೂಗಳು ತೃಪ್ತರಾಗಿದ್ದಾರೆ ಎಂದು ಅವರು ಹೇಳಿದರು.
ಈ ಸಂಕೀರ್ಣದೊಳಗಿನ ಅವಶೇಷಗಳಲ್ಲಿ ಹಿಂದೂ ವಿಗ್ರಹಗಳ ತುಣುಕುಗಳು ಕಂಡುಬಂದಿವೆ ಎಂಬ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಮಸೀದಿ ಸದಸ್ಯ ಅಹ್ಮದ್ ಭಾನುವಾರ ಹಿಂದೂ ಸಂಘಟನೆಗಳ ಮೇಲೆ ಆರೋಪಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ