ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರಿಂದ ಗ್ರೆನೇಡ್​ ದಾಳಿ, ಆದರೆ ಜನರ ಮೇಲೆ ಬಿದ್ದು 7 ಮಂದಿಗೆ ಗಾಯ

|

Updated on: Jan 02, 2021 | 2:53 PM

ಎರಡು ದಿನಗಳ ಹಿಂದೆ ಕತುವಾ ಜಿಲ್ಲೆಯ ಹಿರಾನಗರದ ದೇವಾಲಯವೊಂದನ್ನು ಗುರಿಯಾಗಿಸಿ, ಗ್ರೆನೇಡ್ ದಾಳಿ ಮಾಡಿದ್ದರು. ಅದೂ ಕೂಡ ಗುರಿ ತಪ್ಪಿ ತೆರೆದ ಪ್ರದೇಶವೊಂದರಲ್ಲಿ ಸ್ಫೋಟಗೊಂಡಿತ್ತು. ಇದರಿಂದಾಗಿ ಬಹುದೊಡ್ಡ ಅಪಾಯ ತಪ್ಪಿತ್ತು.

ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರಿಂದ ಗ್ರೆನೇಡ್​ ದಾಳಿ, ಆದರೆ ಜನರ ಮೇಲೆ ಬಿದ್ದು 7 ಮಂದಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us on

ಶ್ರೀನಗರ: ಜಮ್ಮು ಕಾಶ್ಮೀರ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, 7 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಪುಲ್ವಾಮಾದ ಟ್ರಾಲ್​ ಪ್ರದೇಶದಲ್ಲಿ ಇದ್ದ ರಕ್ಷಣಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು.

ಉಗ್ರರು ಭದ್ರತಾ ಸಿಬ್ಬಂದಿಯೆಡೆಗೆ ಗ್ರೆನೇಡ್ ಎಸೆದರೂ ಅದು ಗುರಿ ತಪ್ಪಿ ಮಾರುಕಟ್ಟೆ ಪ್ರದೇಶದಲ್ಲಿ ಬಿದ್ದು ಸ್ಫೋಟಗೊಂಡಿದ್ದರಿಂದ ಅಲ್ಲಿದ್ದ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಪ್ರದೇಶದ ಸುತ್ತಲೂ ಭದ್ರತೆಯನ್ನು ಬಲಪಡಿಸಲಾಗಿದೆ. ಗ್ರೆನೇಡ್ ದಾಳಿ ಮಾಡಿದವರನ್ನು ಹುಡುಕುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಕತುವಾ ಜಿಲ್ಲೆಯ ಹಿರಾನಗರದ ದೇವಾಲಯವೊಂದನ್ನು ಗುರಿಯಾಗಿಸಿ, ಗ್ರೆನೇಡ್ ದಾಳಿ ಮಾಡಿದ್ದರು. ಅದೂ ಕೂಡ ಗುರಿ ತಪ್ಪಿ ತೆರೆದ ಪ್ರದೇಶವೊಂದರಲ್ಲಿ ಸ್ಫೋಟಗೊಂಡಿತ್ತು. ಇದರಿಂದಾಗಿ ಬಹುದೊಡ್ಡ ಅಪಾಯ ತಪ್ಪಿತ್ತು.

Delhi Chalo: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್​ ಮೂಲಕ ರೈತರ ಪರೇಡ್​!

Published On - 2:41 pm, Sat, 2 January 21