ವಿಶ್ವ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಅತಿ ಜನಪ್ರಿಯ ನಾಯಕ!
ವಿಶ್ವದ ನಾನಾ ನಾಯಕರ ಜನಪ್ರಿಯತೆಯನ್ನು ಆಧರಿಸಿ ಅವರುಗಳಿಗೆ ರೇಟಿಂಗ್ ನೀಡಲಾಗಿದೆ. ವಿಶ್ವದ ನಾನಾ ನಾಯಕರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಅವರ ಅನುಮೋದನೆ ರೇಟಿಂಗ್ ಉಳಿದ ನಾಯಕರಿಗಿಂತ ಹೆಚ್ಚಿದೆ.

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ನಿರಂತರವಾಗಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಣ ಮಾಡಲು ಸರ್ಕಾರದ ಬಳಿ ಸಾಧ್ಯವಾಗಿಲ್ಲ. ಇನ್ನು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ ಎಂದು ಅಮೆರಿಕ ಮೂಲದ ಸಮೀಕ್ಷಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಹೇಳಿದೆ.
ವಿಶ್ವದ ನಾನಾ ನಾಯಕರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಅವರ ಜನಪ್ರಿಯತೆಯನ್ನು ಆಧರಿಸಿ ಅವರುಗಳಿಗೆ ರೇಟಿಂಗ್ ನೀಡಲಾಗಿದೆ.ಈ ಪೈಕಿ ನರೇಂದ್ರ ಮೋದಿ ಅವರ ಅನುಮೋದನೆ ರೇಟಿಂಗ್ ಉಳಿದ ನಾಯಕರಿಗಿಂತ ಹೆಚ್ಚಿದೆ. ಮೋದಿ ಕಾರ್ಯಕ್ಕೆ ಶೇ. 55 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇ.20 ಜನರು ಮೋದಿ ಕಾರ್ಯದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಇಂಗ್ಲೆಂಡ್, ಅಮೆರಿಕದ ನಾಯಕರನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. 13 ರಾಷ್ಟ್ರದ ನಾಯಕರಲ್ಲಿ ಮೋದಿಗೆ ಅತಿ ಹೆಚ್ಚು ರೇಟಿಂಗ್ ದೊರೆತಿದೆ.
ಇನ್ನು, ಇಂಗ್ಲೆಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವುದಕ್ಕಿಂತ ಅಸಮಾಧಾನ ಹೊರ ಹಾಕಿದವರೇ ಹೆಚ್ಚು.
ಹೊಸ ವರ್ಷದ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿ ಕವಿತೆ ‘ಈಗಷ್ಟೇ ಸೂರ್ಯ ಉದಯಿಸಿದ್ದಾನೆ’




