ಚಾಲಕನ ನಿಯಂತ್ರಣ ತಪ್ಪಿ ನದಿಗೆ ವಾಹನ ಬಿದ್ದು 7 ಜನ ಸಾವು

|

Updated on: Nov 16, 2020 | 9:44 AM

ಮಂಡಿ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ವಾಹನ ಬಿದ್ದು 7 ಜನ ಮೃತಪಟ್ಟಿರುವ ಘಟನೆ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಪುಲ್‌ಘ್ರಾಟ್ ಬಳಿ ನಡೆದಿದೆ. ಇಂದು ಬೆಳಗಿನ ಜಾವ ಸುಮಾರು 3ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಪುಲ್‌ಘ್ರಾಟ್ ಬಳಿ ಇರುವ ಸುಕೇತಿ ನದಿಗೆ ವಾಹನ ಬಿದ್ದು ಇಂತಹ ಅವಘಡ ಸಂಭವಿಸಿದೆ. ಇನ್ನು ಘಟನೆಯಲ್ಲಿ 7ಜನ ಸಾವನ್ನಪ್ಪಿದ್ದು ಒಬ್ಬರಿಗೆ ಗಾಯಗಳಾಗಿವೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಚಾಲಕನ ನಿಯಂತ್ರಣ ತಪ್ಪಿ ನದಿಗೆ ವಾಹನ ಬಿದ್ದು 7 ಜನ ಸಾವು
Follow us on

ಮಂಡಿ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ವಾಹನ ಬಿದ್ದು 7 ಜನ ಮೃತಪಟ್ಟಿರುವ ಘಟನೆ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಪುಲ್‌ಘ್ರಾಟ್ ಬಳಿ ನಡೆದಿದೆ.

ಇಂದು ಬೆಳಗಿನ ಜಾವ ಸುಮಾರು 3ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಪುಲ್‌ಘ್ರಾಟ್ ಬಳಿ ಇರುವ ಸುಕೇತಿ ನದಿಗೆ ವಾಹನ ಬಿದ್ದು ಇಂತಹ ಅವಘಡ ಸಂಭವಿಸಿದೆ. ಇನ್ನು ಘಟನೆಯಲ್ಲಿ 7ಜನ ಸಾವನ್ನಪ್ಪಿದ್ದು ಒಬ್ಬರಿಗೆ ಗಾಯಗಳಾಗಿವೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.