ಅಂತೂ ಭಕ್ತರಿಗೆ ಸಿಕ್ತು ಸಾಯಿ ಬಾಬಾ, ಅಯ್ಯಪ್ಪನ ದರ್ಶನ ಭಾಗ್ಯ.. ಆದ್ರೆ, ಕೇದಾರನಾಥನ ಸನ್ನಿಧಿ ಕ್ಲೋಸ್​

ಅಂತೂ ಭಕ್ತರಿಗೆ ಸಿಕ್ತು ಸಾಯಿ ಬಾಬಾ, ಅಯ್ಯಪ್ಪನ ದರ್ಶನ ಭಾಗ್ಯ.. ಆದ್ರೆ, ಕೇದಾರನಾಥನ ಸನ್ನಿಧಿ ಕ್ಲೋಸ್​

ಮಹಾರಾಷ್ಟ್ರದಲ್ಲಿ ಇಂದಿನಿಂದ ದೇವಸ್ಥಾನ, ದರ್ಗಾ, ಗುರುದ್ವಾರಗಳು ಇಂದಿನಿಂದ ಭಕ್ತರ ಪೂಜೆ, ಪ್ರಾರ್ಥನೆಗೆ ತೆರೆದಿವೆ. ಜತೆಗೆ ಕೇರಳದ ಅಯ್ಯಪ್ಪ ಸ್ವಾಮಿ ದೇವಾಲಯ ಕೂಡ ಭಕ್ತರ ದರ್ಶನಕ್ಕೆ ಇಂದಿನಿಂದ ತೆರೆದಿದೆ.‌ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರ ಸೇರಿದಂತೆ ಪ್ರಮುಖ ದೇವಸ್ಥಾನದಲ್ಲಿ ಭಕ್ತರಿಗೆ ಇಂದಿನಿಂದ ದರ್ಶನ, ಪೂಜೆಗೆ ಅವಕಾಶ ನೀಡಲಾಗುತ್ತಿದೆ. ಶಿರಡಿ ಸಾಯಿಬಾಬಾ ಮಂದಿರದಲ್ಲಿ ಇಂದು ಆರು ಸಾವಿರ ಭಕ್ತರಿಗೆ ದರ್ಶನ ನೀಡಲಾಗುತ್ತಿದೆ. ಮೂರು ಸಾವಿರ ಭಕ್ತರು ಉಚಿತ ದರ್ಶನ ಪಡೆದರೇ, ಇನ್ನೂ ಮೂರು ಸಾವಿರ ಭಕ್ತರು ಹಣ ಪಾವತಿಸಿ ದರ್ಶನ […]

pruthvi Shankar

|

Nov 16, 2020 | 1:16 PM

ಮಹಾರಾಷ್ಟ್ರದಲ್ಲಿ ಇಂದಿನಿಂದ ದೇವಸ್ಥಾನ, ದರ್ಗಾ, ಗುರುದ್ವಾರಗಳು ಇಂದಿನಿಂದ ಭಕ್ತರ ಪೂಜೆ, ಪ್ರಾರ್ಥನೆಗೆ ತೆರೆದಿವೆ. ಜತೆಗೆ ಕೇರಳದ ಅಯ್ಯಪ್ಪ ಸ್ವಾಮಿ ದೇವಾಲಯ ಕೂಡ ಭಕ್ತರ ದರ್ಶನಕ್ಕೆ ಇಂದಿನಿಂದ ತೆರೆದಿದೆ.‌

ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರ ಸೇರಿದಂತೆ ಪ್ರಮುಖ ದೇವಸ್ಥಾನದಲ್ಲಿ ಭಕ್ತರಿಗೆ ಇಂದಿನಿಂದ ದರ್ಶನ, ಪೂಜೆಗೆ ಅವಕಾಶ ನೀಡಲಾಗುತ್ತಿದೆ. ಶಿರಡಿ ಸಾಯಿಬಾಬಾ ಮಂದಿರದಲ್ಲಿ ಇಂದು ಆರು ಸಾವಿರ ಭಕ್ತರಿಗೆ ದರ್ಶನ ನೀಡಲಾಗುತ್ತಿದೆ. ಮೂರು ಸಾವಿರ ಭಕ್ತರು ಉಚಿತ ದರ್ಶನ ಪಡೆದರೇ, ಇನ್ನೂ ಮೂರು ಸಾವಿರ ಭಕ್ತರು ಹಣ ಪಾವತಿಸಿ ದರ್ಶನ ಪಡೆಯಬೇಕು.

ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆನ್ನೆಯಿಂದ ಭಕ್ತರ ದರ್ಶನಕ್ಕೆ ತೆರೆದಿದೆ.. ಇನ್ನೂ ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆನ್ನೆಯಿಂದ ಭಕ್ತರ ದರ್ಶನಕ್ಕೆ ತೆರೆದಿದೆ. 62 ದಿನಗಳ ಕಾಲ ಭಕ್ತರ ಪೂಜೆ, ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಿತ್ಯ ಒಂದು ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಕೊರೊನಾ ನೆಗೆಟಿವ್ ವರದಿ ಇರುವವರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಇಂದು ಮುಚ್ಚಲಾಗುತ್ತಿದೆ.. ಇನ್ನೂ ದೇವಭೂಮಿ ಉತ್ತರಾಖಂಡದ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಇಂದು ಮುಚ್ಚಲಾಗುತ್ತಿದೆ. ಚಳಿಗಾಲ, ಹಿಮಪಾತದ ಕಾರಣದಿಂದ ಚಳಿಗಾಲಕ್ಕೂ ಮುನ್ನ ಕೇದಾರನಾಥ ದೇವಾಲಯವನ್ನ ಪ್ರತಿ‌ವರ್ಷ ಮುಚ್ಚಲಾಗುತ್ತೆ.‌ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ಯುಪಿ‌ ಸಿಎಂ ಯೋಗಿ ಆದಿತ್ಯನಾಥ ನೆನ್ನೆ, ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Follow us on

Related Stories

Most Read Stories

Click on your DTH Provider to Add TV9 Kannada