ಬಸ್, ಟ್ರಕ್​ ಮುಖಾಮುಖಿ ಡಿಕ್ಕಿ: ಏಳು ಸಾವು

ಛತ್ತೀಸ್​ಗಢ: ಕಾರ್ಮಿಕರಿದ್ದ ಬಸ್ ಮತ್ತು ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಛತ್ತೀಸ್​ಗಢದ ರಾಯ್‌ಪುರದ ಚೆರಿಖೇಡಿ ಎಂಬಲ್ಲಿ ನಡೆದಿದೆ. ಒಡಿಶಾದ ಗಂಜಾಂನಿಂದ ಗುಜರಾತ್‌ನ ಸೂರತ್‌ಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಬಸ್, ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದಾಗಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. Seven people killed, seven injured after a […]

ಬಸ್, ಟ್ರಕ್​ ಮುಖಾಮುಖಿ ಡಿಕ್ಕಿ: ಏಳು ಸಾವು

Updated on: Sep 05, 2020 | 8:46 AM

ಛತ್ತೀಸ್​ಗಢ: ಕಾರ್ಮಿಕರಿದ್ದ ಬಸ್ ಮತ್ತು ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಛತ್ತೀಸ್​ಗಢದ ರಾಯ್‌ಪುರದ ಚೆರಿಖೇಡಿ ಎಂಬಲ್ಲಿ ನಡೆದಿದೆ.

ಒಡಿಶಾದ ಗಂಜಾಂನಿಂದ ಗುಜರಾತ್‌ನ ಸೂರತ್‌ಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಬಸ್, ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದಾಗಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.