ಶೋಪಿಯಾನಾದಲ್ಲಿ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ; ಹಿಜ್ಬುಲ್ ಮುಜಾಹಿದ್ದೀನ್​ ಉಗ್ರರಿಗೆ ನೆರವು ನೀಡುತ್ತಿದ್ದ 7 ಮಂದಿ ಅರೆಸ್ಟ್

|

Updated on: Apr 09, 2021 | 8:27 AM

ವಿವಿಧ ಹಳ್ಳಿಗಳಲ್ಲಿ ಕಾರ್ಯಾಚರಣೆ ನಡೆಸಿ, ಅರೆಸ್ಟ್ ಮಾಡಲಾಗಿದೆ. ಈ ಮೂಲಕ ಶೋಪಿಯಾನಾದಲ್ಲಿ ನಿರ್ಮಾಣವಾಗಿದ್ದ ದೊಡ್ಡ ಉಗ್ರಜಾಲವನ್ನು ಬೇಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಉನ್ನತ ಅಧಿಕಾರಿ ತಿಳಿಸಿದ್ದಾರೆ.

ಶೋಪಿಯಾನಾದಲ್ಲಿ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ; ಹಿಜ್ಬುಲ್ ಮುಜಾಹಿದ್ದೀನ್​ ಉಗ್ರರಿಗೆ ನೆರವು ನೀಡುತ್ತಿದ್ದ 7 ಮಂದಿ ಅರೆಸ್ಟ್
ಭದ್ರತಾ ಪಡೆ(ಪ್ರಾತಿನಿಧಿಕ ಚಿತ್ರ)
Follow us on

ಶ್ರೀನಗರ: ಭಯೋತ್ಪಾದಕರಿಗೆ ಹಣಕಾಸು, ಪ್ರಯಾಣ, ಆಶ್ರಯ ಸೇರಿ ವಿವಿಧ ರೀತಿಯಲ್ಲಿ ನೆರವು ನೀಡುತ್ತಿದ್ದ ಏಳು ಮಂದಿಯನ್ನು ಭದ್ರತಾ ಪಡೆಗಳು ಅರೆಸ್ಟ್ ಮಾಡಿವೆ. ದಕ್ಷಿಣ ಕಾಶ್ಮೀರದ ಶೋಪಿಯಾನಾ ಜಿಲ್ಲೆಯ ವಿವಿಧ ಭಾಗಗಳಿಂದ ಇವರೆನ್ನೆಲ್ಲ ವಶಕ್ಕೆ ಪಡೆಯಲಾಗಿದ್ದು, ಅವರಿಂದ ವಿವಿಧ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಶೋಪಿಯಾನಾದ ವಿವಿಧೆಡೆ ನಾಕಾ ಚೆಕ್​ ಮಾಡಲಾಗುತ್ತಿತ್ತು. ಈ ವೇಳೆ 7 ಮಂದಿ ಭಯೋತ್ಪಾದಕ ಸಹಚರರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ಗ್ರೆನೇಡ್​ ಸೇರಿ ವಿವಿಧ ರೀತಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸಮಿಯುಲ್ಲಾ ಫಾರೂಕ್​ ಚೋಪಾನ್​, ಹಿಲಾಲ್ ಅಹ್ಮದ್ ವಾನಿ, ರಮೀಜ್​ ವಾನಿ, ರೌಫ್​ ಅಹ್ಮದ್ ವಾನಿ, ಜಹೀದ್​ ಹುಸ್ಸೇನ್​ ವಾನಿ, ಫೈಜಾನ್​ ಅಹ್ಮದ್​ ಖಾನ್​, ಶಾಹೀದ್​ ಅಹ್ಮದ್​ ರಾಥರ್ ಬಂಧಿತರಾಗಿದ್ದು, ಇವರೆಲ್ಲ ಹಿಜ್ಬುಲ್ ಮುಜಾಹಿದ್ದೀನ್​ ಉಗ್ರಸಂಘಟನೆಗೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇವರನ್ನೆಲ್ಲ ಒಂದೇ ಏರಿಯಾದಲ್ಲಿ ಬಂಧಿಸಿಲ್ಲ. ವಿವಿಧ ಹಳ್ಳಿಗಳಲ್ಲಿ ಕಾರ್ಯಾಚರಣೆ ನಡೆಸಿ, ಅರೆಸ್ಟ್ ಮಾಡಲಾಗಿದೆ. ಈ ಮೂಲಕ ಶೋಪಿಯಾನಾದಲ್ಲಿ ನಿರ್ಮಾಣವಾಗಿದ್ದ ದೊಡ್ಡ ಉಗ್ರಜಾಲವನ್ನು ಬೇಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಉನ್ನತ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ವಾಟ್ಸಾಪ್‌, ಟೆಲಿಗ್ರಾಮ್, ಸಿಗ್ನಲ್‌ ಆ್ಯಪ್​ಗಿಂತ ಸುಧಾರಿತವಾದ ಆ್ಯಪ್​ ಬಳಸ್ತಿದ್ದಾರೆ ಉಗ್ರರು; IP ವಿಳಾಸವೂ ಇರುವುದಿಲ್ಲ! NIA ತನಿಖೆಯಿಂದ ಬಹಿರಂಗ

ಬಾಲ್​ಕೋಟ್​ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

ಲಷ್ಕರ್​ ಇ ತೈಬಾ ಮುಖ್ಯಸ್ಥ ಹಫೀಜ್​ ಸೈಯದ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

Published On - 11:54 am, Sat, 13 March 21