‘ಎಐಎಡಿಎಂಕೆ ಈಗ ಮೇಡಂ ಜಯಲಲಿತಾರ ಪಕ್ಷವಲ್ಲ..ಅದು ಪ್ರಧಾನಿ ಮೋದಿಯವರ ಗುಲಾಮ ಪಕ್ಷ’- ಅಸಾದುದ್ದೀನ್ ಓವೈಸಿ ಟೀಕೆ
Tamil nadu assembly election 2021: ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಮತಎಣಿಕೆ ನಡೆಯಲಿದೆ. ಎಎಂಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ AIMIM ಮೂರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದೆ.
ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ (AIADMK) ಪಕ್ಷ ಭಾರತೀಯ ಜನತಾ ಪಾರ್ಟಿ (BJP)ಯೊಂದಿಗೆ ಮೈತ್ರಿ ಮಾಡಿಕೊಂಡಿದ್ದನ್ನು ಎಐಎಂಐಎಂ (AIMIM) ಅಸಾದುದ್ದೀನ್ ಓವೈಸಿ ತೀವ್ರವಾಗಿ ಟೀಕಿಸಿದ್ದಾರೆ. ಜಯಲಲಿತಾ ಅವರು ನಮ್ಮೊಂದಿಗೆ ಇಲ್ಲ. ದುರದೃಷ್ಟಕ್ಕೆ ಅವರ ಪಕ್ಷ ಈಗ ಪ್ರಧಾನಿ ನರೇಂದ್ರ ಮೋದಿಯವರ ಗುಲಾಮ ಪಕ್ಷವಾಗಿ ಬದಲಾಗಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ವಿಧಾನಸಭಾ ಚುನಾವಣೆ ನಡೆಯಲದೆ. ಅಸಾದುದ್ದೀನ್ ಓವೈಸಿ ಈ ಬಾರಿ ಟಿಟಿವಿ ದಿನಕರನ್ ನೇತೃತ್ವದAMMKಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಹಾಗೇ ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ನಿನ್ನೆ ಚೆನ್ನೈನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡ ಅವರು ಎಐಎಡಿಎಂಕೆ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇಂದು AIADMK ಮೇಡಂ ಜಯಲಲಿತಾ ಅವರ ಪಕ್ಷವಾಗಿ ಉಳಿದಿಲ್ಲ. ಜಯಲಲಿತಾ ಬದುಕಿದ್ದಾಗ ಒಂದಿನವೂ ಬಿಜೆಪಿಯನ್ನು ಹತ್ತಿರ ಸೇರಿಸಿಕೊಳ್ಳಲಿಲ್ಲ. ಆದರೆ ಈಗ AIADMK ಬಿಜೆಪಿಯ ಗುಲಾಮ ಪಕ್ಷವಾಗಿ ಬದಲಾಗಿದೆ ಎಂದು ಟೀಕಿಸಿದ್ದಾರೆ. ಇನ್ನು ಕಾಂಗ್ರೆಸ್ನೊಟ್ಟಿಗೆ ಮೈತ್ರಿ ಮಾಡಿಕೊಂಡ ಡಿಎಂಕೆ ಬಗ್ಗೆಯೂ ಓವೈಸಿ ವ್ಯಂಗ್ಯ ಮಾಡಿದ್ದಾರೆ.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಮತಎಣಿಕೆ ನಡೆಯಲಿದೆ. ಇದರಲ್ಲಿ ಎಎಂಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ AIMIM ಮೂರು ಕ್ಷೇತ್ರಗಳಲ್ಲಿ (ವನಿಯಂಬಾಡಿ, ಕೃಷ್ಣಗಿರಿ ಮತ್ತು ಶಂಕರಪುರಂ) ಮಾತ್ರ ಸ್ಪರ್ಧೆ ಮಾಡುತ್ತಿದೆ. ಅಸಾದುದ್ದೀನ್ ಓವೈಸಿ ತಮಿಳುನಾಡಿನಲ್ಲಿ ಡಿಎಂಕೆ ಅಥವಾ ಎಎಂಎಂಕೆ.. ಎರಡು ಪಕ್ಷಗಳಲ್ಲಿ ಒಂದರೊಟ್ಟಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಡಿಎಂಕೆ ಮೈತ್ರಿಯಲ್ಲಿರುವ ಉಳಿದ ಮುಸ್ಲಿಂ ಪಕ್ಷಗಳು ಓವೈಸಿ ಆಗಮನವನ್ನು ಒಪ್ಪಲಿಲ್ಲ.
ಇದನ್ನೂ ಓದಿ: ತಮಿಳುನಾಡು ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ: ಟಿಟಿವಿ ದಿನಕರನ್ ಜೊತೆ ಅಸಾದುದ್ದೀನ್ ಓವೈಸಿ ಮೈತ್ರಿ
Published On - 12:48 pm, Sat, 13 March 21