ತಮಿಳುನಾಡು ವಿಧಾನಸಭೆ ಚುನಾವಣೆ: ‘ಕರ್ನಾಟಕದ ಸಿಂಗಂ’ ಅಣ್ಣಾ ಮಲೈ ಸ್ಪರ್ಧಿಸುತ್ತಿರುವ ಕ್ಷೇತ್ರ ಯಾವುದು? ಆ ಕ್ಷೇತ್ರದ ಮಹಿಮೆ ಏನು?

K Annamalai | ಅರವಾಕುರಿಚಿ ಕ್ಷೇತ್ರದ ಮತದಾರರು 53 ವರ್ಷಗಳಿಂದ ದ್ರಾವಿಡ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಆದರೆ ಕ್ಷೇತ್ರದ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ. ಜವಳಿ ಕ್ಷೇತ್ರದ ಅಗ್ರಗಣ್ಯನೆನಿಸಿರುವ ತಿರುಪ್ಪೂರ್​ ಅನ್ನು ಮೀರಿಸಿ ಬೆಳೆಯುವ ಎಲ್ಲ ಅವಕಾಶಗಳೂ ಈ ಅರವಾಕುರಿಚಿಗೆ ಇದೆ. ಆದರೆ ದ್ರಾವಿಡ ಅಭ್ಯರ್ಥಿಗಳಿಗೆ ಕ್ಷೇತ್ರದ ಅಭಿವೃದ್ಧಿ ಬೇಕಾಗಿರಲಿಲ್ಲ ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆ: ‘ಕರ್ನಾಟಕದ ಸಿಂಗಂ’ ಅಣ್ಣಾ ಮಲೈ ಸ್ಪರ್ಧಿಸುತ್ತಿರುವ ಕ್ಷೇತ್ರ ಯಾವುದು? ಆ ಕ್ಷೇತ್ರದ ಮಹಿಮೆ ಏನು?
‘ಕರ್ನಾಟಕ ಸಿಂಗಂ’ ಅಣ್ಣಾ ಮಲೈ ಸ್ಪರ್ಧಿಸುತ್ತಿರುವ ಕ್ಷೇತ್ರ ಯಾವುದು? ಆ ಕ್ಷೇತ್ರದ ಮಹಿಮೆ ಏನು?
Follow us
ಸಾಧು ಶ್ರೀನಾಥ್​
| Updated By: ganapathi bhat

Updated on:Mar 12, 2021 | 7:03 PM

ಭಾರತೀಯ ಆಡಳಿತ ಸೇವೆಯಲ್ಲಿ ಸುಭದ್ರ ನೌಕರಿ ಹೊಂದಿದ್ದ, ತನ್ಮೂಲಕ ‘ಕರ್ನಾಟಕದ ಸಿಂಗಂ’ ಎಂದು ಜನಜನಿತರಾದ ಕೆ. ಅಣ್ಣಾಮಲೈ ಎಂಬ ಯುವ ಪೊಲೀಸ್​ ಅಧಿಕಾರಿ ದಿಢೀರನೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಕರ್ನಾಟಕದಿಂದ ಸೀದಾ ಎದ್ದು ಹೋಗಿ ತಮ್ಮ ಸ್ವ ರಾಜ್ಯ ತಮಿಳುನಾಡನ್ನು ಸೇರಿಕೊಂಡಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಮಧ್ಯೆ, ತಮಿಳುನಾಡು ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿದ್ದು, ಅದಕ್ಕೂ ಮುನ್ನ ಅಣ್ಣಾಮಲೈ ಬಿಜೆಪಿ ಪಕ್ಷವನ್ನು ಅಪ್ಪಿಕೊಂಡಿದ್ದಾರೆ. ಬಿಜೆಪಿ ಸಹ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ದಯಪಾಲಿಸಿದೆ. ಆಡಳಿತಾರೂಢ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ಅಣ್ಣಾಮಲೈ ಅವರನ್ನು ಚುನಾವಣಾ ಕಣಕ್ಕೆ ಇಳಿಸಲು ನಿರ್ಧರಿಸಿದೆ. ಹಾಗಾದರೆ ಅಣ್ಣಾಮಲೈ ಸ್ಪರ್ಧಿಸುತ್ತಿರುವ ಆ ವಿಧಾನಸಭಾ ಕ್ಷೇತ್ರ ಯಾವುದು? ಆ ಕ್ಷೇತ್ರದ ಮಹಿಮೆ ಏನು? ಎಂಬುದನ್ನು ನೋಡಿದಾಗ..

ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಅರವಾಕುರಿಚಿ (Aravakurichi) ಎಂಬುದು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವಾಗಿದೆ. ಡಿಎಂಕೆ ಪಕ್ಷದ ವಿ ಸೆಂಥಿಲ್​ ಬಾಲಾಜಿ ಕ್ಷೇತ್ರದ ಹಾಲಿ ಶಾಸಕ. ವಲಸೆ ಹಕ್ಕಿಯಾಗಿ ಕ್ಷೇತ್ರಗಳನ್ನು ಬದಲಾಯಿಸುತ್ತಾ.. ಕಳೆದ ಬಾರಿ ಅರವಾಕುರಿಚಿ ಕ್ಷೇತ್ರದಿಂದ ಅರಸಿ ಬಂದ್ದಿದಾರೆ. ಇತ್ತೀಚೆಗೆ ಸಭೆಯೊಂದರಲ್ಲಿ ಓಪನ್ ಚಾಲೆಂಜ್​ ಹಾಕಿದ ಅಣ್ಣಾಮಲೈ ಕ್ಷೇತ್ರದಲ್ಲಿ ಈ ಬಾರಿ ಡಿಎಂಕೆ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಡಲಿದೆ. ಈ ಬಾರಿ ಗೆಲುವು ನಿಮ್ಮದಲ್ಲ. ನಮ್ಮದೇ ಎಂದು ಡಿಎಂಕೆ ಹಾಲಿ ಶಾಸಕ ಸೆಂಥಿಲ್​ಗೆ ಹೇಳುವ ಮೂಲಕ ಪರೋಕ್ಷವಾಗಿ ಕ್ಷೇತ್ರದ ಅಭ್ಯರ್ಥಿ ತಾವೇ ಎಂಬ ಸುಳಿವು ನೀಡಿದ್ದಾರೆ ಅಣ್ಣಾಮಲೈ.

ಅರವಾಕುರಿಚಿ ಕ್ಷೇತ್ರದ ಮತದಾರರು ಕಳೆದ 53 ವರ್ಷಗಳಿಂದ ದ್ರಾವಿಡ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಆದರೆ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ. ಜವಳಿ ಕ್ಷೇತ್ರದ ಅಗ್ರಗಣ್ಯನೆನಿಸಿರುವ ತಿರುಪ್ಪೂರ್​ ಅನ್ನು ಮೀರಿಸಿ ಬೆಳೆಯುವ ಎಲ್ಲ ಅವಕಾಶಗಳೂ ಈ ಅರವಾಕುರಿಚಿಗೆ ಇದೆ. ಆದರೆ ದ್ರಾವಿಡ ಅಭ್ಯರ್ಥಿಗಳಿಗೆ ಕ್ಷೇತ್ರದ ಅಭಿವೃದ್ಧಿ ಬೇಕಾಗಿರಲಿಲ್ಲ ಎಂದು ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ಅಣ್ಣಾಮಲೈ ಸಭೆಯಲ್ಲಿ ಕಿಡಿಕಾರಿದರು.

ಮುಂದಿನ ತಿಂಗಳು ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು AIADMK ಮತ್ತು BJP ಮಧ್ಯೆ ಮೈತ್ರಿ ಏರ್ಪಟ್ಟಿದೆ. ಅದರಂತೆ ಆಡಳಿತಾರೂಢ ಎಐಎಡಿಎಂಕೆ ಪಕ್ಷವು ಬಿಜೆಪಿಗೆ 20 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಅದರಲ್ಲಿ ಅರವಾಕುರಿಚಿ ಕ್ಷೇತ್ರವೂ ಒಂದಾಗಿದೆ. ಅಣ್ಣಾಮಲೈ ಈ ಮೊದಲು ಕಿನತುಕೊಡವು ಕ್ಷೇತ್ರದಿಂದ ಸ್ಪರ್ಧಿಸಬಯಸಿದ್ದಾರಾದರೂ ಪಕ್ಷದ ಎಣಿಕೆ ಬೇರೆಯೇ ಆಗಿದ್ದು, ಇದೀಗ ಅರವಾಕುರಿಚಿ ಕ್ಷೇತ್ರದಿಂದ ಕಣಕ್ಕಿಳಿಯುವುದು ದಿಟವಾಗಿದೆ.ಇನ್ನು ತಾರಾ ನಟಿಯರಾದ ಅವರು ಖುಷ್ಬು ಛೆಪಾಕ್​-ತಿರುವಳ್ಳಿಕೇಣಿ ಕ್ಷೇತ್ರದಿಂದಲೂ ಮತ್ತು ಗೌತಮಿ ಅವರು ರಾಜಪಾಳ್ಯಂ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ.

ಇದನ್ನೂ ಓದಿ:  ಅವರು ಹೇಳಿದ್ದಕ್ಕೆ ರಾಜೀನಾಮೆ ಕೊಟ್ಟೆ -ಕೊನೆಗೂ ರಹಸ್ಯ ಬಿಚ್ಚಿಟ್ಟ ಕರುನಾಡ ‘ಸಿಂಗಂ’ ಅಣ್ಣಾಮಲೈ!

Published On - 1:35 pm, Fri, 12 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್