75 years of India’s Independence: ಆತ್ಮನಿರ್ಭರ ಭಾರತದ ಮೂಲಕ ಗಾಂಧೀಜಿಯವರ ಕನಸು ನನಸಾಗಿಸೋಣ: ಪ್ರಧಾನಿ ಕರೆ

75 years of India's Independence Celebration: ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಘೋಷಿಸಿದ್ದ ‘ದೆಲ್ಲಿ ಚಲೋ’, ‘ಕ್ವಿಟ್ ಇಂಡಿಯಾ’ ( ಭಾರತ ಬಿಟ್ಟು ತೊಲಗಿ), ‘ಪೂರ್ಣ ಸ್ವರಾಜ್ಯ’ದಂತಹ ಘೋಷಣೆಗಳನ್ನು ನಾವೆಂದಿಗೂ ಮರೆಯಬಾರದು ಎಂದು ಪ್ರಧಾನಿಗಳು ತಿಳಿಸಿದರು.

75 years of India's Independence: ಆತ್ಮನಿರ್ಭರ ಭಾರತದ ಮೂಲಕ ಗಾಂಧೀಜಿಯವರ ಕನಸು ನನಸಾಗಿಸೋಣ: ಪ್ರಧಾನಿ ಕರೆ
ಗಾಂಧಿ ಚರಕ ವೀಕ್ಷಣೆ ನಿರತ ಪ್ರಧಾನಿ
Follow us
guruganesh bhat
|

Updated on:Mar 12, 2021 | 1:26 PM

ಅಹಮದಾಬಾದ್: ಆತ್ಮನಿರ್ಭರ ಭಾರತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಆತ್ಮನಿರ್ಭರ ಭಾರತವನ್ನು ಪೂರೈಸುವ ಮೂಲಕ ಬಾಪುಗೆ ಗೌರವ ಸಲ್ಲಿಸೋಣ. ಮಹಾತ್ಮ ಗಾಂಧೀಜಿಯ ದಂಡಿಯಾತ್ರೆ ದೇಶದ ಜನರನ್ನ ಒಗ್ಗೂಡಿಸಿತ್ತು. ಅಂತೆಯೇ ಇಂದಿನಿಂದ ಆರಂಭವಾಗಲಿರುವ ಪಾದಯಾತ್ರೆ ನಮ್ಮಲ್ಲಿ ಐಕ್ಯತೆಯ ಭಾವ ಮೂಡಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಗುಜರಾತ್‌ನ‌ ಅಹಮದಾಬಾದ್‌ನಲ್ಲಿನ ಸಾಬರಮತಿ (SABARAMATI) ಆಶ್ರಮದಿಂದ ಆರಂಭಗೊಳ್ಳಲಿರುವ 23 ದಿನಗಳ ಪಾದಯಾತ್ರೆಗೆ ಚಾಲನೆ ನೀಡಿದ ಅವರು ಮಹಾತ್ಮ ಗಾಂಧೀಜಿಯವರ ಕೊಡುಗೆಗಳನ್ನು ಸ್ಮರಿಸಿಕೊಂಡರು. 81 ಸ್ವಯಂ ಸೇವಕರ ಕೈಗೊಳ್ಳಲಿರುವ 386 ಕಿಲೋಮೀಟರ್ ಪಾದಯಾತ್ರೆ ಏಪ್ರಿಲ್ 6ರಂದು ದಂಡಿ ತಲುಪಲಿದೆ.

ಮುಂದಿನ ವರ್ಷ ಸ್ವಾತಂತ್ರ್ಯ ದೊರೆತು 75 ವರ್ಷವಾಗಲಿದೆ. ಈ ಸಂದರ್ಭ ದೇಶಕ್ಕೆ ಗೌರವದಾಯಕ, ಐತಿಹಾಸಿಕ ಸಮಯವಾಗಿದ್ದು, ಇಂದಿನಿಂದ ಚರಕ ಅಭಿಯಾನವನ್ನೂ ಆರಂಭಿಸಲಾಗಿದೆ. 2023ರವರೆಗೂ ಅಮೃತ ಮಹೋತ್ಸವ ಕಾರ್ಯಕ್ರಮ ದೇಶಾದ್ಯಂತ ಜರುಗಲಿದ್ದು, ದೇಶಕ್ಕಾಗಿ ಬಲಿದಾನ ಮಾಡಿದವರಿಗೆ ನಾನು ನಮಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಭಾರತದ ಸ್ವಾತಂತ್ರ್ಯ ಹೋರಾಟ ಬಗ್ಗೆ ಜನತೆ ಅರಿತುಕೊಳ್ಳಬೇಕಿದೆ. 75ನೇ ಸ್ವಾತಂತ್ರ್ಯೋತ್ಸವ ಒಂದು ಐತಿಹಾಸಿಕ ಉತ್ಸವವಾಗಿದ್ದು, 75ನೇ ಸ್ವಾತಂತ್ರ್ಯೋತ್ಸವವನ್ನು ನಾವೆಲ್ಲರೂ ಸಂಭ್ರಮಿಸಬೇಕು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಘೋಷಿಸಿದ್ದ ‘ದೆಲ್ಲಿ ಚಲೋ’, ‘ಕ್ವಿಟ್ ಇಂಡಿಯಾ’ ( ಭಾರತ ಬಿಟ್ಟು ತೊಲಗಿ), ‘ಪೂರ್ಣ ಸ್ವರಾಜ್ಯ’ದಂತಹ ಘೋಷಣೆಗಳನ್ನು ನಾವೆಂದಿಗೂ ಮರೆಯಬಾರದು ಎಂದು ಪ್ರಧಾನಿಗಳು ತಿಳಿಸಿದರು.

PM Modi Sabaramati

ಪಾದಯಾತ್ರೆಗೆ ಚಾಲನೆ ನಿಡಿದ ಪ್ರಧಾನಿ

2021 ದಂಡಿ ಪಾದಯಾತ್ರೆಯಲ್ಲಿ ಯಾರೆಲ್ಲ ಇರಲಿದ್ದಾರೆ? ಗುಜರಾತ್​ನ ರಾಜ್ಯ ಕ್ರೀಡಾ ಸಚಿವ ಈಶ್ವರ್​ ಸಿನ್ಹ ಅವರು ತಿಳಿಸಿದಂತೆ, 1930 ರಲ್ಲಿ ಗಾಂಧಿಯವರೊಂದಿಗೆ ದಂಡಿಯಾತ್ರೆಯಲ್ಲಿ ಭಾಗವಹಿಸಿದ್ದವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ಆದರೆ ಅವರಿಗೆ ವಯಸ್ಸಾಗಿರುವ ಕಾರಣ ಅವರು ಈ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಇನ್ನುಳಿದಂತೆ ಗಾಂಧಿಯವರೊಂದಿಗೆ ಯಾತ್ರೆಯಲ್ಲಿ ಭಾಗವಹಿಸಿದ್ದ 78 ಜನರ ಸವಿನೆನಪಿಗಾಗಿ ಅಹಮದಾಬಾದ್​ನಿಂದ ದಂಡಿವರೆಗಿನ ಸುಮಾರು 386 ಕಿ.ಮೀ ಪಾದಯಾತ್ರೆಯಲ್ಲಿ 81 ಜನರು ಭಾಗಿಯಾಗಲಿದ್ದಾರೆ. ಅಲ್ಲದೆ ಇನ್ನೂ ಇಬ್ಬರು ಮಾರ್ಗ ಮಧ್ಯದಲ್ಲಿ ಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ.

ಮುಂದಿನ ವರ್ಷ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷ ತುಂಬುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ  1930ರ ಮಾರ್ಚ್ 12ರಂದು ಆರಂಭವಾದ ದಂಡಿಯಾತ್ರೆಯ ಪ್ರಭಾವ ಬಹಳ ಅಮೂಲ್ಯವಾದದ್ದು. ಈ ಯಾತ್ರೆ ಬರೋಬ್ಬರಿ 24 ದಿನಗಳ ಕಾಲ ನಡೆಯಿತು. ಗಾಂಧೀಜಿಯವರ ಸಬರಮತಿ ಆಶ್ರಮದಿಂದ ದಂಡಿಯವರೆಗೆ ನಡೆದ ಈ ಯಾತ್ರೆ ದೇಶದ ಸ್ವಾತಂತ್ರ್ಯ ಚಳವಳಿಗೆ ಬಲ ನೀಡಿತು. ಸಮುದ್ರ ತೀರದಲ್ಲಿ ವಾಸಿಸುವವರಿಗೆ ಸಹಜವಾಗಿ ಉಚಿತವಾಗಿ ಉಪ್ಪು ದೊರೆಯುತ್ತಿತ್ತು. ಆದರೆ, ಬ್ರಿಟಿಷರು ಹೊರತಂದ ಕಾನೂನಿನ ಪ್ರಕಾರ ಅವರೂ ಸಹ ಸಮುದ್ರದ ಉಪ್ಪನ್ನು ಬಳಸುವಂತಿರಲಿಲ್ಲ. ಈ ನಿಯಮವನ್ನು ಮುರಿಯಲೆಂದೇ ಗಾಂಧೀಜಿಯವರು ದಂಡಿ ಯಾತ್ರೆ ಕೈಗೊಂಡರು.

ದಂಡಿ ಯಾತ್ರೆಯ ಹಿಂದಿನ ಕಾರಣವೇನು? ದಂಡಿ ಯಾತ್ರೆ ಆರಂಭಕ್ಕೆ ಒಂದು ಮಹತ್ತರವಾದ ಕಾರಣವಿದೆ. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿ ಸಾಂಪ್ರದಾಯಿಕವಾಗಿ ಭಾರತೀಯರು ಉಪ್ಪಿನ ಉತ್ಪಾದನೆ ಮಾಡುತ್ತಿದ್ದರು. ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಜೀವನೋಪಾಯದ ದಾರಿ ಕಂಡುಕೊಂಡಿದ್ದರು. ಆದರೆ ಬ್ರಿಟಿಷ್ ಆಳ್ವಿಕೆ ಉಪ್ಪಿನ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವ ಕಾನೂನು ಜಾರಿಗೆ ತಂದಿತು. ಅಲ್ಲದೇ ಗಣನೀಯ ಪ್ರಮಾಣದಲ್ಲಿ ಉಪ್ಪಿನ ಮೇಲೆ ತೆರಿಗೆ ವಿಧಿಸಿತು.

ಉಪ್ಪಿನ ಮೇಲಿನ ಈ ಕಾನೂನನ್ನು ಮುರಿಯಲೆಂದೇ ಮಹಾತ್ಮಾ ಗಾಂಧೀಜಿಯವರು ದಂಡಿ ಯಾತ್ರೆ ಕೈಗೊಂಡರು. ಸಬರಮತಿಯಿಂದ ಹೊರಟು, ದಂಡಿಯಲ್ಲಿ ಉಪ್ಪು ತಯಾರಿಸಿ ಬ್ರಿಟಿಷ್ ಕಾನೂನಿಗೆ ಭಂಗ ತಂದರು. ಈ ಯಾತ್ರೆಯಲ್ಲಿ ಗಾಂಧೀಜಿಯವರ ಜತೆ ಸಾವಿರಾರು ಸತ್ಯಾಗ್ರಹಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: Dandi March: 5 ಅಂಶಗಳಲ್ಲಿ ಐತಿಹಾಸಿಕ ದಂಡಿ ಯಾತ್ರೆಯ ಬಗ್ಗೆ ತಿಳಿದುಕೊಳ್ಳಿ

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ: ಚಿಕ್ಕಬಳ್ಳಾಪುರದ ವಿದುರಾಶ್ವತ್ಥದಲ್ಲಿ ರಾಜ್ಯಪಾಲರಿಂದ ಕಾರ್ಯಕ್ರಮಕ್ಕೆ ಚಾಲನೆ

Published On - 1:18 pm, Fri, 12 March 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್