Dandi March: 5 ಅಂಶಗಳಲ್ಲಿ ಐತಿಹಾಸಿಕ ದಂಡಿ ಯಾತ್ರೆಯ ಬಗ್ಗೆ ತಿಳಿದುಕೊಳ್ಳಿ
Dandi March (Salt March) History: ಸಮುದ್ರ ತೀರದಲ್ಲಿ ವಾಸಿಸುವವರಿಗೆ ಸಹಜವಾಗಿ ಉಚಿತವಾಗಿ ಉಪ್ಪು ದೊರೆಯುತ್ತಿತ್ತು. ಆದರೆ, ಬ್ರಿಟಿಷರು ಹೊರತಂದ ಕಾನೂನಿನ ಪ್ರಕಾರ ಅವರೂ ಸಹ ಸಮುದ್ರದ ಉಪ್ಪನ್ನು ಬಳಸುವಂತಿರಲಿಲ್ಲ. ಈ ನಿಯಮವನ್ನು ಮುರಿಯಲೆಂದೇ ಗಾಂಧೀಜಿಯವರು ದಂಡಿ ಯಾತ್ರೆ ಕೈಗೊಂಡರು.
ಮುಂದಿನ ವರ್ಷ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷ ತುಂಬುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ 1930ರ ಮಾರ್ಚ್ 12ರಂದು ಆರಂಭವಾದ ದಂಡಿಯಾತ್ರೆಯ ಪ್ರಭಾವ ಬಹಳ ಅಮೂಲ್ಯವಾದದ್ದು. ಈ ಯಾತ್ರೆ ಬರೋಬ್ಬರಿ 24 ದಿನಗಳ ಕಾಲ ನಡೆಯಿತು. ಗಾಂಧೀಜಿಯವರ ಸಬರಮತಿ ಆಶ್ರಮದಿಂದ ದಂಡಿಯವರೆಗೆ ನಡೆದ ಈ ಯಾತ್ರೆ ದೇಶದ ಸ್ವಾತಂತ್ರ್ಯ ಚಳವಳಿಗೆ ಬಲ ನೀಡಿತು. ಸಮುದ್ರ ತೀರದಲ್ಲಿ ವಾಸಿಸುವವರಿಗೆ ಸಹಜವಾಗಿ ಉಚಿತವಾಗಿ ಉಪ್ಪು ದೊರೆಯುತ್ತಿತ್ತು. ಆದರೆ, ಬ್ರಿಟಿಷರು ಹೊರತಂದ ಕಾನೂನಿನ ಪ್ರಕಾರ ಅವರೂ ಸಹ ಸಮುದ್ರದ ಉಪ್ಪನ್ನು ಬಳಸುವಂತಿರಲಿಲ್ಲ. ಈ ನಿಯಮವನ್ನು ಮುರಿಯಲೆಂದೇ ಗಾಂಧೀಜಿಯವರು ದಂಡಿ ಯಾತ್ರೆ ಕೈಗೊಂಡರು.
ದಂಡಿ ಯಾತ್ರೆಯ ಹಿಂದಿನ ಕಾರಣವೇನು? ದಂಡಿ ಯಾತ್ರೆ ಆರಂಭಕ್ಕೆ ಒಂದು ಮಹತ್ತರವಾದ ಕಾರಣವಿದೆ. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿ ಸಾಂಪ್ರದಾಯಿಕವಾಗಿ ಭಾರತೀಯರು ಉಪ್ಪಿನ ಉತ್ಪಾದನೆ ಮಾಡುತ್ತಿದ್ದರು. ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಜೀವನೋಪಾಯದ ದಾರಿ ಕಂಡುಕೊಂಡಿದ್ದರು. ಆದರೆ ಬ್ರಿಟಿಷ್ ಆಳ್ವಿಕೆ ಉಪ್ಪಿನ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವ ಕಾನೂನು ಜಾರಿಗೆ ತಂದಿತು. ಅಲ್ಲದೇ ಗಣನೀಯ ಪ್ರಮಾಣದಲ್ಲಿ ಉಪ್ಪಿನ ಮೇಲೆ ತೆರಿಗೆ ವಿಧಿಸಿತು.
ಸಾವಿರಾರು ಅನುಯಾಯಿಗಳು ಜತೆಯಾದರು ಉಪ್ಪಿನ ಮೇಲಿನ ಈ ಕಾನೂನನ್ನು ಮುರಿಯಲೆಂದೇ ಮಹಾತ್ಮಾ ಗಾಂಧೀಜಿಯವರು ದಂಡಿ ಯಾತ್ರೆ ಕೈಗೊಂಡರು. ಸಬರಮತಿಯಿಂದ ಹೊರಟು, ದಂಡಿಯಲ್ಲಿ ಉಪ್ಪು ತಯಾರಿಸಿ ಬ್ರಿಟಿಷ್ ಕಾನೂನಿಗೆ ಭಂಗ ತಂದರು. ಈ ಯಾತ್ರೆಯಲ್ಲಿ ಗಾಂಧೀಜಿಯವರ ಜತೆ ಸಾವಿರಾರು ಸತ್ಯಾಗ್ರಹಿಗಳು ಭಾಗವಹಿಸಿದ್ದರು.
ಮೇ 4 ರಂದು ದಂಡಿಯಲ್ಲಿ ಉಪ್ಪು ತಯಾರಿಸಿ ಕಾನೂನು ಮುರಿದ ಕಾರಣ ಮಹಾತ್ಮಾ ಗಾಂಧೀಜಿಯವರನ್ನು ಬಂಧಿಸಲಾಯಿತು. ದಂಡಿಯಲ್ಲಿ ಗಾಂಧೀಜಿಯವರು ಒಂದು ಹಿಡಿಯಷ್ಟು ಮಣ್ಣು ಮತ್ತು ಉಪ್ಪನ್ನು ತೆಗೆದುಕೊಂಡು ‘ಈ ಮೂಲಕ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನು ನಾನು ಅಲುಗಾಡಿಸುತ್ತಿದ್ದೇನೆ” ಎಂದು ಘೋಷಿಸಿದರು. ನಂತರ ನೆರೆದಿದ್ದ ಸಹಸ್ರಾರು ಅನುಯಾಯಿಗಳಿಗೆ ‘ನಿಮಗೆ ಎಲ್ಲಿ ಸಾಧ್ಯವೋ, ಹೇಗೆ ಸಾಧ್ಯವೋ ಅಲ್ಲಿ ಉಪ್ಪನ್ನು ತಯಾರಿಸಿ’ ಎಂದು ಕರೆ ನೀಡಿದರು.
ದೇಶದಾದ್ಯಂತ ಚಳುವಳಿಯ ಪರಿಣಾಮ ವ್ಯಾಪಿಸಿತು. ಗಾಂದಿಜಿಯವರಿಂದ ಪ್ರೇರಿತರಾಗಿ ಸಾವಿರಾರು ಜನರು ಉಪ್ಪು ತಯಾರಿಸಿದರು. ಈ ಮೂಲಕ ಬ್ರಿಟಿಷ್ ಕಾನೂನು ಮುರಿದರು. ಜತೆಗೆ, ಇತರ ಬ್ರಿಟಿಷ್ ಸರಕುಗಳನ್ನೂ ಭಾರತೀಯರು ಕೊಳ್ಳುವುದನ್ನು ನಿಲ್ಲಿಸಿದರು. ಕಾನೂನು ಬಾಹಿರವಾಗಿ ಉಪ್ಪನ್ನು ಮಾರಿದ ಹಾಗು ಖರೀದಿಸಿದ ಸಾವಿರಾರು ನಾಗರಿಕರನ್ನು ಬ್ರಿಟಿಷ್ ಸರ್ಕಾರ ಬಂಧಿಸಿತು. ಈ ಚಳವಳಿ ತೀವ್ರಗೊಂಡು ದೇಶದ ಎಲ್ಲೆಡೆ ದಂಡಿ ಯಾತ್ರೆಯ ಚಳವಳಿ ಸತ್ಯಾಗ್ರಹವಾಗಿ ಹರಡಿತು.
#WATCH Celebrations as part of ‘Azadi ka Amrit Mahotsav’ underway at Ahmedabad, Gujarat pic.twitter.com/S51d3J9lIk
— ANI (@ANI) March 12, 2021
Gujarat: Prime Minister Narendra Modi sees pictures, magazines & other collections at a special exhibition near Abhay Ghat in Ahmedabad, as part of Amrit Mahotsav programme. pic.twitter.com/hvat05ftaw
— ANI (@ANI) March 12, 2021
ಇದನ್ನೂ ಓದಿ: Dandi March: 21 ದಿನಗಳ ದಂಡಿಯಾತ್ರೆಗೆ ಮಾರ್ಚ್ 12ರಂದು ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ
Published On - 12:15 pm, Fri, 12 March 21