ಅವರು ಹೇಳಿದ್ದಕ್ಕೆ ರಾಜೀನಾಮೆ ಕೊಟ್ಟೆ -ಕೊನೆಗೂ ರಹಸ್ಯ ಬಿಚ್ಚಿಟ್ಟ ಕರುನಾಡ ‘ಸಿಂಗಂ’ ಅಣ್ಣಾಮಲೈ!

ಸಿದ್ಧಾರ್ಥ ಅಣ್ಣ ರಾಜೀನಾಮೆ ಕೊಡಲು ಸಲಹೆ ನೀಡಿದ್ದರು. ಧೈರ್ಯವಾಗಿ ರಾಜೀನಾಮೆ ಕೊಡು ನಾನಿದ್ದೇನೆ ಎಂದರು. ಹೀಗಾಗಿ, ರಾಜೀನಾಮೆ ದಿನವನ್ನೂ ಇಬ್ಬರು ಕುಳಿತು ನಿಗದಿಪಡಿಸಿದ್ವಿ.

ಅವರು ಹೇಳಿದ್ದಕ್ಕೆ ರಾಜೀನಾಮೆ ಕೊಟ್ಟೆ -ಕೊನೆಗೂ ರಹಸ್ಯ ಬಿಚ್ಚಿಟ್ಟ ಕರುನಾಡ ‘ಸಿಂಗಂ’ ಅಣ್ಣಾಮಲೈ!
ಮಾಜಿ IPS ಅಧಿಕಾರಿ K. ಅಣ್ಣಾಮಲೈ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jan 01, 2021 | 4:49 PM

ಚಿಕ್ಕಮಗಳೂರು: ಕರುನಾಡ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ IPS ಅಧಿಕಾರಿ ಅಣ್ಣಾಮಲೈ ಕೊನೆಗೂ ತಾವು ರಾಜೀನಾಮೆ ನೀಡಿದ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕಾಫೀ ಡೇ ಮಾಲೀಕ ದಿ. ಸಿದ್ಧಾರ್ಥ ಹೆಗಡೆ ಪುತ್ಥಳಿ ಲೋಕಾರ್ಪಣೆ ಮಾಡಿದ ವೇಳೆ ತಾವು ರಾಜೀನಾಮೆ ನೀಡಿದ ಕಾರಣವನ್ನು ಬಯಲು ಮಾಡಿದ್ದಾರೆ.

ಉದ್ಯಮಿ ಸಿದ್ಧಾರ್ಥ ಅಣ್ಣ ಹೇಳಿದ್ದಕ್ಕೆ ರಾಜೀನಾಮೆ ನೀಡಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಡಿಐಜಿ ಆಗಿ, ಐಜಿ ಆಗಿ ಕೆಲಸ ಮಾಡುವುದಕ್ಕೆ ನನಗೆ ಆಸಕ್ತಿಯಿರಲಿಲ್ಲ. AC ರೂಂ​ನಲ್ಲಿ ಕುಳಿತು ಕೆಲಸ ಮಾಡಲು ಆಸಕ್ತಿ ಇರಲಿಲ್ಲ. ನನಗೆ ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರುವ ಉದ್ದೇಶವಿತ್ತು. ಹಾಗಾಗಿ, ರಾಜೀನಾಮೆ ಕೊಡಬೇಕಾ, ಬೇಡ್ವಾ? ಎಂಬ ಗೊಂದಲದಲ್ಲಿದ್ದೆ ಎಂದು ತಮ್ಮ ಪೊಲೀಸ್​ ಸೇವೆಯ ದಿನಗಳ ಬಗ್ಗೆ ಅಣ್ಣಾಮಲೈ ಹೇಳಿದರು.

‘ಧೈರ್ಯವಾಗಿ ರಾಜೀನಾಮೆ ಕೊಡು ನಾನಿದ್ದೇನೆ ಎಂದರು’ ಈ ವೇಳೆ, ಸಿದ್ಧಾರ್ಥ ಅಣ್ಣ ರಾಜೀನಾಮೆ ಕೊಡಲು ಸಲಹೆ ನೀಡಿದ್ದರು. ಧೈರ್ಯವಾಗಿ ರಾಜೀನಾಮೆ ಕೊಡು ನಾನಿದ್ದೇನೆ ಎಂದರು. ಹೀಗಾಗಿ, ರಾಜೀನಾಮೆ ದಿನವನ್ನೂ ಇಬ್ಬರೂ ಕುಳಿತು ನಿಗದಿಪಡಿಸಿದ್ವಿ. ಜೊತೆಗೆ, ರಾಜೀನಾಮೆ ಬಳಿಕ ಜನ ನಿಮ್ಮನ್ನ ಮೂರ್ಖರು ಅನ್ನಬಹುದು. ಆದ್ರೆ ನಿಮ್ಮ ಉದ್ದೇಶ ನನಗೆ ಗೊತ್ತು.. ಮುಂದುವರಿಯಿರಿ ಅಂದಿದ್ರು ಎಂದು ಅಣ್ಣಾಮಲೈ ರಾಜೀನಾಮೆ ನೀಡಿದ ಹಿಂದಿನ ಅಸಲಿ ಸತ್ಯ ಹೊರಹಾಕಿದ್ದಾರೆ.

ಮಾಜಿ IPS​ ಅಧಿಕಾರಿ ಅಣ್ಣಾಮಲೈ ಚೆನ್ನೈನಿಂದ ಆಗಮಿಸಿ ದಿ. ಸಿದ್ಧಾರ್ಥ ಹೆಗಡೆ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ, ಡಾ. ನಿರ್ಮಲಾನಂದನಾಥ ಸ್ವಾಮೀಜಿರಿಂದ ಪುತ್ಥಳಿಯ ಲೋಕಾರ್ಪಣೆ ಸಾಂಗವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಹ ಉಪಸ್ಥಿತರಿದ್ದರು.

ಅಣ್ಣಾಮಲೈ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಜನ! ಈ ನಡುವೆ, ಅಣ್ಣಾಮಲೈ ಮಾಜಿ ಅಧಿಕಾರಿ ಆಗಿದ್ರೂ ಸಾರ್ವಜನಿಕರಲ್ಲಿ ಅವರ ಬಗ್ಗೆ ಇರುವ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ಇದರಲ್ಲಿ ಪೊಲೀಸರು ಸಹ ಉಂಟು. ಹೌದು, ಮಾಜಿ ಅಧಿಕಾರಿಯನ್ನು ಕಂಡ ಕೂಡಲೇ ಜನಸಾಮಾನ್ಯರು ಮತ್ತು ಪೊಲೀಸರು ನಾ ಮುಂದು ತಾ ಮುಂದು ಎಂದು ಅಣ್ಣಾಮಲೈ ಒಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಪ್ಲೀಸ್ ಸರ್, ಒಂದು ಸೆಲ್ಫಿ ಅಂತಾ ಫೋಟೋ ಕ್ಲಿಕ್ಕಿಸಿಕೊಂಡರು. ಕಾಡಿ ಬೇಡಿ, ಫೋಟೋ ತೆಗೆಸಿಕೊಂಡರು. ಹಾಗಾಗಿ, ಸೆಲ್ಫಿಗೆ ಫೋಸ್ ಕೊಟ್ಟು ಅಣ್ಣಾಮಲೈ ಸುಸ್ತು ಹೊಡೆದಿದ್ದಂತೂ ನಿಜ.

ಸಿಎಂ ಆದವರು ನಾನೇ ಇನ್ನು 2 ವರ್ಷ ಅಧಿಕಾರದಲ್ಲಿರುತ್ತೇನೆ ಎಂದು ಹೇಳುವ ಅಗತ್ಯವೇನಿದೆ? ಡಿ.ಕೆ. ಶಿವಕುಮಾರ್ ಪ್ರಶ್ನೆ

Published On - 4:46 pm, Fri, 1 January 21