Assembly Election 2021: ಚುನಾವಣೆ ಪೂರ್ವ ವಿಶಿಷ್ಟವಾದ ಮೊಬೈಲ್​ ಆ್ಯಪ್​ ಬಿಡುಗಡೆ; ಡೆಮೊಕ್ರಟಿಕಾ ಸ್ಟಾರ್ಟ್​ಅಪ್​ನಿಂದ ಹೊಸ ಪ್ರಯೋಗ

ಮತದಾನ ಪ್ರಮಾಣ ಹೆಚ್ಚು ಮಾಡಲು, ಮತದಾರರನ್ನು ಹೆಚ್ಚೆಚ್ಚು ಚುನಾವಣೆಯಲ್ಲಿ ತೊಡಗಿಸಿಕೊಳ್ಳಲು ಚುನಾವಣಾ ಆಯೋಗ ಪ್ರಯತ್ನ ಮಾಡುತ್ತದೆ ಹೊರತಾಗಿ, ಯಾವುದೇ ರಾಜಕೀಯ ಪಕ್ಷಗಳು ಹೆಚ್ಚಾಗಿ ಪ್ರಯತ್ನ ಮಾಡಿಲ್ಲ ಎಂದು ಸ್ಟಾರ್ಟ್​ಅಪ್​ ಅಭಿಪ್ರಾಯಪಟ್ಟಿದೆ.

Assembly Election 2021: ಚುನಾವಣೆ ಪೂರ್ವ ವಿಶಿಷ್ಟವಾದ ಮೊಬೈಲ್​ ಆ್ಯಪ್​ ಬಿಡುಗಡೆ; ಡೆಮೊಕ್ರಟಿಕಾ ಸ್ಟಾರ್ಟ್​ಅಪ್​ನಿಂದ ಹೊಸ ಪ್ರಯೋಗ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Mar 13, 2021 | 2:44 PM

ಕೋಲ್ಕತ್ತ: ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸ್ಟಾರ್ಟ್​ಅಪ್​ ಸಂಸ್ಥೆಯೊಂದು ಮೊಬೈಲ್​ ಅಪ್ಲಿಕೇಶನ್​​ವೊಂದನ್ನು ಅನಾವರಣಗೊಳಿಸಿದ್ದು, ಇದು ಮತದಾನ ಪೂರ್ವ ಸಮೀಕ್ಷೆ, ಹಿಂದಿನ ಚುನಾವಣೆಗಳ ಅಂಕಿ-ಅಂಶ ಹಾಗೂ ದೇಶದ ಆರ್ಥಿಕತೆಗೆ ಸಂಬಂಧಪಟ್ಟ ದತ್ತಾಂಶಗಳನ್ನು ಒಳಗೊಂಡಿರುವ ಆ್ಯಪ್​ ಆಗಿದೆ. ಇಂಥದ್ದೊಂದು ವಿಶೇಷ ಆ್ಯಪ್ BolSubol​ನ್ನು ಹೊರತಂದ ಸ್ಟಾರ್ಟ್​ಅಪ್​ ಹೆಸರು ಡೆಮೋಕ್ರಟಿಕಾ. ಈ ಆ್ಯಪ್​​ನಲ್ಲಿ ​ಭಾರತದ ಎಲ್ಲ ವಿಧಾನಸಭಾ ಕ್ಷೇತ್ರಗಳ, ಸರಾಸರಿ 60ವರ್ಷಗಳ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ, ಮಾಹಿತಿಗಳನ್ನು ಒಳಗೊಂಡಿದೆ ಎಂದು ಸ್ಟಾರ್ಟ್​ಅಪ್​ ಅಧಿಕಾರಿಗಳು ತಿಳಿಸಿದ್ದಾರೆ.

ಮತದಾನ ಪ್ರಮಾಣ ಹೆಚ್ಚು ಮಾಡಲು, ಮತದಾರರನ್ನು ಹೆಚ್ಚೆಚ್ಚು ಚುನಾವಣೆಯಲ್ಲಿ ತೊಡಗಿಸಿಕೊಳ್ಳಲು ಚುನಾವಣಾ ಆಯೋಗ ಪ್ರಯತ್ನ ಮಾಡುತ್ತದೆ ಹೊರತಾಗಿ, ಯಾವುದೇ ರಾಜಕೀಯ ಪಕ್ಷಗಳು ಹೆಚ್ಚಾಗಿ ಪ್ರಯತ್ನ ಮಾಡಿಲ್ಲ. ಮತದಾರರಲ್ಲಿ ಅರಿವು ಮೂಡಿಸುವ ಸಲುವಾಗಿ, ಮತದಾನದ ಮಹತ್ವ ತಿಳಿಸುವ ಜತೆಗೆ, ಮತದಾನಕ್ಕೆ ಮಾನದಂಡ ಯಾವುದು ಇರಬೇಕು ಎಂಬುದನ್ನು ತಿಳಿಸುವ ಪ್ರಯತ್ನವಾಗಿ ಆ್ಯಪ್​ ಬಿಡುಗಡೆ ಮಾಡಲಾಗಿದೆ ಎಂದು ಸ್ಟಾರ್ಟ್​ ಅಪ್​ನ ನಿರ್ದೇಶಕರಲ್ಲಿ ಒಬ್ಬರಾದ ರಿತೇಶ್ ವರ್ಮಾ ತಿಳಿಸಿದ್ದಾರೆ.

ಚುನಾವಣಾ ಕ್ಷೇತ್ರಕ್ಕೆ ಸಂಬಂಧಪಟ್ಟಿರುವ ಅನೇಕ ಡಿಜಿಟಲ್​ ಪ್ಲಾಟ್​ಫಾರಂಗಳು ಸೋಷಿಯಲ್​ ನೆಟ್ವರ್ಕ್​ ಆ್ಯಪ್​ಗಳಾಗಿವೆ. ಇವುಗಳಿಂದ ಮತದಾರರಿಗೆ ಅಷ್ಟೇನೂ ಸಹಾಯ ಆಗುವುದಿಲ್ಲ. ನಿರ್ದಿಷ್ಟ ಕ್ಷೇತ್ರಗಳ ವಾಸ್ತವಾಂಶವನ್ನು ತಿಳಿಸುವುದಿಲ್ಲ. ಇದರಿಂದಾಗಿ ಜನರಿಗೆ ಮತ ಹಾಕುವ ಸಂದರ್ಭದಲ್ಲಿ ಸತ್ಯ ಆಧಾರಿತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಆ್ಯಪ್​ನಲ್ಲಿ ಮತದಾರರಿಗೆ ವಾಸ್ತವ ನೆಲೆಗಟ್ಟು ಅರ್ಥ ಮಾಡಿಸಲು ಪ್ರಯತ್ನ ಮಾಡಲಾಗಿದ್ದು, ಅವರಿಗೆ ಖಂಡಿತ ಸಹಾಯವಾಗಲಿದೆ ಎಂದು ಇನ್ನೊಬ್ಬ ನಿರ್ದೇಶಕ ಶೇಷಗಿರಿ ಆನೆಗೊಂದಿ ತಿಳಿಸಿದ್ದಾರೆ. ಮೊಬೈಲ್​​ನಲ್ಲಿ ಬಹುತೇಕ ಫೀಚರ್​ಗಳು ಉಚಿತವಾಗಿದ್ದು, ಇನ್ನು ಕೆಲವು ಫೀಚರ್​ಗಳಿಗೆ ಬಳಕೆದಾರರು ಶುಲ್ಕ ನೀಡಬೇಕು ಎಂದೂ ಮಾಹಿತಿ ನೀಡಿದ್ದಾರೆ.

ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಏಪ್ರಿಲ್​ 6ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಆಸ್ಸಾಂನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಮಾರ್ಚ್ 27ರಂದು ನಡೆಯಲಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್​ 27ರಂದು ಪ್ರಾರಂಭವಾಗಿ, ಏಪ್ರಿಲ್​ 29ರಂದು ಕೊನೇ ಹಂತದ ಮತದಾನ ಆಗಲಿದೆ. ಈ ಎಲ್ಲ ರಾಜ್ಯಗಳ ಮತ ಎಣಿಕೆ ಮೇ 2ರಂದು ನಡೆಯಲಿದೆ.

ಇದನ್ನೂ ಓದಿ: Kerala Assembly Elections 2021: ಕೇರಳ ಚುನಾವಣೆಯಲ್ಲಿ ಮುಸ್ಲಿಂ ಲೀಗ್​​ನಿಂದ ಸ್ಪರ್ಧಿಸಲಿದ್ದಾರೆ ಮಹಿಳಾ ಅಭ್ಯರ್ಥಿ; 25 ವರ್ಷಗಳ ನಂತರ ಸಿಕ್ಕಿತು ಅವಕಾಶ

Tamil Nadu Assembly Elections 2021: ತಮಿಳುನಾಡು ಚುನಾವಣೆಗೆ ಎಐಎಡಿಎಂಕೆ ಪಕ್ಷದ 171 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ