AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Assembly Elections 2021: ಕೇರಳ ಚುನಾವಣೆಯಲ್ಲಿ ಮುಸ್ಲಿಂ ಲೀಗ್​​ನಿಂದ ಸ್ಪರ್ಧಿಸಲಿದ್ದಾರೆ ಮಹಿಳಾ ಅಭ್ಯರ್ಥಿ; 25 ವರ್ಷಗಳ ನಂತರ ಸಿಕ್ಕಿತು ಅವಕಾಶ

IUML: ಬರೋಬ್ಬರಿ 25 ವರ್ಷಗಳ ನಂತರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್​​ನ ಮಹಿಳೆಯೊಬ್ಬರು ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.

Kerala Assembly Elections 2021: ಕೇರಳ ಚುನಾವಣೆಯಲ್ಲಿ ಮುಸ್ಲಿಂ ಲೀಗ್​​ನಿಂದ ಸ್ಪರ್ಧಿಸಲಿದ್ದಾರೆ ಮಹಿಳಾ ಅಭ್ಯರ್ಥಿ; 25 ವರ್ಷಗಳ ನಂತರ ಸಿಕ್ಕಿತು ಅವಕಾಶ
ಮುಸ್ಲಿಂ ಲೀಗ್
ರಶ್ಮಿ ಕಲ್ಲಕಟ್ಟ
|

Updated on: Mar 12, 2021 | 7:34 PM

Share

ಮಲಪ್ಪುರಂ: ಕೇರಳ ವಿಧಾನಸಭೆ ಚುನಾವಣೆಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬರೋಬ್ಬರಿ 25 ವರ್ಷಗಳ ನಂತರ ಮಹಿಳೆಯೊಬ್ಬರು ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಕೋಯಿಕ್ಕೋಡ್ ದಕ್ಷಿಣ ಚುನಾವಣಾ ಕ್ಷೇತ್ರದಲ್ಲಿ ನೂರ್​ಬಿನಾ ರಷೀದ್ ಸ್ಪರ್ಧಿಸಲಿದ್ದಾರೆ. ಹಾಲಿ ಶಾಸಕ ಕೆ.ಎಂ. ಮುನೀರ್ ಅವರ ಕ್ಷೇತ್ರದಲ್ಲಿ ಈ ಬಾರಿ ನೂರ್​ಬಿನಾ ಸ್ಪರ್ಧೆಗಳಿಯಲಿದ್ದಾರೆ. ಮುನೀರ್ ಕೊಡುವಳ್ಳಿಯಲ್ಲಿ ಸ್ಪರ್ಧಿಸಲಿದ್ದಾರೆ.

1996ರಲ್ಲಿ ಕೇರಳದಲ್ಲಿ ಮೊದಲ ಬಾರಿ ಮುಸ್ಲಿಂ ಲೀಗ್ ಮಹಿಳಾ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಿತ್ತು. ಕೋಯಿಕ್ಕೋಡ್ ದಕ್ಷಿಣ ಕ್ಷೇತ್ರದಲ್ಲಿ ಖಮರುನ್ನಿಸಾ ಅನ್ವರ್ ಸ್ಪರ್ಧಿಸಿದ್ದರು. ರಾಜ್ಯ ಸಾಮಾಜಿಕ ಕ್ಷೇಮ ಮಂಡಳಿ ಅಧ್ಯಕ್ಷೆಯಾಗಿದ್ದ ಖಮರುನ್ನಿಸಾ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಸಿಪಿಎಂ ನಾಯಕ ಎಳಮರಂ ಕರೀಂ ಅವರ ವಿರುದ್ಧ ಖಮರುನ್ನಿಸಾ ಪರಾಭವಗೊಂಡದ್ದರು. ಇದಾದನಂತರ ಈವರೆಗೆ ಮುಸ್ಲಿಂ ಲೀಗ್ ಯಾವುದೇ ಮಹಿಳೆಯನ್ನು ಚುನಾವಣಾ ಕಣಕ್ಕಿಳಿಸಿಲ್ಲ.

ಪಕ್ಷದಲ್ಲಿನ ಭಿನ್ನಮತದಿಂದಲೇ ಖಮರುನ್ನಿಸಾ ಪರಾಭವಗೊಂಡಿದ್ದು ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಮುಂದಿನ ಚುನಾವಣೆಗಳಲ್ಲಿ ಮುಸ್ಲಿಂ ಲೀಗ್ ಮಹಿಳಾ ಅಭ್ಯರ್ಥಿಗಳನ್ನು ಪರಿಗಣಿಸಲೇ ಇಲ್ಲ. ಆದರೆ ಈ ಬಾರಿ ಮಹಿಳೆಯರಿಗೆ ಪ್ರಾತಿನಿಧ್ಯ ಬೇಕು ಎಂದು ವನಿತಾ ಲೀಗ್ ಘಟಕ ಪಟ್ಟು ಹಿಡಿದಿತ್ತು. ಇದರ ಫಲವಾಗಿ ಈ ಬಾರಿಯ ಚುನಾವಣೆಯಲ್ಲಿ ನೂರ್​ಬಿನಾಗೆ ಅವಕಾಶ ಲಭಿಸಿದೆ.

ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಶಾಸಕಾಂಗ ಸದಸ್ಯರೂ ಆಗಿದ್ದಾರೆ ನೂರ್​ಬಿನಾ. ವನಿತಾ ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಜಯಂತಿ ರಾಜನ್, ವನಿತಾ ಲೀಗ್ ಅಧ್ಯಕ್ಷೆ, ಮಲಪ್ಪುರಂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸುಹರಾ ಮಂಬಾಡ್ ಮೊದಲಾದವರ ಹೆಸರನ್ನು ಮುಸ್ಲಿಂ ಲೀಗ್ ಪರಿಗಣಿಸಿದ್ದರೂ, ಕೊನೆಗೆ ನೂರ್​ಬಿನಾ ಅವರನ್ನು ಆಯ್ಕೆ ಮಾಡಲಾಯಿತು.

25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ  ಮುಸ್ಲಿಂ ಲೀಗ್ 

ಕೇರಳ ವಿಧಾನಸಭೆ ಚುನಾವಣೆಯಲ್ಲಿ  25 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಮುಸ್ಲಿಂ ಲೀಗ್ ಬಿಡುಗಡೆ ಮಾಡಿದೆ. ಭ್ರಷ್ಟಾಚಾರ ಪ್ರಕರಣದ ಆರೋಪಿ ವಿ.ಕೆ. ಇಬ್ರಾಹಿಂ ಕುಂಞಿ ಮತ್ತು ಎಂ.ಸಿ.ಖಮರುದ್ದೀನ್ ಅವರಿಗೆ ಈ ಬಾರಿ ಪಕ್ಷ ಅವಕಾಶ ನೀಡಿಲ್ಲ. ಕಳಮಶ್ಶೇರಿಯಲ್ಲಿ ಇಬ್ರಾಹಿಂಕುಂಞಿ ಅವರ ಬದಲು ಅವರ ಮಗ ವಿ.ಇ. ಅಬ್ದುಲ್ ಗಫೂರ್ ಗೆ ಅವಕಾಶ ನೀಡಲಾಗಿದೆ.

ಯುಡಿಎಫ್  ಅಭ್ಯರ್ಥಿಗಳ ಪಟ್ಟಿ ಬಿಡುಗಡೆ 

ಕುಂದಮಂಗಲದಲ್ಲಿ ಕಾಂಗ್ರೆಸ್ ನಾಯಕ ದಿನೇಶ್ ಪೆರುವಣ್ಣಾ ಯುಡಿಎಫ್ ಸ್ವತಂತ್ರ ಅಭ್ಯರ್ಥಿಯಾಗಲಿದ್ದಾರೆ ಎಂದು ಯುಡಿಎಫ್ ಘೋಷಿಸಿದೆ.  ಮಲಪ್ಪುರಂ ಲೋಕಸಭಾ ಉಪಚುನಾವಣೆಯಲ್ಲಿ ಅಬ್ದುಲ್ ಸಮದ್ ಸಮಅದನಿ ಯುಡಿಎಫ್ ಅಭ್ಯರ್ಥಿಯಾಗಿದ್ದಾರೆ. ತೆರವಾಗಲಿರುವ ರಾಜ್ಯ ಸಭಾ ಸ್ಥಾನಕ್ಕೆ ಪಿ.ವಿ. ಅಬ್ದುಲ್ ವಹಾಬ್ ಸ್ಪರ್ಧಿಸಲಿದ್ದಾರೆ. ಮೂರು ಬಾರಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ನಿಬಂಧನೆಗಳೊಂದಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ನಿಬಂಧನೆಯಲ್ಲಿ ಕುಂಞಾಲಿಕುಟ್ಟಿ ,ಎಂ.ಕೆ.ಮುನೀರ್, ಕೆ.ಪಿ.ಎ.ಮಜೀದ್ ಅವರಿಗೆ ರಿಯಾಯಿತಿ ನೀಡಲಾಗಿದೆ.  ಕಳೆದ ಬಾರಿ ಕೈತಪ್ಪಿ ಹೋದ ತಾನೂರ್ ಕ್ಷೇತ್ರದಲ್ಲಿ ಗೆಲ್ಲಲು ಈ ಬಾರಿ ಯೂತ್ ಲೀಗ್ ನಾಯಕ ಪಿ.ಕೆ.ಫಿರೋಜ್ ಕಣಕ್ಕಿಳಿದಿದ್ದಾರೆ. ಕಾಸರಗೋಡಿನಲ್ಲಿ ಎನ್.ಎ. ನೆಲ್ಲಿಕುನ್ನ್, ಮಂಜೇಶ್ವರದಲ್ಲಿ ಎಂ.ಕೆ.ಎಂ.ಅಶ್ರಫ್ ಸ್ಪರ್ಧಿಸಲಿದ್ದಾರೆ.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ  ಕಾರ್ಯದರ್ಶಿ ವಿಜಯನ್ ಥಾಮಸ್ ಶುಕ್ರವಾರ ಬಿಜೆಪಿಗೆ ಸೇರಿದ್ದಾರೆ.

ಇದನ್ನೂ ಓದಿ: Kerala Assembly Elections 2021: ಕೇರಳದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು 35 ಸೀಟುಗಳು ಸಾಕು: ಕೆ.ಸುರೇಂದ್ರನ್

 ಕೇರಳ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಎಂ, ಯುವ ನಾಯಕರಿಗೆ ಮಣೆ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ