Tamil Nadu Assembly Elections 2021: ತಮಿಳುನಾಡು ಚುನಾವಣೆಗೆ ಎಐಎಡಿಎಂಕೆ ಪಕ್ಷದ 171 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

AIADMK Candidates List: ತಮಿಳುನಾಡು ಚುನಾವಣೆಯಲ್ಲಿ 177 ಮಂದಿಯನ್ನು ಎಐಎಡಿಎಂಕೆ ಕಣಕ್ಕಿಳಿಸಲಿದೆ. ಈ ಹಿಂದೆ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಸೇರಿದಂತೆ 6 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿತ್ತು. ಬಿಜೆಪಿಗೆ 20 ಸೀಟುಗಳನ್ನು ಎಐಎಡಿಎಂಕೆ ನೀಡಿದೆ.

Tamil Nadu Assembly Elections 2021: ತಮಿಳುನಾಡು ಚುನಾವಣೆಗೆ ಎಐಎಡಿಎಂಕೆ ಪಕ್ಷದ 171 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಐಎಡಿಎಂಕೆ
Follow us
ರಶ್ಮಿ ಕಲ್ಲಕಟ್ಟ
|

Updated on:Mar 10, 2021 | 7:41 PM

ಚೆನ್ನೈ:ಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 171 ಅಭ್ಯರ್ಥಿಗಳ ಪಟ್ಟಿಯನ್ನು ಎಐಎಡಿಎಂಕೆ ಬುಧವಾರ ಬಿಡುಗಡೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ 177 ಮಂದಿಯನ್ನು ಪ್ರಸ್ತುತ ಪಕ್ಷ ಕಣಕ್ಕಿಳಿಸಲಿದೆ. ಈ ಹಿಂದೆ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಸೇರಿದಂತೆ 6 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿತ್ತು. ಬಿಜೆಪಿಗೆ 20 ಸೀಟುಗಳನ್ನು ಎಐಎಡಿಎಂಕೆ ನೀಡಿದೆ. ಈ ಚುನಾವಣೆಯಲ್ಲಿ ಬಿಜೆಪಿ, ಎಐಎಡಿಎಂಕೆ ಮತ್ತು ಪಾಟ್ಟಾಳಿ ಮಕ್ಕಳ್ ಕಟ್ಚಿ (PMK) ಮೈತ್ರಿಕೂಟ ಜತೆಯಾಗಿ ಸ್ಪರ್ಧಿಸಲಿದೆ. ಎನ್​ಡಿಎ ಮೈತ್ರಿಕೂಟದಿಂದ ನಟ, ರಾಜಕಾರಣಿ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷ ಹೊರ ನಡೆದ ಕಾರಣ ಪಿಎಂಕೆಗೆ 23 ಸೀಟುಗಳು ಲಭಿಸಿವೆ. ಇಲ್ಲಿವರೆಗೆ ನಡೆದ ಸೀಟು ಹಂಚಿಕೆ ಪ್ರಕಾರ 14 ಸೀಟುಗಳು ಅನ್ನೂ ಹಂಚಿಕೆಯಾಗದೆ ಮೈತ್ರಿಕೂಟದಲ್ಲಿ ಉಳಿದೆ.

ತಮಿಳುನಾಡಿನ 234 ಸೀಟುಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು ಮೇ.2ರಂದು ಫಲಿತಾಂಶ ಪ್ರಕಟವಾಗಲಿದೆ. ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನ ನಂತರ ಎಐಎಡಿಎಂಕೆ ಸ್ಪರ್ಧಿಸುವ ಮೊದಲ ಚುನಾವಣೆ ಇದಾಗಿದ್ದು, ವಿಪಕ್ಷಗಳಿಂದ ತೀವ್ರ ಪೈಪೋಟಿ ಎದುರಾಗಿದೆ. 2016 ಡಿಸೆಂಬರ್ ತಿಂಗಳಲ್ಲಿ ಜಯಲಲಿತಾ ನಿಧನರಾಗಿದ್ದರು. ಇದಾದನಂತರ ಪಕ್ಷದಲ್ಲಿದ್ದ ಟಿಟಿವಿ ದಿನಕರನ್ ತಮ್ಮದೇ ಆದ ಪಕ್ಷವಾದ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ (AMMK) ಆರಂಭಿಸಿದರು. ಎಎಂಎಂಕೆ ಪಕ್ಷ ಈ ಬಾರಿ ಅಸಾದುದ್ದೀನ್ ಓವೈಸಿ ಅವರ ಎಐಎಎಂಐಎಂ ಜತೆ ಮೈತ್ರಿ ಮಾಡಿಕೊಂಡಿದೆ.

ತಮ್ಮ ಮೈತ್ರಿಕೂಟದಲ್ಲಿರುವ ಪಕ್ಷಗಳಿಗೆ ಸೀಟು ಹಂಚಿಕೆ ಮಾಡುವುದು ಎಐಎಡಿಎಂಕೆ ಪ್ರಯಾಸವನ್ನುಂಟು ಮಾಡಿದೆ,. ಸೀಟು ಹಂಚಿಕೆ ವಿಷಯದಲ್ಲಿ ಅಸಮಧಾನಗೊಂಡು ಡಿಎಂಡಿಕೆ ಮೈತ್ರಿಕೂಟದಿಂದ ಹೊರ ನಡೆದಿತ್ತು. ಡಿಎಂಡಿಕೆಗೆ 15 ಸೀಟುಗಳನ್ನು ನೀಡುವುದಾಗಿ ಎಐಎಡಿಎಂಕೆ ಹೇಳಿತ್ತು. ಆದರೆ ಅಷ್ಟು ಸಾಲುವುದಿಲ್ಲ ಎಂದು ಮುನಿಸಿಕೊಂಡು ಡಿಎಂಡಿಕೆ ಮೈತ್ರಿಕೂಟದಿಂದ ಹೊರ ನಡೆದಿತ್ತು.

ಎಐಎಡಿಎಂಕೆ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಪ್ರಮುಖರು ಎಸ್.ಪಿ. ವೇಲುಮಣಿ, ತಂಗಮಣಿ, ವಿ.ವಿ.ರಮಣ, ಮಫೋಯಿ ಪಾಂಡಿರಾಜನ್, ಜೆಸಿಡಿ ಪ್ರಭಾಕರ್‌, ಗೋಕುಲ ಇಂದಿರಾ, ವಳರ್ ಮತಿ, ಕೆ.ಪಿ. ಮನುಸ್ವಾಮಿ, ಸೆಂಗೋಟಿಯಾನ್, ಪೊಳ್ಳಾಚಿ ಜಯರಾಮನ್, ಡಿಂಡಿಗಲ್ ಶ್ರೀನಿವಾಸನ್, ಎಂಸಿ ಸಂಪತ್, ಒಎಸ್ ಮಣಿಯನ್, ವೈತಿಲಿಂಗಂ, ಸಿ.ವಿಜಯಭಾಸ್ಕರ್

ಬಿಜೆಪಿ ಸ್ಪರ್ಧಿಸುವ ಕ್ಷೇತ್ರಗಳು ತಿರುವಣ್ಣಾ ಮಲೈ, ನಾಗರಕೊಯಿಲ್, ಕುಲಚಲ್, ವಿಲವಂಕೋಡು, ರಾಮನಾಥಪುರಂ, ಮೊಡಕುರುಚ್ಚಿ, ಹಾರ್ಬರ್, ಥೌಸಂಡ್ ಲೈಟ್ಸ್ , ತಿರುಕೋವಿಲೂರ್, ತಿಟ್ಟಕುಡಿ, ಕೊಯಂಬತ್ತೂರ್ ದಕ್ಷಿಣ, ವಿರುಧುನಗರ್, ಅರವಕುರುಚಿ, ತಿರುವೈಯಾರ್, ಊಟಿ, ತಿರುನಲ್ವೇಲಿ, ಥಾಲಿ, ಕರೈಕುಡಿ, ಧರಂಪುರಂ , ಮಧುರೈ ಉತ್ತರ.

ಸಿ- ವೋಟರ್ ಸಮೀಕ್ಷೆ ಟೈಮ್ಸ್ ನೌ- ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಡಿಎಂಕೆ-ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 154ರಿಂದ 162 ಸೀಟುಗಳನ್ನು ಗೆಲ್ಲಲಿದೆ. ಅದೇ ವೇಳೆ ಯುಪಿಎ ಮೈತ್ರಿಕೂಟ 158 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ. 2016ರ ಚುನಾವಣೆಯಲ್ಲಿ ಲಭಿಸಿದ ಸೀಟುಗಳಿಗಿಂತ 60 ಸೀಟುಗಳು ಯುಪಿಎಗೆ ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ತಮಿಳುನಾಡು ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಎಂಎಂಕೆ ಎಎಂಎಂಕೆ (AMMK) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ಶಾಸಕ ಮತ್ತು ಸಂಸದರ ಹೆಸರು ಇದೆ. ಮಾಜಿ ಸಚಿವರಾದ ಜಿ.ಸೆಂಥಮಿಳನ್ ಮತ್ತು ಪಳನಿಯಪ್ಪನ್ ಅವರು ಸೈದಪೇಟ್ ಮತ್ತು ಪಾಪಿರೆಡ್ಡಿಪಟ್ಟಿಯಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವ ಸಿ.ಷಣ್ಮುಗವೇಲು ಅವರು ಮಾಜತುಲಗಂ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಪ್ರಮುಖ ರಾಜಕಾರಣಿಗಳಾದ ಶಾಸಕ ಎನ್.ಜಿ. ಪಾರ್ಥಿಬನ್ (ಶೋಲಿಂಗೂರು), ಎಂ.ರಂಗಸ್ವಾಮಿ (ಪಾಪನಾಶನಂ), ಕೆ.ಕೆ. ಉಮದೇವನ್ (ತಿರುಪತ್ತೂರು) ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ : Tamil Nadu Assembly Elections 2021: ಸೀಟು ಹಂಚಿಕೆ ವಿಚಾರ; ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದಿಂದ ಹೊರನಡೆದ ಡಿಎಂಡಿಕೆ

Published On - 7:40 pm, Wed, 10 March 21

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ