Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu Assembly Elections 2021: ಸೀಟು ಹಂಚಿಕೆ ವಿಚಾರ; ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದಿಂದ ಹೊರನಡೆದ ಡಿಎಂಡಿಕೆ

Tamil Nadu Elections: ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಸೀಟು ಹಂಚಿಕೆ ವಿಚಾರದಲ್ಲಿ ಅಸಮಧಾನಗೊಂಡು ಡಿಎಂಡಿಕೆ ಪಕ್ಷವು ಎಐಎಡಿಎಂಕೆ- ಬಿಜೆಪಿ ಮೈತ್ರಿಕೂಟದಿಂದ ಹೊರನಡೆದಿದೆ.

Tamil Nadu Assembly Elections 2021: ಸೀಟು ಹಂಚಿಕೆ ವಿಚಾರ; ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದಿಂದ ಹೊರನಡೆದ ಡಿಎಂಡಿಕೆ
ವಿಜಯಕಾಂತ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 09, 2021 | 3:37 PM

ಚೆನ್ನೈ: ನಟ, ರಾಜಕಾರಣಿ ವಿಜಯಕಾಂತ್ ನೇತೃತ್ವದ ಡಿಎಂಡಿಕೆ (DMDK) ಪಕ್ಷ ಎಐಎಡಿಎಂಕೆ (AIADMK)- ಬಿಜೆಪಿ (BJP) ಮೈತ್ರಿಕೂಟದಿಂದ ಹೊರ ಬಂದಿದೆ. ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಸೀಟು ಹಂಚಿಕೆ ವಿಚಾರದಲ್ಲಿ ಅಸಮಧಾನಗೊಂಡು ಡಿಎಂಡಿಕೆ ಪಕ್ಷವು ಎಐಎಡಿಎಂಕೆ- ಬಿಜೆಪಿ ಮೈತ್ರಿಕೂಟದಿಂದ ಹೊರನಡೆದಿರುವುದಾಗಿ ಬಲ್ಲಮೂಲಗಳು ತಿಳಿಸಿವೆ.

ಸೀಟು ಹಂಚಿಕೆ ವಿಚಾರದಲ್ಲಿ ಎಐಎಡಿಎಂಕೆ ನಮ್ಮ ಬೇಡಿಕೆಗೆ ಮಣೆ ಹಾಕಿಲ್ಲ. ಹಾಗಾಗಿ ವಿಜಯಕಾಂತ್ ಅವರು ಎಐಎಡಿಎಂಕೆ- ಬಿಜೆಪಿ ಮೈತ್ರಿಕೂಟದಿಂದ ಹೊರಹೋಗುವ ನಿರ್ಧಾರ ಕೈಗೊಂಡಿದ್ದಾರೆಯ ನಮಗೆಲ್ಲರಿಗೂ ಇದು ದೀಪಾವಳಿ ಎಂದು ಡಿಎಂಡಿಕೆ ಕಾರ್ಯದರ್ಶಿಗಳು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

DMDK Statement

ಡಿಎಂಡಿಕೆ ಪಕ್ಷದ ಪ್ರಕಟಣೆ

ಮೂರು ಸುತ್ತಿನ ಮಾತುಕತೆ ನಂತರವೂ ಸೀಟು ಹಂಚಿಕೆ ವಿಚಾರದಲ್ಲಿ ತಮ್ಮ ಬೇಡಿಕೆಯನ್ನು ಪರಿಗಣಿಸದಿರುವ ಕಾರಣ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದಿಂದ ಹೊರಬಂದಿದ್ದೇವೆ ಎಂದು ಡಿಎಂಡಿಕೆ ತಮ್ಮ ಪ್ರಕಟಣೆಯಲ್ಲಿ ಹೇಳಿದೆ. ಏಪ್ರಿಲ್ 6ರಂದು ನಡೆಯುವ ಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿಗಳು ಗೆಲ್ಲುವುದಿಲ್ಲ ಎಂದು ವಿಜಯಕಾಂತ್ ಅವರ ಮೈದುನ, ಡಿಎಂಡಿಕೆ ನಾಯಕ ಎಲ್.ಕೆ.ಸುಧೀಶ್ ಹೇಳಿದ್ದಾರೆ.

ಮೂರು ಸುತ್ತಿನ ಚರ್ಚೆ ನಡೆಸಿಯೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವಿಜಯಕಾಂತ್ ಹೇಳಿದ್ದು ಬೇರೆ ಪಕ್ಷಗಳೊಡನೆ ಕೈಜೋಡಿಸುವ ಬಗ್ಗೆ ಮಾತನಾಡಿಲ್ಲ. ಚುನಾವಣೆಗೆ ಮುನ್ನ ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದ ಎರಡನೇ ಪಕ್ಷವಾಗಿದೆ ಡಿಎಂಡಿಕೆ. ಮೊದಲು 41 ಸೀಟುಗಳಿಗೆ ಬೇಡಿಕೆ ಇಟ್ಟಿದ್ದ ಡಿಎಂಡಿಕೆ ತದನಂತರ 23 ಸೀಟುಗಳನ್ನು ನೀಡಬೇಕು ಎಂದು ಕೇಳಿತ್ತು. ಆದರೆ ಎಐಎಡಿಎಂಕೆ 15 ಸೀಟುಗಳನ್ನು ನೀಡುವುದಾಗಿ ಹೇಳಿದ್ದರಿಂದ ಅತೃಪ್ತಿ ವ್ಯಕ್ತಪಡಿಸಿ ಮೈತ್ರಿಕೂಟದಿಂದ ಹೊರನಡೆದಿದೆ.

2014 ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ 39 ಸೀಟುಗಳ ಪೈಕಿ 37 ಸೀಟುಗಳನ್ನು ಗೆದ್ದುಕೊಂಡಿತ್ತು. ಶೇಕಡಾ 44.3 ಮತಗಳು ಎಐಎಡಿಎಂಕೆ ಸಿಕ್ಕಿತ್ತು. ಅದೇ ವೇಳೆ ಶೇಕಡಾ 5.1 ಮತಗಳಿಸಿದ್ದ ವಿಜಯಕಾಂತ್ ಪಕ್ಷ ಒಂದೇ ಒಂದು ಸೀಟು ಕೂಡಾ ಗೆಲ್ಲಲಿಲ್ಲ.

ಮುಂಬರುವ ಚುನಾವಣೆಗೆ ಡಿಎಂಡಿಕೆ ಸಿದ್ಧತೆ ನಡೆಸುತ್ತಿದ್ದು, ವಿಜಯಕಾಂತ್ ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ವಿಜಯಕಾಂತ್ ಅವರ ಪತ್ನಿ ಪ್ರೇಮಲತಾ ಮತ್ತು ಪುತ್ರ ವಿಜಯ ಪ್ರಭಾಕರನ್ ಕೂಡಾ ಮೊದಲ ಬಾರಿ ಚುನಾವಣೆ ಕಣಕ್ಕಿಳಿಯುವ ಸಾಧ್ಯತೆ ಇದೆ. ವಿಜಯಕಾಂತ್ ಅವರ ಮೈದುನ (ಪ್ರೇಮಲತಾ ಅವರ ಸಹೋದರ), ಡಿಎಂಡಿಕೆ ಪಕ್ಷದ ಉಪ ಕಾರ್ಯದರ್ಶಿ ಎಲ್.ಕೆ.ಸುಧೀಶ್ ಕೂಡಾ ಚುನಾವಣೆ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ.

ಕಡಲೂರಿನ ಪಣುರ್ತಿಯಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯಪ್ರಭಾಕರನ್, ಎಐಎಡಿಎಂಕೆಯ ಜನಪ್ರಿಯತೆ ಕುಸಿಯುತ್ತಾ ಬಂದಿದೆ. ಅವರು ನಮಗೆ 10-15 ಸೀಟು ನೀಡುವುದಾಗಿ ಹೇಳಿದ್ದಾರೆ. ಈ ಹೊತ್ತಲ್ಲಿ ನಾವು ಹೋರಾಟಗಾರರಾಗಬೇಕಿದೆ. ಎಡಪ್ಪಡಿ ಚುನಾವಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಯವರೇ ಸೋಲುತ್ತಾರೆ. ನಾನು ಮಾತನಾಡುವಾಗ ಜನರು ಮುಗ್ಧ ಬಾಲಕನೊಬ್ಬ ಮಾತನಾಡುತ್ತಿದ್ದಾನೆ ಎಂದು ಜನರು ಭಾವಿಸುತ್ತಾರೆ. ನಾನು ಎಳೆಯವನಾಗಿರಬಹುದು ಆದರೆ ನನಗೆ ನನ್ನ ಕಾರ್ಯಗಳನ್ನು ನೋಡಿಕೊಳ್ಳಲು ಬರುತ್ತದೆ. ನಾವು ಹಣ ಬಯಸುವ ಪಕ್ಷ ಅಲ್ಲ ಎಂದಿದ್ದಾರೆ. ವಿಜಯಕಾಂತ್ ಮತ್ತು ಪ್ರೇಮಲತಾ ಅವರು ವಿರುದಾಚಲಂ ಮತ್ತು ಪಣುರ್ತಿ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಕೂಗು ಕೇಳಿ ಬಂದಿದೆ ಎಂದು ವಿಜಯಪ್ರಭಾಕರನ್ ಹೇಳಿದ್ದಾರೆ.

ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಹೊರಬಂದಿರುವ ಡಿಎಂಡಿಕೆ ಪಕ್ಷದ ಮುಂದೆ ಮೂರು ಆಯ್ಕೆಗಳಿವೆ. ಅದೇನೆಂದರೆ ಟಿಟಿವಿ ದಿನಕರನ್ ನೇತೃತ್ವದ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ ಅಥವಾ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ ಜತೆ ಕೈಜೋಡಿಸುವುದು. ಇಲ್ಲವೇ ಏಕಾಂಗಿಯಾಗಿ ಸ್ಪರ್ಧಿಸುವುದು. ಡಿಎಂಕೆ ನೇತೃತ್ವದ ಮೈತ್ರಿಕೂಟ ಈಗಾಗಲೇ ತಮ್ಮ ಮೈತ್ರಿ ಪಕ್ಷಗಳಿಗೆ ಸೀಟು ಹಂಚಿಕೆ ಮಾಡಿದ್ದರಿಂದ ಡಿಎಂಕೆ ಜತೆ ಡಿಎಂಡಿಕೆ ಸೇರುವುದು ಅಸಾಧ್ಯ.

ಎಐಎಡಿಎಂಕೆ ಮೈತ್ರಿಕೂಟದಿಂದ ಡಿಎಂಡಿಕೆ ಹೊರನಡೆದಿರುವುದರಿಂದ ಮೈತ್ರಿಕೂಟದಲ್ಲಿ ಮೂರೇ ಮೂರು ಪಕ್ಷಗಳು ಬಾಕಿ ಉಳಿದಿವೆ. ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ 20 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಪಿಎಂಕೆ ಪಕ್ಷ 23 ಸೀಟುಗಳಲ್ಲಿ ಸ್ಪರ್ಧಿಸಲಿದ್ದು ಇನ್ನುಳಿದ ಸೀಟುಗಳಲ್ಲಿ ಆಡಳಿತಾರೂಢ ಎಐಎಡಿಎಂಕೆ ಸ್ಪರ್ಧಿಸಲಿದೆ. ತಮಿಳುನಾಡಿನಲ್ಲಿ ಒಟ್ಟು 234 ವಿ ಧಾನಸಭೆ ಸೀಟುಗಳಿಗೆ ಚುನಾವಣೆ ನಡೆಯಲಿದೆ.

 ಇದನ್ನೂ ಓದಿ:  Tamil Nadu Assembly Elections 2021: ತಮಿಳುನಾಡು ಚುನಾವಣೆಯಲ್ಲಿ 154 ಸೀಟುಗಳಲ್ಲಿ ಸ್ಪರ್ಧಿಸಲಿದೆ ಮಕ್ಕಳ್ ನೀಧಿ ಮಯ್ಯಂ

Published On - 1:56 pm, Tue, 9 March 21

ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ