ಒಂದೇ ಹುಡುಗಿಯನ್ನು ಪ್ರೀತಿಸಿ ಜೀವ ಬಿಟ್ಟ ಸಹೋದರರು; ಸಾಯೋ ಮುನ್ನ ಹುಡುಗಿಗೆ ಒಳ್ಳೇ ಸಂಬಂಧ ನೋಡಿ ಮದುವೆಯಾಗಲು ಸಲಹೆ

ಇವರಿಬ್ಬರೂ ರೈಲಿಗೆ ಸಿಲುಕಿ ಸಾಯುವ ಮುನ್ನ ವಿಡಿಯೋ ಮಾಡಿದ್ದು, ಈ ಘಟನೆಗೆ ನಾವು ಯಾರನ್ನೂ ಹೊಣೆ ಮಾಡುವುದಿಲ್ಲ. ಇದು ಯಾರ ಒತ್ತಡದಿಂದಲೂ ತೆಗೆದುಕೊಳ್ಳುತ್ತಿರುವ ನಿರ್ಧಾರವಲ್ಲ. ನನ್ನ ಸಾವಿಗೆ ಅವನನ್ನು ದೂಷಿಸುವುದಾಗಲೀ, ಅವನ ಸಾವಿಗೆ ನನ್ನನ್ನು ದೂಷಿಸುವುದಾಗಲೀ ಮಾಡಬೇಡಿ ಎಂದು ತಿಳಿಸಿದ್ದಾರೆ.

ಒಂದೇ ಹುಡುಗಿಯನ್ನು ಪ್ರೀತಿಸಿ ಜೀವ ಬಿಟ್ಟ ಸಹೋದರರು; ಸಾಯೋ ಮುನ್ನ ಹುಡುಗಿಗೆ ಒಳ್ಳೇ ಸಂಬಂಧ ನೋಡಿ ಮದುವೆಯಾಗಲು ಸಲಹೆ
ಆತ್ಮಹತ್ಯೆ ಮಾಡಿಕೊಂಡ ಸಹೋದರರು
Follow us
Skanda
| Updated By: ರಾಜೇಶ್ ದುಗ್ಗುಮನೆ

Updated on: Mar 10, 2021 | 8:46 PM

ಜೈಪುರ: ರಾಜಸ್ಥಾನದ ಗುಡ್ಲಾ ಪ್ರದೇಶದ ಬಳಿ ನಡೆದ ದುರ್ಘಟನೆಯೊಂದರಲ್ಲಿ ಒಂದೇ ಹುಡುಗಿಯನ್ನು ಪ್ರೀತಿಸಿದ್ದ ಸಹೋದರ ಸಂಬಂಧಿಗಳಿಬ್ಬರು ಚಲಿಸುವ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಮೃತರನ್ನು ಡಬ್ಲಾನಾ ಪೊಲೀಸ್​ ಠಾಣಾ ವ್ಯಾಪ್ತಿಗೆ ಸೇರಿದ ಕೇಶವಪುರ ಗ್ರಾಮದ ಮಹೇಂದ್ರ ಗುರ್ಜಾರ್ (23) ಹಾಗೂ ದೇವರಾಜ್​ ಗುರ್ಜಾರ್ (23) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಸಹೋದರ ಸಂಬಂಧಿಗಳಾಗಿದ್ದಾರೆ ಎಂದು ಘಟನೆ ನಡೆದ ಪ್ರದೇಶಕ್ಕೆ ಆಗಮಿಸಿದ ಬಂಡಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಮೃತರ ಮೊಬೈಲ್​ಗಳಲ್ಲಿ ದೊರೆತ ಫೋಟೋ ಮತ್ತು ವಿಡಿಯೋದ ಆಧಾರದ ಮೇಲೆ ಅವರಿಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಇಬ್ಬರೂ ತಮ್ಮ ತಮ್ಮ ತೋಳುಗಳಲ್ಲಿ ಹುಡುಗಿ  ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ ಎನ್ನುವುದೂ ಗೊತ್ತಾಗಿದೆ. ಆದರೆ, ಇದುವರೆಗೆ ಹುಡುಗಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳೇನೂ ಲಭ್ಯವಾಗಿಲ್ಲ.

ಈ ಇಬ್ಬರದ್ದೂ ಆತ್ಮಹತ್ಯೆ ಎನ್ನುವುದು ಮೇಲ್ನೋಟಕ್ಕೆ ಖಚಿತವಾಗಿದೆಯಾದರೂ ಸಾವಿಗೆ ಸಂಬಂಧಿಸದಂತೆ ಯಾವುದೇ ಪತ್ರ ವಿವರ ಸಿಕ್ಕಿಲ್ಲ. ಆದರೆ, ಖಾಸಗಿ ಮಾಧ್ಯಮವೊಂದರ ವರದಿ ಪ್ರಕಾರ ಇವರಿಬ್ಬರೂ ರೈಲಿಗೆ ಸಿಲುಕಿ ಸಾಯುವ ಮುನ್ನ ವಿಡಿಯೋ ಮಾಡಿದ್ದು, ಈ ಘಟನೆಗೆ ನಾವು ಯಾರನ್ನೂ ಹೊಣೆ ಮಾಡುವುದಿಲ್ಲ. ಇದು ಯಾರ ಒತ್ತಡದಿಂದಲೂ ತೆಗೆದುಕೊಳ್ಳುತ್ತಿರುವ ನಿರ್ಧಾರವಲ್ಲ. ನನ್ನ ಸಾವಿಗೆ ಅವನನ್ನು ದೂಷಿಸುವುದಾಗಲೀ, ಅವನ ಸಾವಿಗೆ ನನ್ನನ್ನು ದೂಷಿಸುವುದಾಗಲೀ ಮಾಡಬೇಡಿ. ಈ ನಿರ್ಧಾರವನ್ನು ನಾವಿಬ್ಬರೂ ವೈಯಕ್ತಿಕವಾಗಿ ಯೋಚಿಸಿ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ವಿಡಿಯೋ ಕೊನೆಯಲ್ಲಿ ತಮ್ಮ ಕುಟುಂಬಸ್ಥರಿಗೆ ಕರೆ ಮಾಡಿರುವ ಯುವಕರು ತಮ್ಮ ಸಾವಿನಿಂದಾಗಿ ಯಾವುದೇ ಗೊಂದಲಗಳು ಮೂಡುವುದು ಬೇಡ. ನೀವು ಮೊದಲಿನಂತೆಯೇ ಚೆನ್ನಾಗಿರಿ ಎಂದು ಹೇಳಿರುವುದಲ್ಲದೇ, ತಾವಿಬ್ಬರೂ ಪ್ರೀತಿಸಿದ ಆ ಹುಡುಗಿಗೂ ಉತ್ತಮ ಸಂಬಂಧ ನೋಡಿ ವಿವಾಹವಾಗುವಂತೆ ಕಿವಿಮಾತು ಹೇಳಿದ್ದಾರೆ ಎಂದು ವರದಿಯಾಗಿದೆ. ಪ್ರಕರಣವನ್ನು ಸಿಆರ್​ಪಿಸಿ ಸೆಕ್ಷನ್​ 174ರ ಅಡಿಯಲ್ಲಿ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಶವಪತ್ತೆ

ಆತ್ಮಹತ್ಯೆಗೆ ಶರಣಾದ ಎಂಬಿಬಿಎಸ್ ವಿದ್ಯಾರ್ಥಿ: ಸಾವಿಗೂ ಮುನ್ನ ಗೂಗಲ್​ನಲ್ಲಿ ಹುಡುಕಾಟ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ