Tamil Nadu Assembly Election 2021: ಡಿಎಂಕೆಯ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರ; ಇಂಧನ ಬೆಲೆ ಕಡಿತಕ್ಕೆ ಆದ್ಯತೆಯೆಂದ ಸ್ಟಾಲಿನ್​ ​

2013ರಲ್ಲಿ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಾರಂಭ ಮಾಡಿದ ಉಪಾಹಾರ ಗೃಹದ ಯೋಜನೆ ನೋಡಿದ ಬಳಿಕ ಉಳಿದ ಕೆಲವು ರಾಜ್ಯ ಸರ್ಕಾರಗಳೂ ಅದೇ ರೀತಿಯ ಯೋಜನೆಯನ್ನು ಜಾರಿಗೆ ತಂದವು. ಇದೀಗ ಡಿಎಂಕೆ ತಾನು ಅಧಿಕಾರಕ್ಕೆ ಬಂದರೆ ಕಲೈನಾರ್ ಉಣವಗಂ ಪ್ರಾರಂಭಿಸುವುದಾಗಿ ಹೇಳಿಕೊಂಡಿದೆ.

Tamil Nadu Assembly Election 2021: ಡಿಎಂಕೆಯ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರ; ಇಂಧನ ಬೆಲೆ ಕಡಿತಕ್ಕೆ ಆದ್ಯತೆಯೆಂದ ಸ್ಟಾಲಿನ್​ ​
ಎಂ.ಕೆ. ಸ್ಟಾಲಿನ್​
Follow us
Lakshmi Hegde
|

Updated on: Mar 13, 2021 | 4:05 PM

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಅಲ್ಲಿನ ಪ್ರತಿಪಕ್ಷ ಡಿಎಂಕೆ ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಹೇಗಾದರೂ ಅಧಿಕಾರಿ ಹಿಡಿಯಲೇಬೇಕು ಎಂದು ಹಠ ತೊಟ್ಟಿರುವ ಎಂ.ಕೆ.ಸ್ಟಾಲಿನ್​ ನೇತೃತ್ವದ ಡಿಎಂಕೆ ಕಾಂಗ್ರೆಸ್​ನೊಂದಿಗೆ ಮೈತ್ರಿಯನ್ನೂ ಮಾಡಿಕೊಂಡಿದೆ. ಇದೀಗ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರವನ್ನೇ ನೀಡಿದೆ. ಅದರಲ್ಲೂ ಮುಖ್ಯವಾಗಿ ಸರ್ಕಾರಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಡಾಟಾ ಕಾರ್ಡ್​ ಜತೆ ಉಚಿತ ಕಂಪ್ಯೂಟರ್​ ಟ್ಯಾಬ್ಲೆಟ್​ ನೀಡುವ ಮತ್ತು ರಾಜ್ಯದ ಉದ್ಯಮಗಳಲ್ಲಿ ಶೇ.75ರಷ್ಟು ಉದ್ಯೋಗ ಸ್ಥಳೀಯರಿಗೇ ಮೀಸಲಿಡಬೇಕು ಎಂಬ ಕಾನೂನುನ್ನು ಹೊರತರುವುದಾಗಿ ಹೇಳಿಕೊಂಡಿದೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್​ ಅವರು ಇಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ಕಾರಿ ಉದ್ಯೋಗಗಳಲ್ಲಿ ಸ್ಥಳೀಯರಿಗೇ ಮೊದಲ ಆದ್ಯತೆ ನೀಡಲಾಗುವುದು. ಹಾಗೇ ಖಾಸಗೀ ವಲಯಗಳಲ್ಲಿ ಮೀಸಲಾತಿ ತರುವುದು, ಸಣ್ಣ ರೈತರಿಗೆ ಸಬ್ಸಿಡಿ ನೀಡುವುದು ನಮ್ಮ ಪ್ರಮುಖ ಯೋಜನೆಗಳಾಗಿವೆ ಎಂದು ತಿಳಿಸಿದ್ದಾರೆ.

ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 5 ರೂ. ಮತ್ತು ಡೀಸೆಲ್​ ಬೆಲೆಯನ್ನು ಲೀಟರ್​ಗೆ 4 ರೂ.ಕಡಿಮೆ ಮಾಡುತ್ತೇವೆ. ಹಾಗೇ, ಎಲ್​​ಪಿಜಿ ಸಿಲಿಂಡರ್​ಗೆ 100 ರೂ.ಸಬ್ಸಿಡಿ ನೀಡುತ್ತೇವೆ. ಹಾಗೇ ಹಿಂದೂ ದೇವಾಲಯಗಳ ನವೀಕರಣಕ್ಕೆ 1000 ಕೋಟಿ ರೂ. ಹಾಗೂ ಚರ್ಚ್​ ಮತ್ತು ಮಸೀದಿಗಳಿಗೆ 200 ಕೋಟಿ ರೂ.ಮೀಸಲಿಡಲಾಗುವುದು ಎಂದೂ ಸ್ಟಾಲಿನ್ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಪ್ರಮುಖ ಹಿಂದೂ ದೇವಾಲಯಗಳಿಗೆ ಯಾತ್ರೆಗೆ ಹೋಗುವ ಒಂದು ಲಕ್ಷ ಜನರಿಗೆ ತಲಾ 25,000ರೂ.ನೆರವು ನೀಡುವುದು, ಮಾತೃತ್ವ ರಜೆ ವಿಸ್ತರಣೆ ಮತ್ತು NEET ರದ್ದು ಮಾಡಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಸ್ಟಾಲಿನ್​ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದಾರೆ. ಇದಿಷ್ಟರ ಹೊರತಾಗಿ ಸ್ವಚ್ಛ ಕುಡಿಯುವ ನೀರು ಸರಬರಾಜು, ಉತ್ತಮ ಜಲ ನಿರ್ವಹಣೆ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಹೆಚ್ಚಳ, ಹಿರಿಯರ ಪಿಂಚಣಿಯಲ್ಲಿ ಏರಿಕೆ ಮಾಡಲಾಗುವುದು ಎಂದು ಹೇಳಿರುವ ಎಂ.ಕೆ. ಸ್ಟಾಲಿನ್​, ಬಡವರ ಹಸಿವು ನೀಗಿಸಲು ರಾಜ್ಯಾದ್ಯಂತ ಕಲೈನಾರ್ ಉಣವಗಂ ಉಪಾಹಾರ ಗೃಹ ಪ್ರಾರಂಭಿಸುವುದಾಗಿಯೂ ತಿಳಿಸಿದ್ದಾರೆ.

ಇನ್ನೂ ಒಂದು ಮಹತ್ವದ ವಿಚಾರವನ್ನು ಡಿಎಂಕೆ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದೆ. 2016ರಲ್ಲಿ ಅಂದಿನ ಜಯಲಲಿತಾ ಮೃತಪಟ್ಟಾಗ ಹಲವು ಅನುಮಾನಗಳು ಎದ್ದಿದ್ದವು. ಹಾಗಾಗಿ ಅವರ ಸಾವಿನ ಬಗ್ಗೆ ತನಿಖೆ ಮಾಡಲು ಅರುಮುಗಸಾಮಿ ಸಮಿತಿಯನ್ನು ರಚಿಸಲಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಈ ಸಮಿತಿ ತ್ವರಿತವಾಗಿ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಟಾಲಿನ್​ ಹೇಳಿದ್ದಾರೆ.

ವರ್ಕ್ ಆಗತ್ತಾ ಕಲೈನಾರ್ ಕ್ಯಾಂಟೀನ್? ತಮಿಳುನಾಡಿನ ಅಮ್ಮಾ ಕ್ಯಾಂಟೀನ್​ ಪ್ರಸಿದ್ಧಿ ಇಡೀ ದೇಶಕ್ಕೆ ಗೊತ್ತು. 2013ರಲ್ಲಿ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಾರಂಭ ಮಾಡಿದ ಉಪಾಹಾರ ಗೃಹದ ಯೋಜನೆ ನೋಡಿದ ಬಳಿಕ ಉಳಿದ ಕೆಲವು ರಾಜ್ಯ ಸರ್ಕಾರಗಳೂ ಅದೇ ರೀತಿಯ ಯೋಜನೆಯನ್ನು ಜಾರಿಗೆ ತಂದವು. ಇದೀಗ ಡಿಎಂಕೆ ತಾನು ಅಧಿಕಾರಕ್ಕೆ ಬಂದರೆ ಕಲೈನಾರ್ ಉಣವಗಂ ಪ್ರಾರಂಭಿಸುವುದಾಗಿ ಹೇಳಿಕೊಂಡಿದೆ. ಈ ಭರವಸೆ ವರ್ಕ್​ ಮಾಡತ್ತಾ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಇದನ್ನೂ ಓದಿ: ‘ಎಐಎಡಿಎಂಕೆ ಈಗ ಮೇಡಂ ಜಯಲಲಿತಾರ ಪಕ್ಷವಲ್ಲ..ಅದು ಪ್ರಧಾನಿ ಮೋದಿಯವರ ಗುಲಾಮ ಪಕ್ಷ’- ಅಸಾದುದ್ದೀನ್ ಓವೈಸಿ ಟೀಕೆ

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ