ಬಿಹಾರ ಜೆಡಿಯುನಲ್ಲಿ ಅಸಮಾಧಾನ: ಶೀಘ್ರ 17 ಶಾಸಕರು ಆರ್​ಜೆಡಿಗೆ ಸೇರ್ಪಡೆ?

ಈ ಮೊದಲು ಜೆಡಿಯುನ ಪ್ರಧಾನ ಕಾರ್ಯದರ್ಶಿ ಆಗಿದ್ದ ಶ್ಯಾಮ್​ ರಜಾಕ್​ ಇತ್ತೀಚೆಗೆ ಆರ್​ಜೆಡಿ ಸೇರ್ಪಡೆ ಆಗಿದ್ದರು. ಅವರು ಬುಧವಾರ ಈ ರೀತಿಯ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಿಹಾರ ಜೆಡಿಯುನಲ್ಲಿ ಅಸಮಾಧಾನ: ಶೀಘ್ರ 17 ಶಾಸಕರು ಆರ್​ಜೆಡಿಗೆ ಸೇರ್ಪಡೆ?
ಬಿಹಾರ ಸಿಎಂ ನಿತೀಶ್​ ಕುಮಾರ್

Updated on: Dec 30, 2020 | 6:26 PM

ಪಾಟ್ನಾ: ಅರುಣಾಚಲ ಪ್ರದೇಶದಲ್ಲಿ ಆರು ಜೆಡಿಯು ಶಾಸಕರು ಬಿಜೆಪಿ ಸೇರಿದ್ದ ವಿಚಾರ ಬಿಹಾರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಬಿಹಾರದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ನಡುವೆ ಶೀತಲ ಸಮರಕ್ಕೂ ಕಾರಣವಾಗಿದೆ. ಈ ಮಧ್ಯೆ ಬಿಹಾರದಲ್ಲಿ 17 ಜೆಡಿಯು ಶಾಸಕರು ಪಕ್ಷ ಬದಲಿಸಲು ಸಿದ್ಧರಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಈ ಮೊದಲು ಜೆಡಿಯುನ ಪ್ರಧಾನ ಕಾರ್ಯದರ್ಶಿ ಆಗಿದ್ದ ಶ್ಯಾಮ್​ ರಜಾಕ್​ ಇತ್ತೀಚೆಗೆ ಆರ್​ಜೆಡಿ ಸೇರ್ಪಡೆ ಆಗಿದ್ದರು. ಅವರು ಬುಧವಾರ ಈ ರೀತಿಯ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜೆಡಿಯುನ ಸಾಕಷ್ಟು ಶಾಸಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ, ಅವರ ಪಕ್ಷದ 17 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಇನ್ನೂ ಕೆಲ ಶಾಸಕರು ಈ ಬಣ ಸೇರಿಕೊಳ್ಳಲಿದ್ದಾರೆ. ಹೀಗಾಗಿ, ಈ ಪ್ರಕ್ರಿಯೆ ನಿಂತಿದೆ ಎನ್ನುವ ಮೂಲಕ ಹೊಸ ಬಾಂಬ್​ ಹಾಕಿದ್ದಾರೆ.

ಅರುಣಾಚಲ ಪ್ರದೇಶ ವಿಧಾನಸಭೆಯ 7 ಜೆಡಿಯು ಶಾಸಕರ ಪೈಕಿ ಆರು ಮಂದಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. 60 ಸದಸ್ಯರಿರುವ ಅರುಣಾಚಲ ಪ್ರದೇಶದಲ್ಲಿ ಜೆಡಿಯು 7 ಸ್ಥಾನಗಳನ್ನು ಗೆದ್ದಿತ್ತು. ಈ ಪೈಕಿ ಆರು ಶಾಸಕರು ಬಿಜೆಪಿ ಸೇರಿದ್ದರು. ಹೀಗಾಗಿ, ಪಕ್ಷಾಂತರ ಕಾಯ್ದೆ ಕೂಡ ಇದಕ್ಕೆ ಅನ್ವಯ ಆಗಿರಲಿಲ್ಲ. ಇನ್ನು, ಈ ಬೆಳವಣಿಗೆ ಬೆನ್ನಲ್ಲೇ ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ನಿತೀಶ್​ ಕುಮಾರ್​ ರಾಜೀನಾಮೆ ನೀಡಿದ್ದರು.

ಅರುಣಾಚಲದಲ್ಲಿ ಜೆಡಿಯು ಶಾಸಕರ ಪಕ್ಷಾಂತರಕ್ಕೂ ಬಿಹಾರ ಮೈತ್ರಿಕೂಟಕ್ಕೂ ಸಂಬಂಧವಿಲ್ಲ: ಸುಶೀಲ್ ಕುಮಾರ್ ಮೋದಿ

Published On - 6:19 pm, Wed, 30 December 20

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us