ಚೆನ್ನೈ: ಗುದನಾಳದಲ್ಲಿ 9 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ 17 ಜನರನ್ನು ಪೊಲೀಸರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಅಲ್ಲದೆ, ಇವರಿಂದ ಬರೋಬ್ಬರಿ 9 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.
ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಮಾಹಿತಿ ಪಡೆದ ತೆರಿಗೆ ಅಧಿಕಾರಿಗಳು, ಚೆನ್ನೈ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ ದುಬೈನಿಂದ ಚೆನ್ನೈಗೆ ಬಂದ 17 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಸಂಪೂರ್ಣವಾಗಿ ಪರೀಕ್ಷೆ ಮಾಡಿದಾಗ ಏಳು ಜನರು ತಮ್ಮ ಗುದನಾಳದಲ್ಲಿ ಚಿನ್ನವನ್ನು ಇಟ್ಟುಕೊಂಡಿದ್ದರು. ಇದರ ತೂಕ 9.03 ಕೆಜಿ ಇತ್ತು. ಸೀಜ್ ಮಾಡಲಾದ ಚಿನ್ನದ ಬೆಲೆ ಸುಮಾರು 5 ಕೋಟಿ ರೂಪಾಯಿ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಇನ್ನು, ಬಂಧಿತರು ಬ್ಯಾಗ್ ಹಾಗೂ ಜೇಬಿನಲ್ಲೂ ಚಿನ್ನವನ್ನು ಇಟ್ಟುಕೊಂಡಿದ್ದರು. ಅಲ್ಲದೆ, ಕುತ್ತಿಗೆಗೆ ಇವರು ದೊಡ್ಡ ದೊಡ್ಡ ಚಿನ್ನದ ಸರ ಹಾಕಿಕೊಂಡಿದ್ದರು. ಚಿನ್ನವನ್ನು ಪೇಸ್ಟ್ ಮಾಡಿ, ಅದು ಘನ ರೂಪಕ್ಕೆ ಬಂದ ನಂತರ ಇವರು ಗುದದ್ವಾರದಲ್ಲಿ ಇಟ್ಟುಕೊಂಡಿದ್ದರು.
24 ಗಂಟೆಗಳಲ್ಲಿ 400 ರೂ ಏರಿಕೆ ಕಂಡ ಚಿನ್ನ..! ಇಂದಿನ ಚಿನ್ನದ ದರ ಹೀಗಿದೆ