ನೋಟ್ ಬ್ಯಾನ್ ವದಂತಿಗೆ RBI ಸ್ಪಷ್ಟನೆೆ.. ದೇಶದಲ್ಲಿ ಸದ್ಯಕ್ಕೆ ಯಾವುದೇ ನೋಟ್​ ಬ್ಯಾನ್​ ಖಂಡಿತ ಆಗಲ್ಲ!

ಕಳೆದ ಹಲವು ದಿನಗಳಿಂದ ಹಳೆ ನೂರು ರೂಪಾಯಿ ನೋಟುಗಳು ಕೆಲವೇ ದಿನಗಳಲ್ಲಿ ಬ್ಯಾನ್ ಆಗುತ್ತೆ ಅನ್ನೋ ಸುದ್ದಿ ಭಾರಿ ಹಲ್​ಚಲ್ ಸೃಷ್ಟಿಸಿದೆ. ಆದ್ರೆ, ಆರ್​ಬಿಐ ಈ ಕುರಿತು ಸ್ಪಷ್ಟನೆ ನೀಡಿದ್ದು, ಈ ರೀತಿಯ ಯಾವ ಆಲೋಚನೆಗಳು ನಮ್ಮ ಮುಂದಿಲ್ಲ ಅಂತಾ ಸ್ಪಷ್ಟಪಡಿಸಿದೆ.

ನೋಟ್ ಬ್ಯಾನ್ ವದಂತಿಗೆ RBI ಸ್ಪಷ್ಟನೆೆ.. ದೇಶದಲ್ಲಿ ಸದ್ಯಕ್ಕೆ ಯಾವುದೇ ನೋಟ್​ ಬ್ಯಾನ್​ ಖಂಡಿತ ಆಗಲ್ಲ!
ನೂರು ರೂಪಾಯಿ ನೋಟುಗಳು
Follow us
ಆಯೇಷಾ ಬಾನು
|

Updated on: Jan 25, 2021 | 6:33 AM

ದೆಹಲಿ: ದೇಶದಲ್ಲಿ ಮತ್ತೆ ನೋಟ್ ಬ್ಯಾನ್ ಆಗುತ್ತಂತೆ. ಈಗ ಚಾಲ್ತಿಯಲ್ಲಿರೋ ಹಳೆಯ 100 ರೂಪಾಯಿ, 10 ರೂಪಾಯಿ, 5 ರೂಪಾಯಿ ನೋಟುಗಳು ಬ್ಯಾನ್ ಆಗುತ್ವಂತೆ. ಶೀಘ್ರದಲ್ಲೇ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡ್ತಾರಂತೆ. ಆರ್​ಬಿಐ ಕೂಡ ಈ ಬಗ್ಗೆ ನೋಟಿಸ್ ಹೊರಡಿಸುತ್ತಂತೆ. ಹೀಗೆ ಅಂತೆ ಕಂತೆ ಸುದ್ದಿಗಳು ದೇಶದಲ್ಲಿ ಓಡಾಡ್ತಿವೆ. ಆದ್ರೆ, ಇದ್ಯಾವುದಕ್ಕೂ ನೀವು ಚಿಂತೆ ಮಾಡ್ಬೇಡಿ ಅಂತಾ ಆರ್​ಬಿಐ ಹೇಳಿದೆ.

ಸುದ್ದಿ ತಿರುಚಿದ್ದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗರಂ ಹಳೆಯ 100 ರೂಪಾಯಿ, 10 ರೂಪಾಯಿ, 5 ರೂಪಾಯಿಗಳನ್ನ ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಬ್ಯಾನ್ ಮಾಡುತ್ತೆ ಅನ್ನೋ ಸುದ್ದಿ ಸಾರ್ವಜನಿಕ ವಲಯದಲ್ಲಿ ಓಡಾಡುತ್ತಿತ್ತು. ಇದಕ್ಕೆ ಆರ್​ಬಿಐ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಯಾವುದೇ ಕಾರಣಕ್ಕೂ ನೋಟ್ ಬ್ಯಾನ್ ಆಗಲ್ಲ. ನಾವು ಹಳೆಯ ಹರಿದ ಮತ್ತು ಕೊಳೆಯಾದ ನೋಟುಗಳು ಬ್ಯಾಂಕುಗಳಿಗೆ ಬಂದರೆ, ಅವರನ್ನ ಮತ್ತೆ ಗ್ರಾಹಕರಿಗೆ ನೀಡಬೇಡಿ ಅಂತಾ ಹೇಳಿದ್ದೇವೆ. ಮಾರ್ಚ್ ಅಥವಾ ಏಪ್ರಿಲ್ ಬಳಿಕವೂ ಹಳೆಯ ನೋಟುಗಳು ಚಲಾವಣೆಯಲ್ಲಿ ಇರುತ್ತವೆ. ಈ ಕುರಿತು ದೇಶದ ಜನ ಚಿಂತಿಸೋದು ಬೇಡ ಅಂತಾ ಹೇಳಿದೆ.

ಹರಿದ ಮತ್ತು ಕೊಳೆಯಾದ ನೋಟುಗಳು ಬ್ಯಾಂಕ್​ಗೆ ಬಂದರೆ ಅವನ್ನ ಗ್ರಾಹಕರಿಗೆ ನೀಡಬೇಡಿ ಅಂತಾ ಹೇಳಿರೋದು ನಿಜ. ಹೀಗೆಂದ ಮಾತ್ರಕ್ಕೆ ಹಳೆಯ ನೋಟುಗಳು ಚಲಾವಣೆಯಲ್ಲಿ ಇರಲ್ಲ ಅಂತಾ ನಾವು ಹೇಳಿಲ್ಲ ಅಂತಾ ಆರ್​ಬಿಐ ಹೇಳಿದೆ. ಅಲ್ದೆ, ನಾವು ಹೇಳಿದ್ದನ್ನ ಯಾರೋ ತಿರುಚಿ ಸುದ್ದಿ ಮಾಡಿದ್ದಾರೆ. ಇದನ್ನ ಜನ ನಂಬಿದ್ದಾರೆ. ಇದಕ್ಕೆ ಆರ್​ಬಿಐ ಏನೂ ಮಾಡೋಕೆ ಆಗುತ್ತೆ ಅಂತಾ ಫುಲ್ ಗರಂ ಆಗಿದೆ.

2016ರಲ್ಲಿ ಆದ ನೋಟ್ ಬ್ಯಾನ್ ಶಾಕ್​ನಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಇದರ ನಡುವೆ ಕೊರೊನಾ ಮಹಾಮಾರಿ ದೇಶದ ಜನರಿಗೆ ಮಾತ್ರವೇ ಅಲ್ಲ.. ವಿಶ್ವದ ಜನರಿಗೆ ಭರ್ಜರಿ ಹೊಡೆತ ಕೊಟ್ಟಿದೆ. ಇಂತಹುದರ ನಡುವೆ ದೇಶದಲ್ಲಿ ಮತ್ತೊಮ್ಮೆ ನೋಟ್ ಬ್ಯಾನ್ ಆಗುತ್ತೆ ಅನ್ನೋ ಸುದ್ದಿ ಜನರಿಗೆ ಭಾರಿ ಆಘಾತ ಮೂಡಿಸಿತ್ತು. ಇದೆಲ್ಲದಕ್ಕೂ ಈಗ ಆರ್​ಬಿಐ ತೆರೆ ಎಳೆದಿದ್ದು, ಯಾವುದೇ ಕಾರಣಕ್ಕೂ ಮತ್ತೊಮ್ಮೆ ನೋಟ್ ಬ್ಯಾನ್ ಮಾಡಲ್ಲ ಅಂತಾ ಹೇಳಿ ಎಲ್ಲದಕ್ಕೂ ತೆರೆ ಎಳೆದು, ಜನ ಸಾಮಾನ್ಯರು ನಿರಾಳವಾಗುವಂತೆ ಮಾಡಿದೆ.

ಇನ್ನೂ ಮುಗಿದಿಲ್ಲ ನೋಟ್​ ಬ್ಯಾನ್​ ಗೋಳು..