AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಢನಂಬಿಕೆಗೆ ಪೈಶಾಚಿಕ ಕೃತ್ಯ.. ಹೆಣ್ಣು ಮಕ್ಕಳ ದಿನದಂದೆ ದೇವರ ಹೆಸರಿನಲ್ಲಿ ಹೆತ್ತ ಮಕ್ಕಳನ್ನೇ ಕೊಂದ ತಂದೆ-ತಾಯಿ

ಇಡೀ ರಾಷ್ಟ್ರವೇ ನಿನ್ನೆ ಹೆಣ್ಣು ಮಕ್ಕಳ ದಿನಾಚರಣೆ ಅಂತ ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆಯಿಂದ ಬೀಗ್ತಾ ಇದ್ರೆ ಆಂಧ್ರಪ್ರದೇಶದಲ್ಲೊಂದು ಅತ್ಯಂತ ಘೋರ ಘಟನೆಯೊಂದು ನಡೆದು ಹೋಗಿದೆ.

ಮೂಢನಂಬಿಕೆಗೆ ಪೈಶಾಚಿಕ ಕೃತ್ಯ.. ಹೆಣ್ಣು ಮಕ್ಕಳ ದಿನದಂದೆ ದೇವರ ಹೆಸರಿನಲ್ಲಿ ಹೆತ್ತ ಮಕ್ಕಳನ್ನೇ ಕೊಂದ ತಂದೆ-ತಾಯಿ
Follow us
ಆಯೇಷಾ ಬಾನು
|

Updated on:Jan 25, 2021 | 6:59 AM

ಜನವರಿ 24ರಂದು ರಾತ್ರಿ ಆಂಧ್ರಪ್ರದೇಶದ ಮದನಪಲ್ಲಿ ನಗರ ದಂಗಾಗಿತ್ತು.. ಜನ ಮನೆಯಿಂದ ಹೊರ ಬರೋಕು ಭಯ ಬೀಳ್ತಿದ್ರು. ಹೆತ್ತ ತಂದೆ ತಾಯಿಯ ರಕ್ಕಸ ಏಟಿಗೆ ಹೆಣ್ಣು ಮಕ್ಕಳಿಬ್ಬರು ಬರ್ಬರವಾಗಿ ಹತ್ಯೆಯಾಗಿದ್ರು. ತಾವೇ ಸಾಕಿ, ಬೆಳೆಸಿದ ಇಬ್ಬರು ಹೆಣ್ಣು ಮಕ್ಕಳನ್ನ ಅಮಾನುಷವಾಗಿ ತಂದೆ ತಾಯಿಯೇ ಕೊಂದು ಹಾಕಿದ್ರು.

ಹೌದು.. ಇದು ಅತ್ಯಂತ ಘೋರ.. ಅತ್ಯಂತ ನೀಚಾತಿ ಕೃತ್ಯ.. ಮದನಪಲ್ಲಿಯ ಪ್ರತಿಷ್ಠಿತ ಶಿಕ್ಷಣೋದ್ಯಮಿಯಾಗಿರೋ ದಂಪತಿಯೇ ಧಾರ್ಮಿಕ ಅಂಧತ್ವದಲ್ಲಿ ಮುಳುಗಿ ತಮ್ಮ 22 ವರ್ಷದ ಮಗಳು ಹಾಗೂ 27 ವರ್ಷದ ಮತ್ತೊಬ್ಬ ಮಗಳನ್ನ ಡಂಬಲ್ಸ್‌ನಿಂದ ಹೊಡೆದು ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ಆಧ್ಯಾತ್ಮಿಕ ಗುರು ಮೆಹರ್‌ ಬಾಬಾ ಅನುಯಾಯಿಗಳಾಗಿದ್ದ ಪುರುಷೋತ್ತಮ್‌ ನಾಯ್ಡು ಹಾಗೂ ವಿ. ಪದ್ಮಜಾ ತಮ್ಮ ಮಕ್ಕಳನ್ನೇ ಬಲಿ ಕೊಟ್ಟಿದ್ದಾರೆ.

ಪೋಷಕರಲ್ಲ ಹಂತಕರು ಜನವರಿ 24 ಅಂದ್ರೆ ನಿನ್ನೆ ಕಲಿಯುಗದ ಅಂತ್ಯ ಅಂತ ಪರಿಬಾವಿಸಿಕೊಂಡು, ನಮ್ಮ ಮಕ್ಕಳನ್ನ ಕೊಂದ್ರೆ ಮತ್ತೆ ಮರುದಿನವೇ ಬದುಕಿ ಬರ್ತಾರೆ ಅನ್ನೋ ಅಂಧ ನಂಬಿಕೆಯಿಂದ ಈ ಹೀನ ಕೃತ್ಯ ಎಸಗಿದ್ದಾರಂತೆ. ಮದನಪಲ್ಲಿಯಲ್ಲಿ ಮಾಸ್ಟರ್ ಮೈಂಡ್ಸ್‌ ಐಐಟಿ ಟ್ಯಾಲೆಂಟ್ಸ್ ಶಾಲೆ ನಡೆಸ್ತಿರೋ ಪುರುಷೋತ್ತಮ್‌ ನಾಯ್ಡು ದಂಪತಿ ಹುಚ್ಚಾಟಕ್ಕೆ ಇಡೀ ಮನುಕುಲವೇ ಬೆಚ್ಚಿಬಿದ್ದಿದೆ. ದಂಪತಿಯ ಹಿರಿಯ ಪುತ್ರಿ 27 ವರ್ಷದ ಅಲೆಖ್ಯಾ ಎಂಬಿಎ ಬಳಿಕ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಉದ್ಯೋಗದಲ್ಲಿದ್ದಳು.

ಮತ್ತೊಬ್ಬ ಮಗಳು 22 ವರ್ಷದ ದಿವ್ಯಾ ಎ.ಆರ್ ರೆಹಮಾನ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಮ್ಯೂಸಿಕ್‌ ಕೋರ್ಸ್‌ ಮಾಡ್ತಿದ್ದಳು. ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಮಕ್ಕಳನ್ನ ಕೊಂದ ದಂಪತಿಯ ವಿಕೃತಿ ಗೊತ್ತಾಗ್ತಿದ್ದಂತೆ ಮದನಪಲ್ಲಿ ಪೊಲೀಸರು ದೌಡಾಯಿಸಿದ್ರು. ಶ್ರೀ ಶಿರಡಿ ಸಾಯಿ ಬಾಬಾ ಅಪಾರ್ಟ್‌ಮೆಂಟ್ನಲ್ಲಿ ಭಾರಿ ಹೈಡ್ರಾಮವೇ ನಡೆದುಹೋಯ್ತು. ದಂಪತಿ ಯಾರನ್ನೂ ಮನೆಯೊಳಗೆ ಬಿಟ್ಟುಕೊಂಡಿಲ್ಲ. ಜನವರಿ 25 ಅಂದ್ರೆ ಇವತ್ತು ನಮ್ಮ ಮಕ್ಕಳಿಗೆ ಜೀವ ಬರುತ್ತೆ ಅಂತಲೇ ವಾದಿಸ್ತಿದ್ರು.

ಭೀಕರ ಕೊಲೆಗೆ ಬೆಚ್ಚಿಬಿದ್ದ ಆಂಧ್ರಪ್ರದೇಶ ಅಷ್ಟಕ್ಕೂ ಅವತಾರ ಪುರುಷ ಹಾಗೂ ಆಧ್ಯಾತ್ಮ ಗುರು ಖ್ಯಾತಿಯ ಮೆಹರ್‌ ಬಾಬಾ ಹಾಗೂ ಶಿರಡಿ ಸಾಯಿ ಬಾಬಾ ಆರಾಧಕರಾಗಿರೋ ಪುರುಷೋತ್ತಮ್‌ ನಾಯ್ಡು ವಿಕೃತಿ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ದೇವರ ಕೋಣೆಯಲ್ಲೇ ಹೆಣ್ಣು ಮಕ್ಕಳಿಬ್ಬರನ್ನೂ ವಿವಸ್ತ್ರಗೊಳಿಸಿ ಪೂಜೆ ಮಾಡಿ ಆನಂತರ ಡಂಬಲ್ಸ್‌ ಮೂಲಕ ಹಲ್ಲೆ ಮಾಡಿ ಸಾಯಿಸಿದ್ದಾರೆ ಎನ್ನಲಾಗಿದೆ.

ಒಟ್ನಲ್ಲಿ ತಮ್ಮಿಬ್ಬರು ಹೆಣ್ಣು ಮಕ್ಕಳನ್ನ ದೇವರ ಹೆಸರಿನಲ್ಲಿ ಹತ್ಯೆಗೈದಿರೋದು ಮಾತ್ರ ನಿಜಕ್ಕೂ ದುರಂತ. ಈ ಅಮಾನುಷ ಪ್ರಕರಣ ಹೇಗಾಯ್ತು.. ಆರೋಪಿ ದಂಪತಿ ಯಾಕೆ ಇಂಥಾ ಮನಸ್ಥಿತಿಗೆ ತಲುಪಿದ್ರು ಅನ್ನೋದು ಮಾತ್ರ ಪೊಲೀಸರ ತನಿಖೆಯಿಂದ ಬಯಲಾಗ್ಬೇಕಿದೆ. ಅದೇನೆ ಇದ್ರೂ ತಾವು ಹೆತ್ತು ಹೊತ್ತು ಸಾಕಿ ಸಲುಹಿದ ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನ ಹೀಗೆ ಅಮಾನುಷವಾಗಿ ಕೊಂದು ಹಾಕಿರೋದು ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

ಕೊರೊನಾ ಬಂತು.. ಮೂಢನಂಬಿಕೆ ಹೆಚ್ಚಾಯ್ತು: ಜನರಿಂದ ರಾಕ್ಷಸಿ ಪೂಜೆ, ಎಲ್ಲಿ?

Published On - 6:55 am, Mon, 25 January 21

ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ