ಇ.ಡಿ. ಅಧಿಕಾರಿಗಳು ಕಿರುಕುಳ ನೀಡುತ್ತಾರೆ, ಬೆದರಿಸುತ್ತಾರೆ: ವೆಂಕಯ್ಯ ನಾಯ್ಡುರಿಗೆ ಪತ್ರ ಬರೆದ ಶಿವಸೇನೆ ಎಂಪಿ ಸಂಜಯ್ ರಾವತ್​

| Updated By: Lakshmi Hegde

Updated on: Feb 09, 2022 | 4:49 PM

ಬಿಜೆಪಿಯಿಂದ ಬೇರ್ಪಟ್ಟಾಗಿನಿಂದಲೂ ಕೇಂದ್ರ ಜಾರಿ ನಿರ್ದೇಶನಾಲಯ ಸೇರಿ ಇನ್ನಿತರ ತನಿಖಾ ದಳಗಳು ಶಿವಸೇನೆ ಸಂಸದರು, ಇನ್ನಿತರ ಮುಖಂಡರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡುತ್ತಿವೆ ಎಂದು ಸಂಜಯ್​ ರಾವತ್ ಆರೋಪಿಸಿದ್ದಾರೆ.

ಇ.ಡಿ. ಅಧಿಕಾರಿಗಳು ಕಿರುಕುಳ ನೀಡುತ್ತಾರೆ, ಬೆದರಿಸುತ್ತಾರೆ: ವೆಂಕಯ್ಯ ನಾಯ್ಡುರಿಗೆ ಪತ್ರ ಬರೆದ ಶಿವಸೇನೆ ಎಂಪಿ ಸಂಜಯ್ ರಾವತ್​
ಸಂಜಯ್ ರಾವುತ್
Follow us on

ಶಿವಸೇನೆ ಎಂಪಿ ಸಂಜಯ್​ ರಾವತ್​ಗೆ (Shiv Sena MP Sanjay Raut)ಇದೀಗ ಇ.ಡಿ. (ED) ಭಯ ಶುರುವಾಗಿದೆ. ಅದರ ಬೆನ್ನಲ್ಲೇ ಅವರು ಉಪ ರಾಷ್ಟ್ರಪತಿ ಮತ್ತು ರಾಜ್ಯ ಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡುರಿಗೆ (M Venkaiah Naidu) ಪತ್ರ ಬರೆದು,  ನಮ್ಮ ಪಕ್ಷ ಬಿಜೆಪಿ ಮೈತ್ರಿಯನ್ನು ಕಡಿದುಕೊಂಡಾಗಿನಿಂದಲೂ ಕೂಡ, ನಮ್ಮ ಪಕ್ಷದ ನಾಯಕರು ಮತ್ತು ಅವರ ಸಂಬಂಧಿಗಳ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಇತರ ಕೇಂದ್ರ ತನಿಖಾ ದಳಗಳಿಂದ ದಾಳಿಯಾಗುತ್ತಿದೆ. ನಮ್ಮ ಪಕ್ಷ ಅಂತಲ್ಲ, ಪ್ರತಿಪಕ್ಷಗಳ ಹಲವು ಸಂಸದರು, ಅವರ ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರ ವಿರುದ್ಧ ಕೇಂದ್ರ ತನಿಖಾ ದಳಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. 

ನಾನು ಮೂರು ದಶಕಗಳ ಹಿಂದೆ ರಾಜಕೀಯ ಜೀವನ ಪ್ರಾರಂಭಿಸಿದೆ. ಅಂದಿನಿಂದಲೂ ಶಿವಸೇನೆಯಲ್ಲಿಯೇ ಇದ್ದಾರೆ. ನಮ್ಮ ಶಿವಸೇನೆ ಪಕ್ಷ ಇದೀಗ ಮಹಾರಾಷ್ಟ್ರದಲ್ಲಿ ಎನ್​ಸಿಪಿ ಮತ್ತು ಕಾಂಗ್ರೆಸ್​ ಜತೆಗೂಡಿ ಸರ್ಕಾರ ರಚನೆ ಮಾಡಿದ್ದರೂ ಅದಕ್ಕಿಂತ ಮೊದಲು 25ವರ್ಷ ಬಿಜೆಪಿಯೊಂದಿಗೆ ಮೈತ್ರಿಯಲ್ಲಿತ್ತು. ಅಷ್ಟೇ ಅಲ್ಲ, ಬಿಜೆಪಿ-ಶಿವಸೇನೆ ಮೈತ್ರಿ ಮಹಾರಾಷ್ಟ್ರದಲ್ಲಿ ಸರ್ಕಾರವನ್ನೂ ರಚಿಸಿತ್ತು. ಆದರೆ ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಬೇರ್ಪಟ್ಟೆವು. ಆದರೆ ಹಾಗೆ ಬಿಜೆಪಿಯಿಂದ ಬೇರ್ಪಟ್ಟಾಗಿನಿಂದಲೂ ಕೇಂದ್ರ ಜಾರಿ ನಿರ್ದೇಶನಾಲಯ ಸೇರಿ ಇನ್ನಿತರ ತನಿಖಾ ದಳಗಳು ಶಿವಸೇನೆ ಸಂಸದರು, ಇನ್ನಿತರ ಮುಖಂಡರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡುತ್ತಿವೆ. ಅಂದರೆ ಬಿಜೆಪಿಯೇ ಈ ತನಿಖಾದಳಗಳನ್ನು ನಮ್ಮ ಮೇಲೆ ಛೂ ಬಿಡುತ್ತಿದೆ. ಇನ್ನು ಜಾರಿ ನಿರ್ದೇಶನಾಲಯದ ಸಿಬ್ಬಂದಿ, ನಮ್ಮ ಪಕ್ಷದ ಸಂಸದರು, ರಾಜಕಾರಣಿಗಳು, ಅವರ ಪರಿಚಯಸ್ಥರು, ಕುಟುಂಬದವರಿಗೆ ಕಿರುಕುಳ ನೀಡುತ್ತಿದ್ದಾರೆ. ಬೆದರಿಸುತ್ತಿದ್ದಾರೆ. ತಮಗೆ ಬೇಕಾದಂತೆ ಅವರಿಂದ ಮಾಹಿತಿ ಕೆದಕಲು ಏನು ಬೇಕೋ ಅದನ್ನೆಲ್ಲ ಮಾಡುತ್ತಾರೆ ಎಂದು ಸಂಜಯ್​ ರಾವತ್​ ಪತ್ರದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ತಾಯಿಯಾಗುತ್ತಿರುವ ಕಾಜಲ್​ಗೂ ಎದುರಾಯ್ತು ಬಾಡಿ ಶೇಮಿಂಗ್; ಕೀಳು ಮನಸ್ಥಿತಿಗಳಿಗೆ ನಟಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

Published On - 9:08 am, Wed, 9 February 22