Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯಾಗುತ್ತಿರುವ ಕಾಜಲ್​ಗೂ ಎದುರಾಯ್ತು ಬಾಡಿ ಶೇಮಿಂಗ್; ಕೀಳು ಮನಸ್ಥಿತಿಗಳಿಗೆ ನಟಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

Kajal Aggarwal: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ತಾಯಿಯಾಗುತ್ತಿದ್ದಾರೆ. ಇತ್ತೀಚೆಗೆ ಅವರು ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದರು. ಆದರೆ ಅವರಿಗೆ ಬಾಡಿ ಶೇಮಿಂಗ್ ಎದುರಾಗಿದೆ. ಈ ಕುರಿತು ನಟಿ ಹೇಳಿಕೊಂಡಿದ್ದಾರೆ.

ತಾಯಿಯಾಗುತ್ತಿರುವ ಕಾಜಲ್​ಗೂ ಎದುರಾಯ್ತು ಬಾಡಿ ಶೇಮಿಂಗ್; ಕೀಳು ಮನಸ್ಥಿತಿಗಳಿಗೆ ನಟಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?
ಕಾಜಲ್ ಅಗರ್ವಾಲ್Image Credit source: Kajal Aggarwal/ Instagram
Follow us
TV9 Web
| Updated By: shivaprasad.hs

Updated on: Feb 09, 2022 | 4:36 PM

ಸಾಮಾಜಿಕ ಜಾಲತಾಣಗಳು ತಾರೆಯರಿಗೆ ಅಭಿಮಾನಿಗಳೊಂದಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸೇತುವೆ. ಆದರೆ ಎಲ್ಲಾ ತಾರೆಯರಿಗೂ ಇದು ಒಳ್ಳೆಯ ಅನುಭವವೇ ಆಗಿರುತ್ತದೆ ಎಂದೇನೂ ಇಲ್ಲ. ಕಾರಣ, ನಟಿಯರಿಗೆ ಬಾಡಿಶೇಮಿಂಗ್, ಟ್ರೋಲ್ ಕಿರಿಕಿರಿಗಳು ಪ್ರತಿನಿತ್ಯ ಎದುರಾಗುತ್ತವೆ. ಇದನ್ನೆಲ್ಲವನ್ನೂ ಎದುರಿಸಿ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ನೆಲೆಯೂರಬೇಕಾಗುತ್ತದೆ. ಹಲವು ತಾರೆಯರು ಟ್ರೋಲ್ ಹಾಗೂ ಬಾಡಿ ಶೇಮಿಂಗ್​ ಮೊದಲಾದವುಗಳನ್ನು ನಿರ್ಲಕ್ಷಿಸುತ್ತಾರೆ. ಮತ್ತಷ್ಟು ಜನರು ಖಡಕ್ ಆಗಿ ಪ್ರತಿಕ್ರಿಯೆ ನೀಡುತ್ತಾರೆ. ಅಥವಾ ಟ್ರೋಲ್ ಮಾಡಿದವರನ್ನು ಬಹಿರಂಗವಾಗಿ ತಿಳಿಸಿ, ಸರಿಯಾದ ಶಾಸ್ತಿ ಮಾಡುತ್ತಾರೆ. ಕೆಲವು ನಟಿಯರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದೂ ಇದೆ. ಇದೀಗ ಬಹುಭಾಷಾ ನಟಿ ಕಾಜಲ್ ಅಗರ್ವಾಲ್​ಗೆ (Kajal Aggarwal) ಬಾಡಿ ಶೇಮಿಂಗ್​ನ (Body Shaming) ಕರಾಳ ಅನುಭವವಾಗಿದೆ. ಈ ಕುರಿತು ನಟಿ ವಿಸ್ತಾರವಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಪ್ರಸ್ತುತ ಕಾಜಲ್ ಅಗರ್ವಾಲ್ ತಾಯಿಯಾಗುತ್ತಿರುವ ಕಾರಣ, ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ದುಬೈನಲ್ಲಿ ಪತಿ ಗೌತಮ್ ಕಿಚ್ಲು ಜತೆ ಅವರು ಸಂತಸದಿಂದ ದಿನಗಳನ್ನು ಕಳೆಯುತ್ತಿದ್ದಾರೆ. ತಮ್ಮ ಪ್ರವಾಸದ ಚಿತ್ರಗಳನ್ನು ಇತ್ತೀಚೆಗೆ ಕಾಜಲ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಕಾಜಲ್ ಅವರ ಸೌಂದರ್ಯವನ್ನು ಹೊಗಳಿದ್ದರು. ಆದರೆ ಕೆಲವಷ್ಟು ಜನರು ತಾಯಿಯಾಗುತ್ತಿರುವ ಕಾಜಲ್ ಅವರ ದೇಹದ ಕುರಿತು ಕೀಳು ಅಭಿರುಚಿಯ ಕಾಮೆಂಟ್​ಗಳನ್ನು ಹರಿಬಿಟ್ಟಿದ್ದರು. ಅಲ್ಲದೇ ನಟಿಯ ಸೌಂದರ್ಯದ ಕುರಿತು ಬಾಡಿಶೇಮಿಂಗ್ ಮಾಡಿದ್ದರು. ಇದು ಕಾಜಲ್ ಗಮನಕ್ಕೆ ಬಂದಿದೆ.

ಬಾಡಿಶೇಮಿಂಗ್ ಕಾಮೆಂಟ್​ಗಳಿಗೆ ಕಾಜಲ್ ಪ್ರತಿಕ್ರಿಯೆ ಏನಿತ್ತು?

ಕಾಜಲ್ ಅಗರ್ವಾಲ್ ತಮ್ಮ ಪೋಸ್ಟ್​ಗೆ ಬಂದಿರುವ ಅವಾಚ್ಯ ಕಾಮೆಂಟ್​ಗಳನ್ನು ಗಮನಿಸಿದ್ದಾರೆ. ಅದರ ವಿರುದ್ಧ ಅವರು ಅಸಮಾಧಾನ ತೋರ್ಪಡಿಸುವ ಬದಲು, ಅರಿವಿಲ್ಲದವರಿಗೆ ತಿಳುವಳಿಕೆ ನೀಡಲು ಅವರು ಮುಂದಾಗಿದ್ದಾರೆ. ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹ ಬದಲಾಗಲು ಕಾರಣ ಏನು? ತಮ್ಮ ದೇಹ ಬದಲಾಗುತ್ತಿರುವುದೇಕೆ? ಮುಂದೆ ಹೇಗಿರಬಹುದು? ಅಲ್ಲದೇ ಬಾಡಿ ಶೇಮಿಂಗ್ ಮಾಡುವವರ ಒಂದು ಕಾಮೆಂಟ್​​ ಎಂತಹ ಪರಿಣಾಮ ಬೀರಬಹುದು ಎಂಬುದೆಲ್ಲವನ್ನೂ ಅವರು ತಮ್ಮ ಬರಹದಲ್ಲಿ ಬರೆದಿದ್ದಾರೆ. ಈ ಮೂಲಕ ಎಲ್ಲರಿಗೂ ಅರಿವು ಮೂಡಿಸಲು ಅವರು ಮುಂದಾಗಿದ್ದಾರೆ.

ಕಾಜಲ್ ಬರಹ ಹೀಗಿದೆ. ‘ನಾನು ನನ್ನ ಜೀವನ, ದೇಹ, ಮನೆ ಹಾಗೂ ಮುಖ್ಯವಾಗಿ ಕೆಲಸದ ಸ್ಥಳದಲ್ಲಿ ಅತ್ಯಂತ ಹೊಸದಾದ ಬೆಳವಣಿಗೆಗಳೊಂದಿಗೆ ವ್ಯವಹರಿಸುತ್ತಿದ್ದೇನೆ. ಆದರೆ ಇವುಗಳಿಗೆ ಕೀಳು ಕಾಮೆಂಟ್​ಗಳು/ ಬಾಡಿಶೇಮಿಂಗ್ ಎಳ್ಳಿನಿತೂ ಸಹಾಯ ಮಾಡುವುದಿಲ್ಲ. ನಾವು ಮತ್ತೊಬ್ಬರ ಬಗ್ಗೆ ದಯೆಯಿಂದ ಇರೋಣ ಅದು ಕಷ್ಟಕರವಾಗಿದ್ದರೆ, ನೀವೂ ಬದುಕಿ, ಮತ್ತೊಬ್ಬರನ್ನೂ ಬದುಕಲು ಬಿಡಿ!’ ಎಂದು ಬರೆದಿದ್ದಾರೆ ಕಾಜಲ್.

ಅಲ್ಲದೇ ತಾಯಿಯಾಗುತ್ತಿರುವ ಸಂದರ್ಭ ದೇಹದಲ್ಲಾಗುವ ಬೆಳವಣಿಗೆ ಬಗ್ಗೆ ವಿವರಿಸಿರುವ ಕಾಜಲ್, ‘ನನ್ನಂತೆ ಈ ಸಮಸ್ಯೆಗಳನ್ನು ಎದುರಿಸುತ್ತಿರುವ ಎಲ್ಲರೂ ಇದನ್ನು ಓದಿ. ಬಾಡಿಶೇಮಿಂಗ್ ಹಾಗೂ ಕೀಳಾಗಿ ಕಾಮೆಂಟ್ ಮಾಡುವವರಿಗೆ ಇದು ಅರ್ಥವಾಗುವುದಿಲ್ಲ. ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಸೇರಿದಂತೆ ದೇಹವು ಬದಲಾವಣೆಯಾಗುತ್ತದೆ. ಮಗು ಬೆಳೆದಂತೆ ಹಾರ್ಮೋನ್​ಗಳಲ್ಲೂ ಬದಲಾವಣೆಯಾಗುತ್ತದೆ. ನಮ್ಮ ಹೊಟ್ಟೆ ಹಾಗೂ ಸ್ತನಗಳು ದೊಡ್ಡದಾಗಿ ಮಗುವಿನ ಬೆಳವಣಿಗೆಗೆ ಸಹಾಯಕವಾಗುತ್ತದೆ. ಈ ಸಂದರ್ಭದಲ್ಲಿ ಆಗಾಗ್ಗೆ ಮೂಡ್ ಸ್ವಿಂಗ್ ಆಗುತ್ತದೆ. ಬೇಗ ದಣಿವಾಗುತ್ತದೆ. ನೆಗೆಟಿವ್ ಮನಸ್ಥಿತಿ ನಮ್ಮ ದೇಹದ ಬೆಳವಣಿಗೆಗೆ ಖಂಡಿತಾ ಒಳ್ಳೆಯದಲ್ಲ. ಇಂತಹ ಕಾಮೆಂಟ್​ಗಳು ನಮ್ಮಲ್ಲಿ ನೆಗೆಟಿವ್ ಮನಸ್ಥಿತಿ ಹುಟ್ಟಿಸಬಹುದು. ಮೂಡ್ ಸ್ವಿಂಗ್​ಗೆ ಕಾರಣವಾಗಬಹುದು’ ಎಂದಿದ್ದಾರೆ ಕಾಜಲ್.

ಅಲ್ಲದೇ ಮಗುವಿಗೆ ಜನ್ಮ ನೀಡಿದ ನಂತರ ನಮ್ಮ ದೇಹ ಮೊದಲಿನಂತೆ ಆಗಬಹುದು ಅಥವಾ ಆಗದೆಯೂ ಇರಬಹುದು. ಅದು ಸಾಮಾನ್ಯ ಮತ್ತು ಸ್ವಾಭಾವಿಕ. ಜೀವನದ ಅತ್ಯಂತ ಸುಂದರ, ಅಮೂಲ್ಯ ಕ್ಷಣವಾದ ತಾಯ್ತನವನ್ನು ಎಂದಿನ ದೈಹಿಕ ಸೌಂದರ್ಯಕ್ಕೆ ಹೋಲಿಸಿ ಹಾಳುಮಾಡಬೇಡಿ. ಮಗುವಿಗೆ ಜನ್ಮ ನೀಡುವುದು ಒಂದು ಸಂಭ್ರಮ. ಈ ಪೋಸ್ಟ್ ಮೂಲಕ ತಾಯಿಯಾಗುವ ಸುಂದರ ಅನುಭವಕ್ಕೆ ಎಲ್ಲರೂ ಸಹಕಾರ ನೀಡುತ್ತೀರಿ ಎಂದು ಭಾವಿಸುತ್ತೇನೆ’ ಎಂದು ತಮ್ಮ ಬರಹವನ್ನು ಮುಕ್ತಾಯ ಮಾಡಿದ್ದಾರೆ ಕಾಜಲ್.

ಕಾಜಲ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಕಾಜಲ್ ಬರಹಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ. ಋಣಾತ್ಮಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಧೈರ್ಯ ತುಂಬಿದ್ದಾರೆ. ಚಿತ್ರಗಳ ವಿಷಯಕ್ಕೆ ಬಂದರೆ ಕಾಜಲ್ ಸದ್ಯ ಬ್ರೇಕ್ ತೆಗೆದುಕೊಂಡಿದ್ದಾರೆ. ‘ಆಚಾರ್ಯ’ ಹಾಗೂ ‘ಹೇ ಸಿನಾಮಿಕಾ’ ಮೊದಲಾದ ಚಿತ್ರಗಳು ಕಾಜಲ್ ಬತ್ತಳಿಕೆಯಲ್ಲಿವೆ.

ಇದನ್ನೂ ಓದಿ:

Kajal Aggarwal: ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿರುವ ಕಾಜಲ್; ಈಗೆಲ್ಲಿದ್ದಾರೆ? ಫೋಟೋ ಸಮೇತ ವಿವರಿಸಿದ ನಟಿ

Akshay Kumar: ಅಕ್ಷಯ್ ಕುಮಾರ್ ನನ್ನ ಹೀರೋ; ನಂಬಿಕೆ ದ್ರೋಹ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ ಕಪಿಲ್ ಶರ್ಮಾ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್