Allu Arjun: ಅಲ್ಲು ಅರ್ಜುನ್ ‘ಪುಷ್ಪ’ಕ್ಕೆ ತಯಾರಾಗಿದ್ದು ಹೇಗೆ? ಇಲ್ಲಿದೆ ತೆರೆಯ ಹಿಂದಿನ ವಿಶೇಷ ವಿಡಿಯೋ

Pushpa The Rise: ‘ಪುಷ್ಪ’ ಪಾತ್ರಕ್ಕಾಗಿ ಅಲ್ಲು ಅರ್ಜುನ್ ತಮ್ಮ ಪಾತ್ರವನ್ನು ಸಂಪೂರ್ಣ ಬದಲಾಯಿಸಿಕೊಂಡಿದ್ದರು. ಸ್ಟೈಲ್ ಐಕಾನ್ ಆಗಿದ್ದ ಅಲ್ಲು ಅರ್ಜುನ್, ರಗಡ್ ಆಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲು ಅರ್ಜುನ್ ಗೆಟಪ್​ನ ತೆರೆಯ ಹಿಂದಿನ ಕಹಾನಿ ಇಲ್ಲಿದೆ.

Allu Arjun: ಅಲ್ಲು ಅರ್ಜುನ್ ‘ಪುಷ್ಪ’ಕ್ಕೆ ತಯಾರಾಗಿದ್ದು ಹೇಗೆ? ಇಲ್ಲಿದೆ ತೆರೆಯ ಹಿಂದಿನ ವಿಶೇಷ ವಿಡಿಯೋ
‘ಪುಷ್ಪ’ ಪಾತ್ರಕ್ಕೆ ತಯಾರಾಗುತ್ತಿರುವ ಅಲ್ಲು ಅರ್ಜುನ್Image Credit source: Pushpa/ Twitter
Follow us
| Updated By: shivaprasad.hs

Updated on: Feb 09, 2022 | 7:25 PM

‘ಪುಷ್ಪ: ದಿ ರೈಸ್’ (Pushpa The Rise) ಚಿತ್ರ ನಾಯಕ ನಟ ಅಲ್ಲು ಅರ್ಜುನ್​ಗೆ (Allu Arjun) ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದೆ. ಬಾಕ್ಸಾಫೀಸ್​ನಲ್ಲೂ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿದಿರುವ ‘ಪುಷ್ಪ’ ನಂಬರ್ 1 ಸ್ಥಾನಕ್ಕೇರಿದೆ. ಈ ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಹಿಂದಿಯಲ್ಲಿ ಪುಷ್ಪ ಬಾಲಿವುಡ್ ಚಿತ್ರಗಳ ಸ್ಪರ್ಧೆಯ ನಡುವೆಯೂ ಉತ್ತಮವಾಗಿ ಗಳಿಸಿದೆ. ಹಿಂದಿ ಅವತರಣಿಕೆಯಿಂದ 100 ಕೋಟಿ ರೂಗಳಿಗಿಂತಲೂ ಅಧಿಕ ಮೊತ್ತ ಬಾಚಿಕೊಂಡಿರುವುದು ಇದಕ್ಕೆ ಸಾಕ್ಷಿ. ಆದರೆ ಈ ಯಶಸ್ಸು ಸುಲಭವಾಗಿ ಲಭ್ಯವಾಗಿಲ್ಲ. ‘ಪುಷ್ಪ’ ಪಾತ್ರಕ್ಕಾಗಿ ಅಲ್ಲು ಅರ್ಜುನ್ ತಮ್ಮ ಪಾತ್ರವನ್ನು ಸಂಪೂರ್ಣ ಬದಲಾಯಿಸಿಕೊಂಡಿದ್ದರು. ಸ್ಟೈಲ್ ಐಕಾನ್ ಆಗಿದ್ದ ಅಲ್ಲು ಅರ್ಜುನ್, ರಗಡ್ ಆಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ನಡಿಗೆಯ ಶೈಲಿ, ಪ್ರಾದೇಶಿಕ ಭಾಷೆಯಲ್ಲಿ ಸಂಭಾಷಣೆ ಇವುಗಳ ಮೂಲಕ ಅವರು ತೀರಾ ಭಿನ್ನವಾಗಿ ಪ್ರೇಕ್ಷರನ್ನು ರಂಜಿಸಿದ್ದರು. ಇದು ಅಭಿಮಾನಿಗಳಿಗೆ ಇಷ್ಟವಾಗಿದ್ದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಟ್ರೆಂಡ್ ಆಗಿತ್ತು.

ಇದೀಗ ‘ಪುಷ್ಪ’ ಚಿತ್ರತಂಡ ತೆರೆಯ ಹಿಂದಿನ ನೈಜತೆಯನ್ನು ಅನಾವರಣ ಮಾಡಿದೆ. ಹೌದು. ಅಲ್ಲು ಅರ್ಜುನ್ ‘ಪುಷ್ಪ’ನಾಗಲು ಎಷ್ಟು ಮೇಕಪ್ ಮಾಡಲಾಗಿತ್ತು? ಇದಕ್ಕೆ ಅವರು ತಯಾರಾಗಿದ್ದು ಹೇಗೆ ಈ ಎಲ್ಲವನ್ನೂ ತೋರಿಸುವ 50 ಸೆಕೆಂಡ್​ಗಳ ವಿಡಿಯೋವನ್ನು ‘ಪುಷ್ಪ’ ಚಿತ್ರತಂಡ ಹಂಚಿಕೊಂಡಿದೆ. ಅಲ್ಲು ಅರ್ಜುನ್​ ಮೇಕಪ್​ ಮೂಲಕ ಪುಷ್ಪನಾಗಿ ಬದಲಾಗುತ್ತಿರುವುದನ್ನು ಇದರಲ್ಲಿ ಕಾಣಬಹುದಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಟ್ರೆಂಡ್ ಆಗುತ್ತಿದೆ. ಅಭಿಮಾನಿಗಳು ಅಲ್ಲು ಅವರು ಪಾತ್ರಕ್ಕಾಗಿ ಬದಲಾಗುತ್ತಿರುವುದನ್ನು ನೋಡಿ ಜೈಹೋ ಎಂದಿದ್ದಾರೆ. ಅಲ್ಲದೇ ‘ಪುಷ್ಪ: ದಿ ರೂಲ್’ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಲ್ಲು ಅರ್ಜುನ್ ‘ಪುಷ್ಪ’ನಾಗಿ ಬದಲಾಗುತ್ತಿರುವುದು; ವಿಡಿಯೋ ಇಲ್ಲಿದೆ:

ಸುಕುಮಾರ್ ನಿರ್ದೇಶನದ ‘ಪುಷ್ಪ: ದಿ ರೈಸ್’ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿತ್ತು. ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್ ತಾರೆ ಧನಂಜಯ್, ಮಲಯಾಳಂ ನಟ ಫಹಾದ್ ಫಾಸಿಲ್ ಟಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು. ಪ್ರಸ್ತುತ ‘ಪುಷ್ಪ’ ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಒಟಿಟಿಯಲ್ಲಿ ಬಿತ್ತರವಾಗುತ್ತಿದೆ. ‘ಪುಷ್ಪ’ ಚಿತ್ರದ ಎರಡನೇ ಭಾಗ ‘ಪುಷ್ಪ: ದಿ ರೂಲ್’ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಮಾರ್ಚ್​ನಿಂದ ಚಿತ್ರೀಕರಣ ಆರಂಭಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ:

Sarkaru Vaari Paata: ಮಹೇಶ್​ ಬಾಬು ಹೊಸ ಚಿತ್ರದಿಂದ ಬಿಗ್ ಅಪ್ಡೇಟ್; ಇಲ್ಲಿದೆ ಹೊಸ ಸಮಾಚಾರ

ತಾಯಿಯಾಗುತ್ತಿರುವ ಕಾಜಲ್​ಗೂ ಎದುರಾಯ್ತು ಬಾಡಿ ಶೇಮಿಂಗ್; ಕೀಳು ಮನಸ್ಥಿತಿಗಳಿಗೆ ನಟಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ