ಹೊಸ ಪ್ರಯತ್ನದೊಂದಿಗೆ ರಂಜಿಸಲು ಬಂದ ‘ಖುಷಿ 2’ ಗೀತೆ; ಲಕ್ಷಾಂತರ ವೀಕ್ಷಣೆ ಕಂಡ ಸಂತಸ
ಪ್ರತಿ ದಿನ ಹೊಸ ಹೊಸ ಹಾಡುಗಳು ಬಿಡುಗಡೆ ಆಗುತ್ತವೆ. ಆದರೆ ಹಿಟ್ ಆಗುವ ಗೀತೆಗಳ ಸಂಖ್ಯೆ ಕಡಿಮೆ. ಏನಾದರೂ ಹೊಸದಾಗಿ ಪ್ರಯತ್ನಿಸಿದಾಗಲೇ ಜನರು ಜೈಕಾರ ಹಾಕೋದು.
ಸಿನಿಮಾಗಳಲ್ಲಿ ಸಂಗೀತಕ್ಕೆ ದೊಡ್ಡ ಸ್ಥಾನವಿದೆ. ಹಾಡುಗಳ ಕಾರಣದಿಂದಲೇ ಸಿನಿಮಾ ಸೂಪರ್ ಹಿಟ್ ಆಗಿದ್ದಕ್ಕೆ ಸಾಕಷ್ಟು ಉದಾಹರಣೆ ಸಿಗುತ್ತದೆ. ಸಂಗೀತದ ಪ್ರಕಾರಗಳು ಹಲವು. ಅದಕ್ಕೆ ಭಾಷೆ ಮತ್ತು ಗಡಿಯ ಹಂಗು ಕೂಡ ಇಲ್ಲ. ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾದ ಬಳಿಕ ಕೆಲವು ಪ್ರಾದೇಶಿಕ ಗೀತೆಗಳು ಜಾಗತ್ತಿಕ ಮಟ್ಟದಲ್ಲಿ ಫೇಮಸ್ ಆಗಿದ್ದುಂಟು. ಭಾರತೀಯ ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತಗಾರರ ಸಂಖ್ಯೆಗೇನೂ ಕೊರತೆ ಇಲ್ಲ. ಅದೇ ರೀತಿ ಕನ್ನಡದಲ್ಲೂ ಕೆಲವು ಸಂಗೀತ ನಿರ್ದೇಶಕರು ಸಿನಿಮಾಗಳ ಹೊರತಾಗಿ ಸ್ವತಂತ್ರವಾಗಿ ಗುರುತಿಸಿಕೊಂಡಿದ್ದಾರೆ. ಮ್ಯೂಸಿಕ್ ವಿಡಿಯೋಗಳ ಮೂಲಕ ಹಲವರು ಜನಪ್ರಿಯತೆ ಪಡೆದಿದ್ದಾರೆ. ಏನಾದರೂ ಹೊಸ ಪ್ರಯತ್ನ ಮಾಡಬೇಕು ಎಂಬ ಹಂಬಲದೊಂದಿಗೆ ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್ ಅವರು ‘ಖುಷಿ 2’ ಗೀತೆ ಸಿದ್ಧಪಡಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿರುವ ಈ ಹಾಡು ಲಕ್ಷಾಂತರ ವೀವ್ಸ್ ಪಡೆಯುವ ಮೂಲಕ ಜನರಿಂದ ಮೆಚ್ಚುಗೆ ಗಳಿಸಿದೆ.
ಪ್ರತಿ ದಿನ ಹೊಸ ಹೊಸ ಹಾಡುಗಳು ಬಿಡುಗಡೆ ಆಗುತ್ತವೆ. ಆದರೆ ಹಿಟ್ ಆಗುವ ಗೀತೆಗಳ ಸಂಖ್ಯೆ ಕಡಿಮೆ. ಏನಾದರೂ ಹೊಸದಾಗಿ ಪ್ರಯತ್ನಿಸಿದಾಗಲೇ ಜನರು ಜೈಕಾರ ಹಾಕೋದು. ಆ ನಿಟ್ಟಿಲ್ಲಿ ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್ ಅವರು ಪ್ರಯತ್ನ ಮಾಡಿದ್ದಾರೆ. ಇದೊಂದು ಇಡಿಎಂ ಸಾಂಗ್ ಎಂದು ಅವರು ಹೇಳಿಕೊಂಡಿದ್ದಾರೆ. EDM ಸಾಂಗ್, ಅಂದರೆ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಹಾಡು. ಇದರಲ್ಲಿ ಸಾಹಿತ್ಯಕ್ಕಿಂತ ಹೆಚ್ಚಾಗಿ ಮ್ಯೂಸಿಕ್ ಇರುತ್ತದೆ. ಆ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ.
ಸ್ವತಂತ್ರ ಸಂಗೀತ ನಿರ್ದೇಶಕರಾಗಿರುವ ಹೇಮಂತ್ ಜೋಯಿಸ್ ಅವರು ಈ ಮ್ಯೂಸಿಕ್ ವಿಡಿಯೋವನ್ನು ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಮಾಡಿದ್ದಾರೆ. ಈ ಗೀತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ಅವರ ಸಂತಸಕ್ಕೆ ಕಾರಣ ಆಗಿದೆ.
ಈ ಹಿಂದೆ ಬಿಡುಗಡೆ ಆಗಿದ್ದ ‘ಖುಷಿ’ ಹಾಡಿನ ಸೀಕ್ವೆಲ್ ಆಗಿ ‘ಖುಷಿ 2’ ಮೂಡಿಬಂದಿದೆ. EDM ಪ್ರಕಾರದ ಕಾರಣದಿಂದ ಇದು ಕೊಂಚ ಸ್ಪಷಲ್ ಎನಿಸಿಕೊಂಡಿದೆ. ಅಜ್ಜಿ ಹಾಗೂ ಮೊಮ್ಮಗನ ನಡುವೆ ಇರುವ ಬಾಂಧವ್ಯದ ಮಹತ್ವ ಸಾರುವ ಈ ಗೀತೆಯನ್ನು ಹಲವರು ಮೆಚ್ಚಿಕೊಂಡಿದ್ದಾರೆ.
‘ಜನರು ಮೆಚ್ಚುವ ವಿದೇಶಿ ಹಾಡುಗಳು EDM ಫಾರ್ಮೆಟ್ನಲ್ಲಿ ಇರುತ್ತವೆ. ನಾವು ಕೂಡ ಯಾಕೆ EDM ಒಮ್ಮೆ ಟ್ರೈ ಮಾಡಬಾರದು ಅಂತ ಯೋಚಿಸಿ ‘ಖುಷಿ 2’ ಹಾಡು ರಿಲೀಸ್ ಮಾಡಿದೆವು. ಪ್ರತಿಯೊಬ್ಬರಿಗೂ ಇದು ಇಷ್ಟವಾಗುತ್ತಿದೆ. ಕನ್ನಡದಲ್ಲಿ ಈ ರೀತಿ ಹಾಡು ಮಾಡಿರೋದು ಮೊದಲ ಬಾರಿಗೆ ಅಂದರೂ ತಪ್ಪಿಲ್ಲ’ ಎಂದಿದ್ದಾರೆ ಹೇಮಂತ್ ಜೋಯಿಸ್.
ರಕ್ಷಿತ್ ತೀರ್ಥಹಳ್ಳಿ ‘ಖುಷಿ 2’ ಹಾಡನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದರೆ, ಇಂಗ್ಲಿಷ್ನಲ್ಲಿ ಚಿನ್ಮಯ್ ಬರೆದಿದ್ದಾರೆ. ಚೇತನ್ ನಾಯ್ಕ್ ಈ ಗೀತೆಗೆ ಧ್ವನಿಯಾಗಿದ್ದಾರೆ. ಹೇಮಂತ್ ಜೋಯಿಸ್ ಅವರು ಸಂಗೀತ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಹೇಮಂತ್ ಜೋಯಿಸ್ ಅವರ ಜೊತೆಗೆ ಗುಬ್ಬಿ ವೀರಣ್ಣ ಅವರ ಕುಟುಂಬದ ಕುಡಿ ಸುಂದರಶ್ರೀ ನಟಿಸಿದ್ದಾರೆ.
ಇದನ್ನೂ ಓದಿ:
ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿಬಂತು ‘ಆರಾಮ್ಸೆ’ ಮ್ಯೂಸಿಕ್ ವಿಡಿಯೋ; ಏನಿದರ ವಿಶೇಷ?
ಚಂದನ್ ಶೆಟ್ಟಿ ಹೊಸ ಸಾಂಗ್ ‘ಲಕ ಲಕ ಲ್ಯಾಂಬೋರ್ಗಿನಿ’ ಹೇಗಿದೆ? ಒಂದೇ ದಿನಕ್ಕೆ ಮಿಲಿಯನ್ ವೀಕ್ಷಣೆ