AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shiv Sena Symbol : ಸುಪ್ರೀಂಕೋರ್ಟ್​ ತಲುಪಿದ ಶಿವಸೇನೆಯ ಚಿಹ್ನೆ ವಿವಾದ, ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿದ ಉದ್ಧವ್ ಠಾಕ್ರೆ

ಶಿವಸೇನೆಯ ಚಿಹ್ನೆಯ ವಿವಾದವು ಇದೀಗ ಸುಪ್ರೀಂಕೋರ್ಟ್​ ತಲುಪಿದೆ. ಶಿವಸೇನೆ ವರ್ಸಸ್ ಶಿವಸೇನೆ ನಡುವಿನ ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣಕ್ಕೆ ಗೆಲುವು ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಮುಖಭಂಗವಾಗಿದೆ.

Shiv Sena Symbol : ಸುಪ್ರೀಂಕೋರ್ಟ್​ ತಲುಪಿದ ಶಿವಸೇನೆಯ ಚಿಹ್ನೆ ವಿವಾದ, ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿದ ಉದ್ಧವ್ ಠಾಕ್ರೆ
ಶಿವಸೇನೆ
ನಯನಾ ರಾಜೀವ್
|

Updated on: Feb 20, 2023 | 11:33 AM

Share

ಶಿವಸೇನೆಯ ಚಿಹ್ನೆಯ ವಿವಾದವು ಇದೀಗ ಸುಪ್ರೀಂಕೋರ್ಟ್​ ತಲುಪಿದೆ. ಶಿವಸೇನೆ ವರ್ಸಸ್ ಶಿವಸೇನೆ ನಡುವಿನ ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣಕ್ಕೆ ಗೆಲುವು ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಮುಖಭಂಗವಾಗಿದೆ. ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ ‘ಬಿಲ್ಲು ಬಾಣ’ವನ್ನು ಶಿಂದೆ ಬಣಕ್ಕೆ ನೀಡುವ ಮೂಲಕ ಶಿಂದೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿತ್ತು. ಶಿಂದೆ ಬಣಕ್ಕೆ ಚುನಾವಣಾ ಚಿಹ್ನೆ ‘ಬಿಲ್ಲು-ಬಾಣ’ ನೀಡುವ ಚುನಾವಣಾ ಆಯೋಗದ ನಿರ್ಧಾರವನ್ನು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಉದ್ಧವ್ ಬಣದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸಿಜೆಐ ಅವರಿಂದ ಈ ವಿಷಯದ ಬಗ್ಗೆ ಶೀಘ್ರವಾಗಿ ವಿಚಾರಣೆಗೆ ಒತ್ತಾಯಿಸಿದ್ದಾರೆ. ತಮ್ಮ ಬಣವವೇ ನಿಜವಾದ ಶಿವಸೇನಾ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡುವಂತೆ ಏಕನಾಥ ಶಿಂದೆ ಬಣ ಹಾಗೂ ಉದ್ಧವ್ ಠಾಕ್ರೆ ಬಣ ಚುನಾವಣಾ ಆಯೋಗದ ಮೊರೆ ಹೋಗಿದ್ದವು. ಆಯೋಗ ಅಂತಿಮವಾಗಿ ಬಿಲ್ಲು ಬಾಣ’ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿದೆ.

ಮತ್ತಷ್ಟು ಓದಿ: Shiv Sena Symbol ಏಕನಾಥ್ ಶಿಂಧೆ ಬಣ ಪಾಲಾದ ‘ಬಿಲ್ಲು ಬಾಣ’ ಚಿಹ್ನೆ, ಉದ್ಧವ್ ಠಾಕ್ರಗೆ ಶಾಕ್ ಕೊಟ್ಟ ಚುನಾವಣಾ ಆಯೋಗ

ಏಕನಾಥ್ ಶಿಂದೆ ಬಣದಿಂದ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರ ಪತನಗೊಂಡಿತ್ತು. ಛತ್ರಪತಿ ಶಿವಾಜಿ ಮಹಾರಾಜರ ಆಶೀರ್ವಾದದಿಂದಾಗಿ ಶಿವಸೇನೆಯ ತಮ್ಮ ಬಣಕ್ಕೆ ಬಿಲ್ಲು ಮತ್ತು ಬಾಣದ ಚಿಹ್ನೆ ಸಿಕ್ಕಿದೆ ಎಂದು ಪುಣೆಯಲ್ಲಿ ಏಕನಾಥ್ ಶಿಂದೆ ಹೇಳಿದರು. ಇದಕ್ಕೂ ಮೊದಲು, ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಶಿಂದೆ, ತಮ್ಮ ಶಿವಸೇನೆಯ ಬಣಕ್ಕೆ ಬಿಲ್ಲು ಮತ್ತು ಬಾಣದ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡುವ ಚುನಾವಣಾ ಆಯೋಗದ ನಿರ್ಧಾರವು ಸತ್ಯದ ಗೆಲುವು ಎಂದು ಹೇಳಿದ್ದರು.

ಚುನಾವಣಾ ಆಯೋಗ, ಶಿಂಧೆ ಬಣದ ಪರವಾಗಿ ತೀರ್ಪು ನೀಡುವಾಗ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಮಾಡಿದ ತಪ್ಪನ್ನು ಎತ್ತಿ ತೋರಿಸಿದೆ. 2018ರಲ್ಲಿ ಶಿವಸೇನಾ ಪಕ್ಷದ ಸಂವಿಧಾನ ಬದಲಾವಣೆ ಕುರಿತು ಚುನಾವಣಾ ಆಯೋಗಕ್ಕೆ ತಿಳಿಸಿರಲಿಲ್ಲ ಎಂದು ಆಯೋಗ ಹೇಳಿದೆ. 2018 ರಲ್ಲಿ ಶಿವಸೇನೆ ಪಕ್ಷವು ಪಕ್ಷದ ಸಂವಿಧಾನದಲ್ಲಿ ಮಾಡಿದ ಬದಲಾವಣೆಗಳು ಪ್ರಜಾಪ್ರಭುತ್ವದ ಪರವಾಗಿಲ್ಲ ಎಂದು ಆಯೋಗವು ಕಂಡುಹಿಡಿದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ