Video: ಶಿವಸೇನೆ ಗೂಂಡಾಗಳು ನನ್ನನ್ನು ಕೊಲ್ಲಲು ಪ್ರಯತ್ನಿಸಿದರು; ಹಲ್ಲೆಗೊಳಗಾಗಿ ಗಾಯಗೊಂಡ ಬಿಜೆಪಿ ಮುಖಂಡನಿಂದ ಆರೋಪ

| Updated By: Lakshmi Hegde

Updated on: Feb 07, 2022 | 5:20 PM

ಕಿರೀಟ್ ಸೋಮಯ್ಯನವರ ಮೇಲೆ ಹಲ್ಲೆಯಾಗಿದ್ದನ್ನು ಶಿವಾಜಿನಗರ ಪೊಲೀಸ್​ ಠಾಣೆ ಇನ್ಸ್​​ಪೆಕ್ಟ್​ ವಿಕ್ರಮ್​ ಗೌಡ ದೃಢಪಡಿಸಿದ್ದು, ಈ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರೂ ಸಹ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.

Video: ಶಿವಸೇನೆ ಗೂಂಡಾಗಳು ನನ್ನನ್ನು ಕೊಲ್ಲಲು ಪ್ರಯತ್ನಿಸಿದರು; ಹಲ್ಲೆಗೊಳಗಾಗಿ ಗಾಯಗೊಂಡ ಬಿಜೆಪಿ ಮುಖಂಡನಿಂದ ಆರೋಪ
ಕಿರೀಟ್ ಸೋಮಯ್ಯ
Follow us on

ಮುಂಬೈ: ತಮ್ಮ ಮೇಲೆ ಶಿವಸೇನೆ(Shiv Sena)ಯ ಗೂಂಡಾಗಳು ದಾಳಿ ನಡೆಸಿದ್ದಾಗಿ ಮಹಾರಾಷ್ಟ್ರ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ(Kirit Somaiya) ಆರೋಪಿಸಿದ್ದಾರೆ. ಪುಣೆ ಮುನ್ಸಿಪಲ್ ಕಾರ್ಪೋರೇಶನ್​​ಗೆ ಭೇಟಿ ಕೊಟ್ಟಿದ್ದಾಗ, ಅದರ ಆವರಣದಲ್ಲಿಯೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಿರೀಟ್​ ಸೋಮಯ್ಯ ಹೇಳಿದ್ದು, ಸದ್ಯ ಪೊಲೀಸರು 60-70 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಘಟನೆಗೆ ಸಂಬಂಧಪಟ್ಟಂತೆ ಇದುವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ.  ಕಿರೀಟ್ ಸೋಮಯ್ಯನವರು ಕೊವಿಡ್​ 19 ಆಸ್ಪತ್ರೆಯೊಂದಕ್ಕೆ ಸಂಬಂಧಪಟ್ಟಂತೆ ಕೆಲವು ಅಕ್ರಮಗಳ ಬಗ್ಗೆ ಮಾತನಾಡಲು ಮುನ್ಸಿಪಲ್ ಕಾರ್ಪೋರೇಶನ್​ಗೆ ತೆರಳಿದ್ದರು ಎನ್ನಲಾಗಿದೆ. 

ಕಿರೀಟ್ ಸೋಮಯ್ಯನವರ ಮೇಲೆ ಹಲ್ಲೆಯಾಗಿದ್ದನ್ನು ಶಿವಾಜಿನಗರ ಪೊಲೀಸ್​ ಠಾಣೆ ಇನ್ಸ್​​ಪೆಕ್ಟ್​ ವಿಕ್ರಮ್​ ಗೌಡ ದೃಢಪಡಿಸಿದ್ದು, ಈ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರೂ ಸಹ ದೂರು ನೀಡಿದ್ದಾರೆ. ಅವರೆಲ್ಲ ನೀಡಿದ ದೂರಿನ ಅನ್ವಯ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ. ಹಲವರು ಸೇರಿ ಕೀರಿಟ್ ಸೋಮಯ್ಯನವರ ಮೇಲೆ ಹಲ್ಲೆ ನಡೆಸಿದ್ದು, ಗಾಯಗೊಂಡ ಅವರನ್ನು ಸಂಚೇತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಕೈಯಿಗೆ ಗಾಯವಾಗಿದೆ.

ತಮ್ಮ ಮೇಲೆ ಹಲ್ಲೆ ನಡೆದ, ಜನರ ಗುಂಪೊಂದು ತಮ್ಮ ಕಾರನ್ನು ಬೆನ್ನಟ್ಟಿ ಬಂದ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಕಿರೀಟ್​ ಸೋಮಯ್ಯ, ಇವರು ಶಿವಸೇನೆಗೆ ಸೇರಿದವರು. ನನ್ನನ್ನು ಕೊಲ್ಲುವುದೇ ಶಿವಸೇನೆ ಗೂಂಡಾಗಳ ಆಶಯವಾಗಿತ್ತು ಎಂದು ಹೇಳಿದ್ದಾರೆ. ಕೊವಿಡ್​ 19 ಕೇಂದ್ರದಲ್ಲಿ ಹಗರಣ ನಡೆದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಅದನ್ನು ಹೇಳಲು ಹೋದಾಗ ನನ್ನ ಮೇಲೆ ಹಲ್ಲೆಯಾಗಿದೆ. ಕೊವಿಡ್​ 19 ಸೆಂಟರ್​ನಲ್ಲಿ ನಡೆದ ಸ್ಕ್ಯಾಮ್​​ನಲ್ಲಿ ಶಿವಸೇನೆ ಎಂಪಿ ಸಂಜಯ್ ರಾವತ್​ ಆಪ್ತ ಸುಜೀತ್​ ಪಟ್​ಕರ್​ ಕೂಡ ಭಾಗಿಯಾಗಿದ್ದಾರೆ.  ನಾನು ಸುಜೀತ್​ ಪಟ್​ಕರ್​ ವಿರುದ್ಧವೂ ಕೂಡ ದೂರು ನೀಡಿದ್ದೇನೆ ಎಂದು  ಹೇಳಿದ್ದಾರೆ. ಅಂದಹಾಗೆ ಘಟನೆ ನಡೆದದ್ದು ಫೆ.5ರಂದು ಆದರೂ ತಡವಾಗಿ ಬೆಳಕಿಗೆ ಬಂದಿದೆ. ಕಿರೀಟ್ ಸೋಮಯ್ಯ ಸದ್ಯ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.

ಇದನ್ನೂ ಓದಿ: ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್​​ಗೆ 21 ದಿನಗಳ ಪೆರೋಲ್ ಮಂಜೂರು ಮಾಡಿದ ಹರ್ಯಾಣ ಸರ್ಕಾರ