ದೆಹಲಿ: ಕಿಲ್ಲರ್ ಕೊರೊನಾ ವೈರಸ್ಗೆ ಇಡೀ ಪ್ರಪಂಚ ಹೈರಾಣಾಗಿದೆ. ಅದರಲ್ಲೂ ಇತ್ತೀಚೆಗೆ ಆತಂಕವನ್ನು ಸೃಷ್ಟಿಸುತ್ತಿರುವಂತ ವರದಿಗಳು ಹೊರಬೀಳುತ್ತಿವೆ. ಅದೇ ರೀತಿ ಚೀನಾದ ಅಧ್ಯಯನದಿಂದ ಆಘಾತಕಾರಿ ಅಂಶ ಬಯಲಾಗಿದೆ.
ಚೀನಾದ ಅಧ್ಯಯನದ ಪ್ರಕಾರ ಪುರುಷರ ವೀರ್ಯದಲ್ಲಿಯೂ ಕೊರೊನಾ ವೈರಸ್ ಇದೆಯಂತೆ. ಅಧ್ಯಯನದ ವೇಳೆ ಈ ಸ್ಫೋಟಕ ಮಾಹಿತಿ ಬಯಲಾಗಿದೆ. ಒಟ್ಟು 38 ಪುರುಷರನ್ನ ಸಂಶೋಧನೆಗೆ ಒಳಪಡಿಸಲಾಗಿತ್ತು. 38 ಪುರುಷರ ಪೈಕಿ 6 ಜನರ ವೀರ್ಯದಲ್ಲಿ ವೈರಸ್ ಪತ್ತೆಯಾಗಿದೆ. ವೈರಸ್ ಪತ್ತೆಯಾದ 6 ಜನರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಉಳಿದ ಇಬ್ಬರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.