Manipur: ಸರ್ಕಾರಿ ಅಧಿಕಾರಿಯ ನಿವಾಸದ ಮೇಲೆ ಗುಂಡಿನ ದಾಳಿ

|

Updated on: Jul 25, 2024 | 2:28 PM

ಮಣಿಪುರದಲ್ಲಿ ಸರ್ಕಾರಿ ಅಧಿಕಾರಿ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇಂಫಾಲ್ ವೆಸ್ಟ್‌ನ ಸಿಂಗ್‌ಜಮೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ದಾಳಿಯನ್ನು ಏಕೆ ಮಾಡಲಾಗಿದೆ ಮತ್ತು ಯಾರು ದಾಳಿ ಮಾಡುತ್ತಿದ್ದಾರೆಂದು ನನಗೆ ಇನ್ನೂ ಗೊಂದಲವಿದೆ ಎಂದು ರಾಬರ್ಟ್​ಸನ್​ ಹೇಳಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ಸಂಘಟನೆಯಿಂದ ಬೆದರಿಕೆ ಸಂದೇಶವಾಗಲಿ ನೇರ ಬೆದರಿಕೆಯಾಗಲಿ ಯಾವುದೂ ಬಂದಿಲ್ಲ ಎಂದರು.

Manipur: ಸರ್ಕಾರಿ ಅಧಿಕಾರಿಯ ನಿವಾಸದ ಮೇಲೆ ಗುಂಡಿನ ದಾಳಿ
Follow us on

ಮಣಿಪುರ ಗ್ರಾಹಕ ವ್ಯವಹಾರಗಳ ಆಹಾರ ಮತ್ತು ಸಾರ್ವಜನಿಕ ವಿತರಣಾ (ಸಿಎಎಫ್ ಮತ್ತು ಪಿಡಿ) ನಿರ್ದೇಶಕರ ನಿವಾಸದ ಮೇಲೆ ಅಪರಿಚಿತ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಫಾಲ್ ವೆಸ್ಟ್‌ನ ಸಿಂಗ್‌ಜಮೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ದಾಳಿಯನ್ನು ಏಕೆ ಮಾಡಲಾಗಿದೆ ಮತ್ತು ಯಾರು ದಾಳಿ ಮಾಡುತ್ತಿದ್ದಾರೆಂದು ನನಗೆ ಇನ್ನೂ ಗೊಂದಲವಿದೆ ಎಂದು ರಾಬರ್ಟ್​ಸನ್​ ಹೇಳಿದ್ದಾರೆ.

ಯಾವುದೇ ವ್ಯಕ್ತಿ ಅಥವಾ ಯಾವುದೇ ಸಂಘಟನೆಯಿಂದ ಬೆದರಿಕೆ ಸಂದೇಶವಾಗಲಿ ನೇರ ಬೆದರಿಕೆಯಾಗಲಿ ಯಾವುದೂ ಬಂದಿಲ್ಲ ಎಂದರು. ಇಬ್ಬರು ದುಷ್ಕರ್ಮಿಗಳು ನಿವಾಸದ ಮೇಲೆ 4-5 ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಘಟನೆಯ ನಂತರ ಇಬ್ಬರೂ ಪರಾರಿಯಾಗಿದ್ದಾರೆ.

ದಾಳಿಯಲ್ಲಿ ನಿವಾಸದ ಹೊರಗೆ ನಿಲ್ಲಿಸಿದ್ದ ಬಿಳಿ ಬಣ್ಣದ ಆಲ್ಟೊ ಕಾರಿನ ಮೇಲೆ 4-5 ಗುಂಡುಗಳ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸಿಂಗ್‌ಜಮೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ