IndiGo Flight ಕ್ಯಾಬಿನ್​ನಲ್ಲಿ ಹೊಗೆ; ಸಿಂಗಾಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಇಂಡೋನೇಷ್ಯಾದಲ್ಲಿ ತುರ್ತು ಭೂಸ್ಪರ್ಶ

ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ತುರ್ತ ಕಾರಣಗಳಿಂದಾಗಿ ಇಂಡೋನೇಷ್ಯಾದ ಮೆಡಾನ್​ನ ಕೌಲಾನಾಮು ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಬುಧವಾರ ತಿಳಿಸಿದೆ.

IndiGo Flight ಕ್ಯಾಬಿನ್​ನಲ್ಲಿ ಹೊಗೆ; ಸಿಂಗಾಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಇಂಡೋನೇಷ್ಯಾದಲ್ಲಿ ತುರ್ತು ಭೂಸ್ಪರ್ಶ
ಸಾಂದರ್ಭಿಕ ಚಿತ್ರ

Updated on: May 10, 2023 | 9:55 PM

ಮುಂಬೈ: ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಸಿಂಗಾಪುರಕ್ಕೆ (Singapore) ತೆರಳುತ್ತಿದ್ದ ಇಂಡಿಗೋ (IndiGo) ವಿಮಾನವನ್ನು ತುರ್ತ ಕಾರಣಗಳಿಂದಾಗಿ ಇಂಡೋನೇಷ್ಯಾದ ಮೆಡಾನ್​ನ ಕೌಲಾನಾಮು ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಬುಧವಾರ ತಿಳಿಸಿದೆ. ವಿಮಾನದ ಕ್ಯಾಬಿನ್​ನಲ್ಲಿ ಸುಟ್ಟ ವಾಸನೆ ಬಂದಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಕೌಲಾನಾಮು ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಯಿತು ಎಂದು ಏರ್​​ಲೈನ್ಸ್ ತಿಳಿಸಿದೆ.

ಘಟನೆಯ 12 ಗಂಟೆಗಳ ನಂತರವೂ ವಿಮಾನಯಾನ ಸಂಸ್ಥೆ ನಿರ್ದಿಷ್ಟ ವಿವರಗಳನ್ನು ಹಂಚಿಕೊಂಡಿಲ್ಲ. ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ, ಪ್ರಯಾಣಿಕರನ್ನು ಯಾವ ಸಮಯಕ್ಕೆ ಕಳುಹಿಸಿಕೊಡಲಾಗುತ್ತದೆ ಎಂಬ ಮಾಹಿತಿ ನೀಡಿಲ್ಲ. ಪ್ರಯಾಣಿಕರನ್ನು ಕಳುಹಿಸಲು ಪರ್ಯಾಯ ವಿಮಾನವನ್ನು ಕೌಲಾನಾಮುಗೆ ಹಾರಿಸಲಾಗುತ್ತಿದೆ ಎಂದಷ್ಟೇ ಇಂಡಿಗೋ ಹೇಳಿದೆ.

ತಿರುಚಿರಾಪಳ್ಳಿಯಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಎ320ceo 6ಇ-1007 ಸಂಖ್ಯೆಯ ವಿಮಾನವನ್ನು ಇಂಡೋನೇಷ್ಯಾದ ಕ್ವಾಲಾನಾಮು ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು. ಹಾರಾಟದ ಸಮಯದಲ್ಲಿ ಕ್ಯಾಬಿನ್‌ನಲ್ಲಿ ಸುಟ್ಟ ವಾಸನೆಯನ್ನು ಗಮನಿಸಿದ ಸಿಬ್ಬಂದಿ ಈ ಕ್ರಮ ಕೈಗೊಂಡರು ಎಂದು ಇಂಡಿಗೋ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸೈಕ್ಲೋನ್ ಮೋಚಾ: ಚಂಡಮಾರುತದ ಸಮಯದಲ್ಲಿ ಆರೋಗ್ಯ ಅಪಾಯಗಳು ಮತ್ತು ಸುರಕ್ಷತಾ ಕ್ರಮಗಳು

ಪೈಲಟ್ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೆಕಾದ ಕ್ರಮ ಅನುಸರಿಸಿದರು ಮತ್ತು ಮುನ್ನೆಚ್ಚರಿಕೆಯಾಗಿ ಹತ್ತಿರದ ವಿಮಾನ ನಿಲ್ದಾಣ, ಕ್ವಾಲಾನಾಮುವಲ್ಲಿ ಸುರಕ್ಷಿತವಾಗಿ ಲ್ಯಾಂಡ್​​ ಮಾಡಿದರು ಎಂದು ಪ್ರಕಟಣೆ ತಿಳಿಸಿದೆ.

ಲ್ಯಾಂಡಿಂಗ್ ನಂತರ ನಡೆಸಲಾದ ಆರಂಭಿಕ ತಪಾಸಣೆಗಳು ತೃಪ್ತಿಕರವಾಗಿವೆ ಎಂದು ಅದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ