ಮಣಿಪುರ ಹಿಂಸಾಚಾರದ ಬಗ್ಗೆ ಮೌನ ಮುರಿದ ಅಮಿತ್ ಶಾ; ಶಾಂತಿ ಕಾಪಾಡುವಂತೆ ಜನರಿಗೆ ಮನವಿ

|

Updated on: May 08, 2023 | 12:48 PM

ಘರ್ಷಣೆ ನಿಯಂತ್ರಿಸಲು ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಿಂಸಾಚಾರವು ಉಲ್ಬಣಗೊಳ್ಳುತ್ತಿದ್ದಂತೆ, ರಾಜ್ಯ ಸರ್ಕಾರವು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತು. ಇಲ್ಲಿ ಕರ್ಫ್ಯೂ ಅನ್ನು ವಿಧಿಸಲಾಯಿತು ಮತ್ತು ಕಂಡಲ್ಲಿ ಗುಂಡು ಹಾರಿಸಲು ಆದೇಶಿಸಲಾಯಿತು.

ಮಣಿಪುರ ಹಿಂಸಾಚಾರದ ಬಗ್ಗೆ ಮೌನ ಮುರಿದ ಅಮಿತ್ ಶಾ; ಶಾಂತಿ ಕಾಪಾಡುವಂತೆ ಜನರಿಗೆ ಮನವಿ
ಅಮಿತ್ ಶಾ
Follow us on

ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur) ಕರ್ಫ್ಯೂ ಜಾರಿಯಲ್ಲಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಹೇಳಿದ್ದು ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿದರು. ಇಂಡಿಯಾ ಟುಡೇ/ಆಜ್ ತಕ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶಾ, ಮೈತಿ ಸಮುದಾಯಕ್ಕೆ (Meitei community) ಪರಿಶಿಷ್ಟ ಪಂಗಡ-ಸ್ಥಾನಮಾನದ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಮಣಿಪುರ ಸರ್ಕಾರವು ಎಲ್ಲಾ ಮಧ್ಯಸ್ಥಗಾರರನ್ನು ಸಂಪರ್ಕಿಸುತ್ತದೆ ಎಂದು ಭರವಸೆ ನೀಡಿದರು. ನ್ಯಾಯಾಲಯವು ಆದೇಶ ನೀಡಿದೆ.ಈ ಬಗ್ಗೆ ಎಲ್ಲಾ ಸಂಬಂಧಿತ ಪಾಲುದಾರರೊಂದಿಗೆ ಚರ್ಚಿಸಲಾಗುವುದು ಮತ್ತು ಸಮಾಲೋಚನೆಯ ನಂತರ ಮಣಿಪುರ ಸರ್ಕಾರವು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಯಾವುದೇ ವ್ಯಕ್ತಿ ಅಥವಾ ಗುಂಪು ಭಯಪಡುವ ಅಗತ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಹಿಂಸಾಚಾರದಲ್ಲಿ 54 ಮಂದಿ ಸಾವಿಗೀಡಾಗಿದ್ದಾರೆ. ಸಾವಿರಾರು ಮಂದಿಯನ್ನು ಸಂಘರ್ಷ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ. ಹಿಂಸಾಚಾರದ ನಂತರ ಮಣಿಪುರ ಶಾಂತವಾಗಿದೆ. 23,000 ಕ್ಕೂ ಹೆಚ್ಚು ಸ್ಥಳಾಂತರಗೊಂಡ ಜನರು ಪ್ರಸ್ತುತ ಸೇನಾ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಕುಕಿ ಬುಡಕಟ್ಟು ಗುಂಪು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯ ನಂತರ ಮಣಿಪುರದಲ್ಲಿ ಬುಧವಾರ ಮೇ 3 ರಂದು ಅಶಾಂತಿ ಭುಗಿಲೆದ್ದಿದ್ದು, ಬುಡಕಟ್ಟು ಜನಾಂಗದವರಲ್ಲದ ಮೈತಿ ಸಮುದಾಯದೊಂದಿಗೆ ಘರ್ಷಣೆಗೆ ಕಾರಣವಾಯಿತು. ಬಹುಸಂಖ್ಯಾತ ಮತ್ತು ಪ್ರಧಾನವಾಗಿ ಹಿಂದೂ ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ST) ಪಟ್ಟಿಗೆ ಸೇರಿಸುವ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿರುವ ಇತ್ತೀಚಿನ ಮಣಿಪುರ ಹೈಕೋರ್ಟ್ ಆದೇಶವನ್ನು ವಿರೋಧಿಸಿ ಮೆರವಣಿಗೆಗೆ ಕರೆ ನೀಡಲಾಗಿದೆ.

ನಂತರದ ಎರಡು ಚುರಚಂದ್‌ಪುರ, ಇಂಫಾಲ್ ಪೂರ್ವ ಮತ್ತು ಪಶ್ಚಿಮ, ಬಿಷ್ಣುಪುರ್, ತೆಂಗ್‌ನೌಪಾಲ್ ಮತ್ತು ಕಾಂಗ್‌ಪೋಕ್ಪಿಯಂತಹ ವಿವಿಧ ಜಿಲ್ಲೆಗಳಲ್ಲಿ ಜನರ ಗುಂಪುಗಳು ಕಾರುಗಳು ಮತ್ತು ಕಟ್ಟಡಗಳನ್ನು ಸುಟ್ಟು ಹಾಕಿದ್ದರು. ಈ ಹಿಂಸಾಚಾರದಲ್ಲಿ ಅಂಗಡಿಗಳು ಮತ್ತು ಹೋಟೆಲ್‌, ಚರ್ಚ್‌ಗಳನ್ನು ಧ್ವಂಸವಾಗಿತ್ತು,

ಘರ್ಷಣೆ ನಿಯಂತ್ರಿಸಲು ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಿಂಸಾಚಾರವು ಉಲ್ಬಣಗೊಳ್ಳುತ್ತಿದ್ದಂತೆ, ರಾಜ್ಯ ಸರ್ಕಾರವು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತು. ಇಲ್ಲಿ ಕರ್ಫ್ಯೂ ಅನ್ನು ವಿಧಿಸಲಾಯಿತು ಮತ್ತು ಕಂಡಲ್ಲಿ ಗುಂಡು ಹಾರಿಸಲು ಆದೇಶಿಸಲಾಯಿತು.

ಇದನ್ನೂ ಓದಿ: ದಾಂತೇವಾಡದಲ್ಲಿ ನಡೆದ ಸ್ಫೋಟದಲ್ಲಿ 10 ಪೊಲೀಸರು, ಒಬ್ಬ ಚಾಲಕನ ಸಾವು ಪ್ರಕರಣ: 4 ಮಾವೋವಾದಿಗಳ ಬಂಧನ

ಮಣಿಪುರ ಹೊತ್ತಿ ಉರಿಯುತ್ತಿದ್ದಂತ ಆಡಳಿತಾರೂಢ ಬಿಜೆಪಿ ಮತ್ತು ಅದರ ಪ್ರಮುಖ ನಾಯಕರು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಕ್ಕೆ ವಿಪಕ್ಷಗಳು ಟೀಕೆ ಮಾಡಿವೆ.

ಭಾನುವಾರ ಸೇನಾಪಡೆ ಡ್ರೋನ್‌ಗಳು ಮತ್ತು ಮಿಲಿಟರಿ ಹೆಲಿಕಾಪ್ಟರ್‌ಗಳ ನಿಯೋಜನೆಯಂತಹ ವೈಮಾನಿಕ ವಿಧಾನಗಳ ಮೂಲಕ ಹಿಂಸಾಚಾರ-ಪೀಡಿತ ಪ್ರದೇಶಗಳಲ್ಲಿ ತನ್ನ ಕಣ್ಗಾವಲು ಹೆಚ್ಚಿಸಿದೆ. ಜೀವನವು ಸಹಜ ಸ್ಥಿತಿಗೆ ಮರುಳುತ್ತಿದ್ದರೂ ಇನ್ನೂ ಹಿಂಸಾಚಾರದ ಕಾವು ಆರಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ