ಭೀಕರ ಅಪಘಾತ; ಆಟೋದಲ್ಲಿದ್ದ ಮದುಮಗಳು ಸೇರಿ ಆರು ಜನರ ದುರ್ಮರಣ

ಮದುವೆ ಬಟ್ಟೆ ಖರೀದಿಸಲು ತೆರಳಿದ್ದ ಮದುಮಗಳು ಪ್ರಮಿಳಾ ಸೇರಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಆಟೋ ನುಜ್ಜುಗುಜ್ಜಾಗಿದೆ.

ಭೀಕರ ಅಪಘಾತ; ಆಟೋದಲ್ಲಿದ್ದ ಮದುಮಗಳು ಸೇರಿ ಆರು ಜನರ ದುರ್ಮರಣ
ಗೂಡೂರು ಬಳಿ ಅಪಘಾತ

Updated on: Jan 29, 2021 | 2:36 PM

ಹೈದರಾಬಾದ್: ಆಟೋ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 6 ಜನ ಸಾವನ್ನಪ್ಪಿದ್ದಾರೆ. ಗೂಡೂರು ಮಂಡಲಂ ವ್ಯಾಪ್ತಿಯ ಮರ್ರಿಮಿಟ್ಟ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಆಟೋದಲ್ಲಿದ್ದ 6 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮದುವೆ ಬಟ್ಟೆ ಖರೀದಿಸಲು ತೆರಳಿದ್ದ ಮದುಮಗಳು ಪ್ರಮಿಳಾ ಸೇರಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಆಟೋ ನುಜ್ಜುಗುಜ್ಜಾಗಿದೆ. ಮೃತರಲ್ಲಿ ಮೂವರು ಮಹಿಳೆಯರು. ಮೃತರು ಗುಂಡೂರು ಮಂಡಲಂ ಎರ್ರಕುಂಟಾ ತಾಂಡಾಗೆ ಸೇರಿದವರು ಎಂಬ ಮಾಹಿತಿಯಿದೆ.

ಮೆಕ್ಕೆ ಜೋಳದ ರಾಶಿಗೆ ಬೆಂಕಿ ಹಾಕಿದ ದುಷ್ಕರ್ಮಿಗಳು; 5 ಎಕರೆಯಲ್ಲಿ ಬೆಳೆದಿದ್ದ ಜೋಳದ ತೆನೆಗಳು ಭಸ್ಮ

Published On - 2:22 pm, Fri, 29 January 21