ನಿಯಂತ್ರಣ ಕಳೆದುಕೊಂಡ ಚಾಲಕ; ಕಿಶ್ತ್ವಾರ್​ ಜಿಲ್ಲೆಯಲ್ಲಿ ವಾಹನ ಕಂದಕಕ್ಕೆ ಬಿದ್ದು ಆರು ಮಂದಿ ಸಾವು

ಮೃತರನ್ನು  ಅಬ್ದುಲ್​ ಲತೀಫ್​ (42), ಅಬ್ದುಲ್​ ರೆಹಮಾನ್​ (29), ಅತಾ ಮುಹಮ್ಮದ್​ (22), ಇನಾಮ್​ (45), ಮೊಹಮ್ಮದ್​ ಅಖ್ರಾಮ್​ (29) ಮತ್ತು ಜಮೀರ್ (18) ಎಂದು ಗುರುತಿಸಲಾಗಿದೆ.

ನಿಯಂತ್ರಣ ಕಳೆದುಕೊಂಡ ಚಾಲಕ; ಕಿಶ್ತ್ವಾರ್​ ಜಿಲ್ಲೆಯಲ್ಲಿ ವಾಹನ ಕಂದಕಕ್ಕೆ ಬಿದ್ದು ಆರು ಮಂದಿ ಸಾವು
ಕಾರು ಅಪಘಾತ
Updated By: Lakshmi Hegde

Updated on: Feb 04, 2022 | 8:36 AM

ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಇಕೋ ವಾಹನವೊಂದು ಕಂದಕಕ್ಕೆ ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ.  ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ವಾಹನ ಕಂದಕಕ್ಕೆ ಬಿದ್ದು, ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, 6ನೇಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಬದುಕುಳಿಯಲಿಲ್ಲ.  

ಮೃತರನ್ನು  ಅಬ್ದುಲ್​ ಲತೀಫ್​ (42), ಅಬ್ದುಲ್​ ರೆಹಮಾನ್​ (29), ಅತಾ ಮುಹಮ್ಮದ್​ (22), ಇನಾಮ್​ (45), ಮೊಹಮ್ಮದ್​ ಅಖ್ರಾಮ್​ (29) ಮತ್ತು ಜಮೀರ್ (18) ಎಂದು ಗುರುತಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ 26 ರಾಷ್ಟ್ರೀಯ ರೈಫಲ್ಸ್​ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.  ಅಪಘಾತಕ್ಕೆ ನಿಜವಾದ ಕಾರಣ ತಿಳಿದುಬಂದಿಲ್ಲ. ಕೇಸ್​ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಕೋವಿಡ್-19 ಲಸಿಕೆ ಅಡ್ಡ ಪರಿಣಾಮದಿಂದ ನನ್ನ ಮಗಳು ಸಾವನ್ನಪಿದ್ದಾಳೆ ಎಂದು ಆರೋಪಿಸಿ; 1000 ಕೋಟಿ ರೂ. ಪರಿಹಾರ ಕೋರಿದ ವ್ಯಕ್ತಿ

Published On - 8:35 am, Fri, 4 February 22