ಒಮಿಕ್ರಾನ್ನಿಂದ ಭಾರತದಲ್ಲಿ ಶುರುವಾದ ಕೊವಿಡ್ 19 ಮೂರನೇ ಅಲೆ ಹೆಚ್ಚು ಬಾಧಿಸಿದ್ದು ಕಿರಿಯ ವಯಸ್ಸಿನವರಿಗೆ: ಐಸಿಎಂಆರ್ ವರದಿ
ಭಾರತದಲ್ಲಿ ಡೆಲ್ಟಾದಿಂದ ಉಂಟಾಗಿದ್ದ ಎರಡನೇ ಅಲೆಗಿಂತಲೂ ಈ ಬಾರಿ ಒಮಿಕ್ರಾನ್ನಿಂದ ಉಂಟಾದ ಅಲೆ ವಿಭಿನ್ನವಾಗಿದೆ. ಹಿಂದಿನ ಅಲೆಯಲ್ಲಿ ದೊಡ್ಡಸಂಖ್ಯೆಯಲ್ಲಿ ಸಾವು ಉಂಟಾಗಿತ್ತು. ಆದರೆ ಈ ಬಾರಿ ಹಾಗಿಲ್ಲ ಎಂದು ಡಾ. ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.
ಒಮಿಕ್ರಾನ್ ಸೋಂಕಿನಿಂದ ಉಂಟಾಗಿರುವ ಕೊವಿಡ್ 19 ಮೂರನೇ ಅಲೆ (Covid 19 3rd Wave) ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುಜನರು ಅಂದರೆ ಕಿರಿಯವಯಸ್ಸಿನವರಿಗೇ ಬಾಧಿಸುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR), ಆಸ್ಪತ್ರೆಗಳ ಅಂಕಿ-ಅಂಶಗಳನ್ನು ಆಧರಿಸಿ ನಡೆಸಿದ್ದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ದೇಶಾದ್ಯಂತ ಸುಮಾರು 37 ಆಸ್ಪತ್ರೆಗಳಿಂದ ಸಂಗ್ರಹಿಸಿದ್ದ ಅಂಕಿ-ಅಂಶಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿತ್ತು ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ್ ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಲಭ್ಯವಾದ 2021 ಡಿಸೆಂಬರ್ 16 ಮತ್ತು 2022 ಜನವರಿ 17 ರ ನಡುವಿನ ಡೇಟಾವನ್ನು 2021ರ ನವೆಂಬರ್ 15 ಮತ್ತು ಡಿಸೆಂಬರ್ 15ರ ಡೇಟಾಕ್ಕೆ ಹೋಲಿಸಿ ಸಮೀಕ್ಷೆ ನಡೆಸಿದಾಗ, ಈ ಬಾರಿ ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ಮೂರನೇ ತರಂಗದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸರಾಸರಿ ವಯಸ್ಸು ಅಂದಾಜು 44 ಆಗಿತ್ತು. ಅದು ಹಿಂದಿನ ಅಲೆಯಲ್ಲಿ ಅಂದಾಜು 55 ಆಗಿತ್ತು ಎಂದು ಹೇಳಲಾಗಿದೆ.
ಮೂರನೇ ಅಲೆಯಲ್ಲಿ ಆಸ್ಪತ್ರೆ ಸೇರಿದವರು ಕಿರಿಯ ವಯಸ್ಸಿನವರೇ ಆಗಿದ್ದರು. ಆದರೆ ಅಚ್ಚರಿಯ ವಿಷಯವೆಂದರೆ, ಕಿರಿಯವಯಸ್ಸಾದರೂ ಇತರ ಕೆಲವರು ಕಾಯಿಲೆಗಳಿಂದ ಬಳಲುತ್ತಿದ್ದರು. 40 ರ ಆಸುಪಾಸಿನವರಿಗೂ ಕೂಡ ಹಲವು ರೋಗಗಳು ಬಾಧಿಸುತ್ತಿವೆ. ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಶೇ.46ರಷ್ಟು ಕಿರಿ ವಯಸ್ಸಿನ ಜನರು ಬೇರೆ ಕೆಲವು ರೋಗಗಳಿಂದ ಬಳಲುತ್ತಿರುವವರೇ ಆಗಿದ್ದಾರೆ ಎಂದು ಡಾ.ಭಾರ್ಗವ್ ಹೇಳಿದ್ದಾರೆ.
ಭಾರತದಲ್ಲಿ ಡೆಲ್ಟಾದಿಂದ ಉಂಟಾಗಿದ್ದ ಎರಡನೇ ಅಲೆಗಿಂತಲೂ ಈ ಬಾರಿ ಒಮಿಕ್ರಾನ್ನಿಂದ ಉಂಟಾದ ಅಲೆ ವಿಭಿನ್ನವಾಗಿದೆ. ಹಿಂದಿನ ಅಲೆಯಲ್ಲಿ ದೊಡ್ಡಸಂಖ್ಯೆಯಲ್ಲಿ ಸಾವು ಉಂಟಾಗಿತ್ತು. ಆದರೆ ಈ ಬಾರಿ ಹಾಗಿಲ್ಲ. ಲಕ್ಷಣಗಳಲ್ಲೂ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಒಮಿಕ್ರಾನ್ ಸೋಂಕಿನಿಂದ ಬಂದ ಮೂರನೇ ಅಲೆಯಲ್ಲಿ, ಉಸಿರಾಟದ ತೊಂದರೆ, ರುಚಿ, ವಾಸನೆ ಕಳೆದುಕೊಳ್ಳುವುದು ಪ್ರಾಥಮಿಕ ಲಕ್ಷಣವಲ್ಲ. ಅದರ ಬದಲು ಗಂಟಲು ನೋವು, ಜ್ವರ, ಕೆಮ್ಮುಗಳು ಪ್ರಾಥಮಿಕ ಲಕ್ಷಣಗಳಾಗಿವೆ ಎಂದೂ ಡಾ. ಭಾರ್ಗವ್ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಮೂರನೇ ಅಲೆಯಲ್ಲಿ ಯಾವುದೇ ರೀತಿಯ ಅವ್ಯವಸ್ಥೆಯಾಗಿಲ್ಲ. ಔಷಧಗಳ ಬಳಕೆಯೂ ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bhargavi Narayan Birthday : ‘ಕಡೇ ಸ್ಟೇಷನ್ನಿನಲ್ಲಿ ನಿಲ್ಲಿಸಿದ ರೈಲಿನಲ್ಲಿ ಹತ್ತಿ ಕುಳಿತಿದ್ದೆವು!’
Published On - 9:29 am, Fri, 4 February 22