4 ತಿಂಗಳಲ್ಲಿ ಅಯೋಧ್ಯೆಯಲ್ಲಿ ಗಗನಚುಂಬಿ ಮಂದಿರ ನಿರ್ಮಾಣವಾಗುತ್ತೆ -ಅಮಿತ್ ಶಾ

|

Updated on: Dec 17, 2019 | 7:00 AM

ಜಾರ್ಖಂಡ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು ಅನ್ನೋದು ಹಿಂದೂಗಳ ಕನಸು. ಶತಮಾನದ ಕನಸೀಗ ನನಸಾಗುವ ಕಾಲ ಬಂದುಬಿಟ್ಟಿದೆ. ಅಷ್ಟಕ್ಕೂ ಈ ಮಾತು ಹೇಳಿದ್ದು ಬೇಱರೂ ಅಲ್ಲ, ದೇಶದ ಗೃಹಸಚಿವರು. ಇಂಥ ಭರವಸೆಯೊಂದನ್ನ ಅಮಿತ್ ಶಾ ನಿನ್ನೆ ನೀಡಿದ್ದಾರೆ. ಹಾಗೇ ದೇಗುಲ ನಿರ್ಮಾಣಕ್ಕೆ 4 ತಿಂಗಳು ಸಾಕು ಅಂತಾ ಡೆಡ್​ಲೈನ್ ಕೂಡ ಫಿಕ್ಸ್ ಮಾಡಿದ್ದಾರೆ. ದೇಶದಲ್ಲಿ ಅಯೋಧ್ಯೆಯ ವಿವಾದಿತ ಭೂಮಿ ಬಗ್ಗೆ ನಡೆದಷ್ಟು ಚರ್ಚೆ, ಯಾವ ವಿಚಾರದ ಬಗ್ಗೆಯೂ ನಡೆದಿಲ್ಲ. ಇದೇ ಕಾರಣಕ್ಕೆ ಅಯೋಧ್ಯೆ ವಿವಾದ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯವಾಗಿಯೂ […]

4 ತಿಂಗಳಲ್ಲಿ ಅಯೋಧ್ಯೆಯಲ್ಲಿ ಗಗನಚುಂಬಿ ಮಂದಿರ ನಿರ್ಮಾಣವಾಗುತ್ತೆ -ಅಮಿತ್ ಶಾ
Follow us on

ಜಾರ್ಖಂಡ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು ಅನ್ನೋದು ಹಿಂದೂಗಳ ಕನಸು. ಶತಮಾನದ ಕನಸೀಗ ನನಸಾಗುವ ಕಾಲ ಬಂದುಬಿಟ್ಟಿದೆ. ಅಷ್ಟಕ್ಕೂ ಈ ಮಾತು ಹೇಳಿದ್ದು ಬೇಱರೂ ಅಲ್ಲ, ದೇಶದ ಗೃಹಸಚಿವರು. ಇಂಥ ಭರವಸೆಯೊಂದನ್ನ ಅಮಿತ್ ಶಾ ನಿನ್ನೆ ನೀಡಿದ್ದಾರೆ. ಹಾಗೇ ದೇಗುಲ ನಿರ್ಮಾಣಕ್ಕೆ 4 ತಿಂಗಳು ಸಾಕು ಅಂತಾ ಡೆಡ್​ಲೈನ್ ಕೂಡ ಫಿಕ್ಸ್ ಮಾಡಿದ್ದಾರೆ.

ದೇಶದಲ್ಲಿ ಅಯೋಧ್ಯೆಯ ವಿವಾದಿತ ಭೂಮಿ ಬಗ್ಗೆ ನಡೆದಷ್ಟು ಚರ್ಚೆ, ಯಾವ ವಿಚಾರದ ಬಗ್ಗೆಯೂ ನಡೆದಿಲ್ಲ. ಇದೇ ಕಾರಣಕ್ಕೆ ಅಯೋಧ್ಯೆ ವಿವಾದ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯವಾಗಿಯೂ ಸುದ್ದಿಯಾಗಿತ್ತು. ನವೆಂಬರ್ 9ರಂದು ಸುಪ್ರೀಂ ನೀಡಿದ ಅಂತಿಮ ತೀರ್ಪಿನ ಬಳಿಕ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು ಅನ್ನೋ ಹಿಂದೂಗಳ ಶತಮಾನದ ಕನಸು ನನಸಾಗುವ ಕಾಲ ಸನ್ನಿಹಿತವಾಗಿತ್ತು. ಇದೀಗ ಎಲ್ಲಾ ಕುತೂಹಲಗಳಿಗೂ ಅಮಿತ್ ಶಾ ತೆರೆ ಎಳೆದಿದ್ದು, ಮಂದಿರ ಯಾವಾಗ ನಿರ್ಮಾಣವಾಗುತ್ತೆ ಅನ್ನೋದನ್ನ ಬಹಿರಂಗಪಡಿಸಿದ್ದಾರೆ.

4 ತಿಂಗಳ ಒಳಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪಕ್ಕಾ!
ಹೌದು ಇಂತಹದ್ದೊಂದು ಘೋಷಣೆ ಮಾಡಿರುವ ಅಮಿತ್ ಶಾ ಹಿಂದೂಗಳ ಬಹುದಿನದ ಕನಸು ನನಸಾಗುವ ಮುನ್ಸೂಚನೆ ನೀಡಿದ್ದಾರೆ. ನಿನ್ನೆ ಜಾರ್ಖಂಡ್ ಪ್ರಚಾರದಲ್ಲಿ ಭಾಗವಹಿಸಿದ್ದ ಅಮಿತ್ ಶಾ, ಪದೇ ಪದೆ ಈ ವಿಚಾರವನ್ನ ಪ್ರಸ್ತಾಪಿಸಿದ್ರು. 4 ತಿಂಗಳೊಳಗೆ ಅಯೋಧ್ಯೆಯಲ್ಲಿ ಗಗನಚುಂಬಿ ಮಂದಿರ ನಿರ್ಮಾಣವಾಗುತ್ತೆ ಅನ್ನೋ ಭರವಸೆಯನ್ನ ನೀಡಿದ್ದಾರೆ. ಆ ಮೂಲಕ ರಾಮಮಂದಿರ ನಿರ್ಮಾಣದ ಶತಮಾನಗಳ ಕೌತುಕಕ್ಕೆ ತೆರೆ ಎಳೆದಿದ್ದಾರೆ.

ಕಪಿಲ್ ಸಿಬಲ್ ವಿರುದ್ಧ ಅಮಿತ್ ಶಾ ಬ್ರಹ್ಮಾಸ್ತ್ರ!
ಅಂದಹಾಗೆ ಸುಪ್ರೀಂ ತೀರ್ಪು ನೀಡಿದ 3 ತಿಂಗಳೊಳಗೆ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಟ್ರಸ್ಟ್ ರಚಿಸಬೇಕಾಗಿದೆ. ಬಳಿಕ ಮಂದಿರ ನಿರ್ಮಾಣದ ಕೆಲಸ ಆರಂಭವಾಗಬೇಕು. ಆದರೆ ಗೃಹ ಸಚಿವ ಶಾ, ಇನ್ನೂ ನಾಲ್ಕೇ ತಿಂಗಳಲ್ಲಿ ಮಂದಿರ ನಿರ್ಮಾಣ ಆಗಲಿದೆ ಅಂತಿದ್ದಾರೆ. ಮತ್ತೊಂದ್ಕಡೆ ಮಂದಿರ ನಿರ್ಮಾಣ ಆಗಬೇಕೋ-ಬೇಡವೋ ಅಂತಾ ಜನರನ್ನೇ ಪ್ರಶ್ನಿಸಿದ ಅಮಿತ್ ಶಾ, ಪ್ರಜೆಗಳಿಂದಲೇ ಮಂದಿರ ನಿರ್ಮಾಣದ ಘೋಷಣೆ ಕೂಗಿಸಿ ವಿಪಕ್ಷಗಳಿಗೆ ಸರಿಯಾಗೇ ತಿರುಗೇಟು ನೀಡಿದ್ರು. ಅದ್ರಲ್ಲೂ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಕೀಲ ಕಪಿಲ್ ಸಿಬಲ್ ವಿರುದ್ಧ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ರು.