ನಿರ್ಭಯಾ ಅತ್ಯಾಚಾರ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ
ದೆಹಲಿ: ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಾಳೆ ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ. ‘ನಿರ್ಭಯಾ’ ಪರ ಸಿಜೆಐ ಸಂಬಂಧಿ ವಾದ ಮಾಡಿದ್ದರು. ಹೀಗಾಗಿ ವಿಚಾರಣೆಯಿಂದ ಸಿಜೆಐ ಎಸ್.ಎ.ಬೊಬ್ಡೆ ಹಿಂದೆ ಸರಿದಿದ್ದಾರೆ. ಸಿಜೆಐ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿ ಆರ್.ಭಾನುಮತಿ, ನ್ಯಾ.ಅಶೋಕ್ ಭೂಷಣ್ ಅವರ ಪೀಠ ವಿಚಾರಣೆ ನಾಳೆಗೆ ಮುಂದೂಡಿದ್ದು, ಅರ್ಜಿ ವಿಚಾರಣೆಗೆ ನಾಳೆ ಹೊಸ ಪೀಠ ರಚನೆಯಾಗಲಿದೆ. 2017ರಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಗಲ್ಲು ಶಿಕ್ಷೆ ತೀರ್ಪು ಮರುಪರಿಶೀಲನೆ […]
ದೆಹಲಿ: ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಾಳೆ ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ. ‘ನಿರ್ಭಯಾ’ ಪರ ಸಿಜೆಐ ಸಂಬಂಧಿ ವಾದ ಮಾಡಿದ್ದರು. ಹೀಗಾಗಿ ವಿಚಾರಣೆಯಿಂದ ಸಿಜೆಐ ಎಸ್.ಎ.ಬೊಬ್ಡೆ ಹಿಂದೆ ಸರಿದಿದ್ದಾರೆ. ಸಿಜೆಐ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿ ಆರ್.ಭಾನುಮತಿ, ನ್ಯಾ.ಅಶೋಕ್ ಭೂಷಣ್ ಅವರ ಪೀಠ ವಿಚಾರಣೆ ನಾಳೆಗೆ ಮುಂದೂಡಿದ್ದು, ಅರ್ಜಿ ವಿಚಾರಣೆಗೆ ನಾಳೆ ಹೊಸ ಪೀಠ ರಚನೆಯಾಗಲಿದೆ.
2017ರಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಗಲ್ಲು ಶಿಕ್ಷೆ ತೀರ್ಪು ಮರುಪರಿಶೀಲನೆ ಕೋರಿ ಅಪರಾಧಿ ಅಕ್ಷಯ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ ‘ನಿರ್ಭಯಾ’ ತಾಯಿ ಕೂಡ ಅಪರಾಧಿ ಮೇಲ್ಮನವಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.