ಪುತ್ರಿಯ ನಿಶ್ಚಿತಾರ್ಥ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ; ಹೃತ್ಪೂರ್ವಕ ಸಂದೇಶದೊಂದಿಗೆ ಇನ್​ಸ್ಟಾ ಪೋಸ್ಟ್​​

| Updated By: Lakshmi Hegde

Updated on: Dec 26, 2021 | 8:33 AM

ಅಂದಹಾಗೆ ಸ್ಮೃತಿ ಇರಾನಿಗೆ ಶಾನೆಲ್​ ಸ್ವಂತ ಮಗಳಲ್ಲ. ಪತಿ ಜುಬಿನ್​ ಅವರ ಮೊದಲ ಪತ್ನಿ ಮೋನಾ ಮಗಳು. ಹಾಗಂತ ಇವರೆಲ್ಲ ಸ್ನೇಹದಿಂದಲೇ ಇದ್ದಾರೆ. ಶಾನೆಲ್​ರನ್ನೂ ಸ್ಮೃತಿ ಇರಾನಿ ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ.

ಪುತ್ರಿಯ ನಿಶ್ಚಿತಾರ್ಥ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ; ಹೃತ್ಪೂರ್ವಕ ಸಂದೇಶದೊಂದಿಗೆ ಇನ್​ಸ್ಟಾ ಪೋಸ್ಟ್​​
ಶಾನೆಲ್​ ಇರಾನಿ ಮತ್ತು ಅರ್ಜುನ್​ ಭಲ್ಲಾ
Follow us on

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಷಿಯಲ್​ ಮೀಡಿಯಾಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಾಗೇ, ಇದೀಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ಗುಡ್​ ನ್ಯೂಸ್ ಹಂಚಿಕೊಂಡಿದ್ದಾರೆ. ತಮ್ಮ ಮಗಳು ಶಾನೆಲ್​ ನಿಶ್ಚಿತಾರ್ಥವಾಯಿತು ಎಂದು ಹೇಳಿರುವ ಅವರು, ಮಗಳು ಮತ್ತು ಬಾವಿ ಅಳಿಯನ ಫೋಟೋವನ್ನು  ಇನ್​ಸ್ಟಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ಅಂದಹಾಗೆ, ಸ್ಮೃತಿ ಇರಾನಿ ಪುತ್ರಿ ಶಾನೆಲ್, ಅರ್ಜುನ್​ ಭಲ್ಲಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸ್ಮೃತಿ ಇರಾನಿ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 

ಮೊದಲ ಫೋಟೋದಲ್ಲಿ ಅರ್ಜುನ್​ ಅವರು ಶಾನೆಲ್​​ಗೆ ಪ್ರಪೋಸ್​ ಮಾಡುತ್ತಿರುವುದನ್ನು ನೋಡಬಹುದು. ಹಾಗೇ ಎರಡನೇ ಫೋಟೋ, ಇವರಿಬ್ಬರೂ ಪ್ರೀತಿಯಿಂದ ಮುಖಕ್ಕೆ-ಮುಖ ತಾಗಿಸಿ ನಗುತ್ತ ನಿಂತಿರುವುದನ್ನು ನೋಡಬಹುದು. ಹಾಗೇ, ಸ್ಮೃತಿ ಇರಾನಿ ಎಂದಿನಿಂತೆ ಫನ್ನಿಯಾಗಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಅರ್ಜುನ್​ ಭಲ್ಲಾ ನಮ್ಮ ಹೃದಯವನ್ನು ಗೆದ್ದ ವ್ಯಕ್ತಿ. ಅವರಿಗೆ ನಮ್ಮ ಕ್ರೇಜಿ ಕುಟುಂಬಕ್ಕೆ ಸ್ವಾಗತ. ಹಾಗೇ, ನೀವು ಇನ್ನು ಮುಂದೆ ನಮ್ಮ ಹುಚ್ಚುತನವನ್ನೆಲ್ಲ ಸಹಿಸಿಕೊಳ್ಳಬೇಕು ಎಂದು ಅರ್ಜುನ್​ಗೆ ಪ್ರೀತಿಯಿಂದ ಎಚ್ಚರಿಕೆಯನ್ನೂ ನೀಡಿದ್ದಾರೆ. ಹಾಗೇ, ದೇವರು ಒಳ್ಳೆಯದು ಮಾಡಲಿ ಎಂದಿದ್ದಾರೆ.

ಅಂದಹಾಗೆ ಸ್ಮೃತಿ ಇರಾನಿಗೆ ಶಾನೆಲ್​ ಸ್ವಂತ ಮಗಳಲ್ಲ. ಪತಿ ಜುಬಿನ್​ ಅವರ ಮೊದಲ ಪತ್ನಿ ಮೋನಾ ಮಗಳು. ಹಾಗಂತ ಇವರೆಲ್ಲ ಸ್ನೇಹದಿಂದಲೇ ಇದ್ದಾರೆ. ಶಾನೆಲ್​ರನ್ನೂ ಸ್ಮೃತಿ ಇರಾನಿ ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ. ಹಾಗೇ, ಸ್ಮೃತಿ ಇರಾನಿಗೆ ಜೋಹರ್​ ಎಂಬ ಮಗ ಮತ್ತು ಜೋಯಿಶ್​ ಎಂಬ ಮಗಳಿದ್ದಾರೆ. ಈ ಹಿಂದೆ ಒಮ್ಮೆ ತಮ್ಮ ಮೂರು ಮಕ್ಕಳೊಂದಿಗೆ ಇರುವ ಫೋಟೋವನ್ನು ಸ್ಮೃತಿ ಇರಾನಿ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದರು. ನನಗೆ ನನ್ನ ಮಕ್ಕಳೇ ಜೀವ, ಪ್ರಪಂಚ ಎಂದು ಕ್ಯಾಪ್ಷನ್​ ಬರೆದಿದ್ದರು.

ಇದನ್ನೂ ಓದಿ: Mann Ki Baat: ಇಂದು ವರ್ಷದ ಕೊನೇ ಮನ್​ ಕೀ ಬಾತ್​​ನಲ್ಲಿ ಪ್ರಧಾನಿ ಮೋದಿ ಮಾತು; ಸಮಯ ಯಾವುದು? ಎಲ್ಲೆಲ್ಲಿ ಪ್ರಸಾರವಾಗಲಿದೆ? ಇಲ್ಲಿದೆ ಮಾಹಿತಿ