ಕರ್ನೂಲ್: ನಂದ್ಯಾಲ ಜಿಲ್ಲೆಯ ಶಿವನ ದೇವಸ್ಥಾನದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದೆ. ಗುರುವಾರ ರಾತ್ರಿ ಡೋನ್ ಪಟ್ಟಣದ ಪೊಲೀಸ್ ಠಾಣೆ ಬಳಿಯಿರುವ ಶಿವನ ದೇವಾಲಯಕ್ಕೆ ನಾಗರಹಾವು (Snake) ನುಗ್ಗಿದೆ. ಬೆಳಗ್ಗೆ ಪೂಜೆ ಸಲ್ಲಿಸಲು ತೆರಳಿದ್ದ ಅರ್ಚಕರು ದೇವಸ್ಥಾನದಲ್ಲಿ ನಾಗರ ಹಾವು ಶಬ್ಧ ಮಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾರೆ.
ದೇವಸ್ಥಾನಕ್ಕೆ ಆಗಮಿಸಿದ ಹಾವು ಹಿಡಿಯ ಹಿರಿಯರೊಬ್ಬರು (Snake charmer) ಯಾವುದೇ ಗಾಬರಿ, ಆತಂಕಪಡದೆ 8 ಅಡಿ ಉದ್ದದ ನಾಗರ ಹಾವನ್ನು ಹಿಡಿದು ಗ್ರಾಮದ ಬಳಿಯಿದ್ದ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟುಬಂದಿದ್ದಾರೆ (Rescue).
ಹೇಳಿ ಕೇಳಿ ಇದು ಬೇಸಿಗೆ ಕಾಲ. ಬೇಸಿಗೆಯ ಬಿಸಿಗೆ ಹಾವು, ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ನುಗ್ಗುವುದು ಸಾಮಾನ್ಯ. ಹಾಗಾಗಿ ಜನ ಜಾಗರೂಕತೆ ಅಗತ್ಯ. ಅದರಲ್ಲೂ ಗುಡ್ಡಗಾಡು ಪ್ರದೇಶಗಳ ಸಮೀಪ ವಾಸಿಸುವವರು ಹೆಚ್ಚು ಜಾಗರೂಕರಾಗಿರಬೇಕು. ನೀವು ಹಾವನ್ನು ನೋಡಿದಾಗ ಅದನ್ನು ಕೊಲ್ಲಬೇಡಿ. ಕಾಡು ಪ್ರಾಣಿಗಳು ಕಂಡರೆ.. ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ಹಾವು ಹಿಡಿಯುವವರಿಗೆ ಮಾಹಿತಿ ನೀಡಬೇಕು. ಈ ಸೃಷ್ಟಿ ಜಗತ್ತು ಪ್ರಕೃತಿ ಎಲ್ಲಾ ಜೀವಿಗಳಿಗೆ ಸೇರಿದ್ದಾಗಿದೆ. ಇದು ಕೇವಲ ಮನುಷ್ಯರ ಒಡೆತನವಲ್ಲ ಎಂಬುದನ್ನು ನೆನಪಿನಲ್ಲಿಡಬೇಕು ಅಲ್ಲವಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ