ಆಂಧ್ರ ಪ್ರದೇಶ: ಪ್ರಕಾಶಂ ಜಿಲ್ಲೆಯ ಪಾಮೂರಲ್ಲಿ ಮಗನೊಬ್ಬ ಕ್ಯಾನ್ಸರ್ ಪೇಷಂಟ್ ತಾಯಿಯನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ ಧಾರುಣ ಘಟನೆ ನಡೆದಿದೆ.
ಸುರೇಶ ತನ್ನ ತಾಯಿಯನ್ನು ಹೊತ್ತುಕೊಂಡು ಹೋಗಿ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಕೊಂಡೊಯ್ಯಲು ಹಣವಿಲ್ಲದ ಕಾರಣ ಮತ್ತೆ ತನ್ನ ಕೈಯಲ್ಲೇ ತಾಯಿಯ ಶವವನ್ನು ಹೊತ್ತುಕೊಂಡು ತಿರುಗಾಡಿದ್ದಾರೆ.
ವಿಡಿಯೋ ನೋಡಿ: https://www.youtube.com/watch?v=KlTjN4nXHL4
ತಾಯಿಯ ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ ಪರದಾಡುವ ಸ್ಥಿತಿ ಮಗನದ್ದಾಗಿದೆ. ಅಂತ್ಯಸಂಸ್ಕಾರ ಮಾಡಲು ಹಣ ಸಹಾಯ ಮಾಡಿ ಎಂದು ಆತ ಶವವನ್ನು ಹೊತ್ತುಕೊಂಡೆ, ಅಲ್ಲಿದ್ದವರನ್ನ ಬೇಡಿಕೊಂಡಿದ್ದಾನೆ. ಕೊನೆಗೆ ಗ್ರಾಮಸ್ಥರೊಬ್ಬರ ಸಹಾಯದಿಂದ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಬಡ ಜನರಿಗಾಗಿ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಸ್ಮಶಾನಕ್ಕೆ ಸಾಗಿಸಲು ವಾಹನ ವ್ಯವಸ್ಥೆ ಮಾಡಬೇಕು. ಅಂತ್ಯಸಂಸ್ಕಾರ ಮಾಡಲು ಸಹ ಶಕ್ತಿ ಇಲ್ಲದ ಬಡ ಜನರಿಗೆ ನೆರವಾಗುವಂತಹ ಯೋಜನೆಯನ್ನು ಸರಕಾರದಿಂದ ಒದಗಿಸಬೇಕು ಎಂದು ಸುರೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Published On - 2:28 pm, Thu, 21 November 19