ದೆಹಲಿ:ಹಣದ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ ಬಂದನಕ್ಕೊಳಗಾಗಿರುವ ಮಾಜಿ ಸಚಿವ, ಸಮ್ಮಿಶ್ರ ಸರ್ಕಾರದ ಪಾಲಿಗೆ ಟ್ರಬಲ್ ಶೂಟರ್ ಆಗಿದ್ದ ಕನಕಪುರ ಬಂಡೆ ಭವಿಷ್ಯ ಇಂದು ನಿರ್ಧಾರ ಆಗಲಿದೆ. ಜೈಲಿನಿಂದ ಹೊರಬರಲು ಹಾತೊರೆಯುತ್ತಿರುವ ಡಿಕೆಶಿಗೆ ಕೆಳಹಂತದ ನ್ಯಾಯಾಲಯದಲ್ಲಿ ನಿರಾಸೆಯಾಗಿತ್ತು. ಹೀಗಾಗಿ, ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವ ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ತೀರ್ಪು ಇವತ್ತು ಹೊರಬೀಳಲಿದೆ. ಈ ನಡುವೆ ಎಐಸಿಸಿಯ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ತಿಹಾರ್ ಜೈಲಿಗೆ ಭೇಡಿ ನೀಡಿದ್ದಾರೆ.
ಬೆಳಗ್ಗೆ 8.15ಕ್ಕೆ ಸೋನಿಯಾ ಗಾಂಧಿ ತಿಹಾರ್ ಜೈಲಿಗೆ ಭೇಡಿ ನೀಡಿದ್ದು, ಅಂಬಿಕಾ ಸೋನಿ ಜತೆಗೂಡಿ ಸೋನಿಯಾ ಗಾಂಧಿ ಡಿಕೆ ಶಿವಕುಮಾರನ್ನ ಭೇಟಿ ಮಾಡಿದ್ದಾರೆ
ಕಳೆದ ಕೆಲ ದಿನಗಳ ಹಿಂದೆ ಸೋನಿಯಾ ಗಾಂಧಿ ತಿಹಾರ್ ಜೈಲಿಗೆ ಭೇಟಿ ನೀಡಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನಷ್ಟೇ ಭೇಟಿಯಾಗಿದ್ದರು. ನಂತರ ಅನಾರೋಗ್ಯ ಕಾರಣದಿಂದ ಡಿಕೆಶಿ ಭೇಟಿ ರದ್ದು ಮಾಡಿದ್ದರು. ಇಂದು ಡಿಕೆಶಿ ಜಾಮೀನು ತೀರ್ಪು ದಿನವೇ ಸೋನಿಯಾ ಡಿಕೆಶಿಯನ್ನು ಭೇಟಿಯಾಗುತ್ತಿರುವುದು ಕುತೂಹಲ ತಂದಿದೆ.
Published On - 11:11 am, Wed, 23 October 19