ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡವೆಂದ ಸೋನಿಯಾ ಗಾಂಧಿ

|

Updated on: Dec 08, 2020 | 10:36 AM

ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತು ಕೋವಿಡ್ -19 ವೈರಸ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸೋನಿಯಾ ಗಾಂಧಿ ತಿರ್ಮಾನ ಮಾಡಿದ್ದಾರೆ.

ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡವೆಂದ ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Follow us on

ದೆಹಲಿ: ಸೆಲಬ್ರಿಟಿಗಳ ಹುಟ್ಟುಹಬ್ಬದ ಆಚರಣೆ ಅಂದ್ರೆ ಸುಮ್ನೆ ಅಲ್ಲ ಭಾರೀ ಜನಜಂಗುಳಿ, ಸಂಭ್ರಮದ ವಾತವರಣ ಇರುತ್ತದೆ. ಆದ್ರೆ ಇಂತಹ ಆಚರಣೆಯಿಂದ ದೂರ ಉಳಿಯಲು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧಾರ ಮಾಡಿದ್ದು, ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತು ಕೋವಿಡ್ -19 ವೈರಸ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತಿರ್ಮಾನ ಮಾಡಿದ್ದಾರೆ.

ಹೌದು ಈ ಬಾರಿ ಕೊರೊನಾ ಸೊಂಕು ದೇಶದಾದ್ಯಂತ ಆವರಿಸಿಕೊಂಡಿದ್ದು, ವೈರಸ್​ನಿಂದ ಅನೇಕರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅಂತಹವರ ನೆರವಿಗೆ ನಿಂತಿರುವುದರ ಜೊತೆಗೆ ಈಗಾಗಲೇ ದೆಹಲಿ ಚಲೋಗೂ ತಮ್ಮ ಬೆಂಬಲ ನೀಡಿರುವ ಸೋನಿಯಾ ಗಾಂಧಿ ಡಿಸೆಂಬರ್ 9ರಂದು ತನ್ನ ಹುಟ್ಟುಹಬ್ಬದ ಆಚರಣೆಗೆ ಗುಡ್ ಬೈ ಹೇಳಿದ್ದಾರೆ.

ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಸಮ್ಮತಿ ನೀಡಿದ ದೇವೇಗೌಡ

 

Published On - 10:31 am, Tue, 8 December 20