ಕೊಲ್ಕತ್ತಾ: ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ನಾಳೆ, ಅಂದರೆ ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಆಗಲ್ಲಿದ್ದಾರೆ ಎಂದು ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯ ಹಿರಿಯ ವೈದ್ಯ ರೂಪಾಲಿ ಬಸು ಹೇಳಿದ್ದಾರೆ. ಸ್ವತಃ ಗಂಗೂಲಿ ಅವರೇ ಈ ನಿರ್ಧಾರ ತೆಗೆದುಕೊಂಡಿದ್ದು, ಇನ್ನೂ ಒಂದು ದಿನ ಆಸ್ಪತ್ರೆಯಲ್ಲಿ ಇರಲು ಗಂಗೂಲಿ ಬಯಸಿದ್ದಾರೆ. ಜೊತೆಗೆ ಗಂಗೂಲಿ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ರೂಪಾಲಿ ಬಸು ತಿಳಿಸಿದ್ದಾರೆ.
ಈ ಹಿಂದೆ ಗಂಗೂಲಿಯವರನ್ನು ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂಬ ಸುದ್ದಿ ಕೇಳಿಬಂದಿತ್ತು. ಇದಕ್ಕಾಗಿ ಸಂಪೂರ್ಣ ಸಿದ್ಧತೆಯು ನಡೆದಿತ್ತು. ಹೀಗಾಗಿ ಮಂಗಳವಾರ ಗಂಗೂಲಿಯವರ ಆರೋಗ್ಯ ಪರಿಶೀಲಿಸಿದ್ದ ಡಾ.ದೇವಿ ಶೆಟ್ಟಿ, ಗಂಗೂಲಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವರದಿ ನೀಡಿದ್ದರು. ಆದರೆ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದಾಗಿ ಸ್ವತಃ ಗಂಗೂಲಿ ಅವರೇ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ತನ್ನ ಡಿಸ್ಚಾರ್ಜ್ನಿಂದ ಆಸ್ಪತ್ರೆ ಹಾಗೂ ಮನೆಯ ಮುಂದೆ ಆಗಮಿಸುವ ಅಭಿಮಾನಿಗಳನ್ನು ನಿಯಂತ್ರಿಸುವ ಸಲುವಾಗಿ ಗಂಗೂಲಿಯವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ದಾದಾ..
ಮನೆಯಲ್ಲಿ ಜಿಮ್ ಮಾಡುವಾಗ ಅವರ ಆರೋಗ್ಯ ಹಠಾತ್ತನೆ ಹದಗೆಟ್ಟಿತು. ಹೀಗಾಗಿ ಎದೆ ನೋವಿನಿಂದ ಬಳಲುತ್ತಿದ್ದ ಗಂಗೂಲಿಯನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಗಂಗೂಲಿಯವರ ಆರೋಗ್ಯ ಪರಿಶೀಲಿಸಿದ ಆಸ್ಪತ್ರೆ ವೈದ್ಯರು, ಗಂಗೂಲಿಗೆ ಲಘು ಹೃದಯಾಘಾತವಾಗಿದೆಯೆಂದು ಸ್ಪಷ್ಟನೆ ನೀಡಿದ್ದರು. ಆಸ್ಪತ್ರೆಯಲ್ಲಿ 5 ದಿನ ಚಿಕಿತ್ಸೆ ಪಡೆದ ದಾದಾ ಇಂದು ಸಂಪೂರ್ಣ ಗುಣಮುಖರಾಗಿ, ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲ್ಲಿದ್ದಾರೆ.
ಗಂಗೂಲಿ ಕಾಣಿಸಿಕೊಂಡಿದ್ದ ಫಾರ್ಚೂನ್ ಅಡುಗೆ ಎಣ್ಣೆ ಜಾಹೀರಾತುಗಳನ್ನು ತಡೆಹಿಡಿದ ಅದಾನಿ ವಿಲ್ಮರ್ ಸಂಸ್ಥೆ
Published On - 3:32 pm, Wed, 6 January 21