Monsoon 2021: ಉತ್ತಮ ಆರಂಭದ ನಂತರ ಮಂದಗೊಂಡ ಮಾನ್ಸೂನ್; ಬಿತ್ತನೆ ಕಾರ್ಯ ಕುಂಠಿತ, ಆತಂಕದಲ್ಲಿ ರೈತ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 10, 2021 | 5:07 PM

ಸಾಮಾನ್ಯವಾಗಿ. ಭೂಮಿಯಲ್ಲಿ ತೇವಾಂಶ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಲಿ ಎಂಬ ದೃಷ್ಟಿಯಿಂದ; ಶೇಂಗಾ, ಹೆಸರು, ಮತ್ತು ಉದ್ದಿನ ಬೇಳೆ ಮೊದಲಾದವುಗಳ ಬಿತ್ತನೆ ಕಾರ್ಯವನ್ನು ಜುಲೈ 15 ರ ನಂತರ ಆರಂಭಿಸಲು ರೈತರಿಗೆ ಸಲಹೆ ನೀಡಲಾಗುತ್ತದೆ.

Monsoon 2021: ಉತ್ತಮ ಆರಂಭದ ನಂತರ ಮಂದಗೊಂಡ ಮಾನ್ಸೂನ್; ಬಿತ್ತನೆ ಕಾರ್ಯ ಕುಂಠಿತ, ಆತಂಕದಲ್ಲಿ ರೈತ
ಕಬ್ಬು ಬಿತ್ತನೆ ಕಾರ್ಯ
Follow us on

ನವದೆಹಲಿ: ಭಾರತದಲ್ಲಿ ಸಕಾಲಕ್ಕೆ ಶುರುವಾಗಿ ಜನರಲ್ಲಿ ಹರ್ಷೋಲ್ಸಾಸ ಮೂಡಿಸಿದ್ದ ಈ ಬಾರಿಯ ಮಾನ್ಸೂನ್ ಈಗ ಮುನಿಸಿಕೊಂಡಂತಿದೆ. ಪ್ರಮುಖ ಬೆಳೆಗಳ ಬಿತ್ತನೆ ಕಾರ್ಯ ನಿಂತಿದೆ. ಇನ್ನು ಮೇಲೆ ಮಳೆ ಸುರಿಯಲಾರಂಭಿಸಿದರೂ ಹೆಸರು, ಉದ್ದು ಮತ್ತು ಸ್ವಲ್ಪ ಮಟ್ಟಿಗೆ ಹತ್ತಿ- ಈ ಬೆಳೆಗಳ ಬಿತ್ತನೆ ಕಾರ್ಯಕ್ಕೆ ಮಳೆ ಸಾಕಾಗಲಾರದು. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಪ್ರಕಾರ ಅಖಿಲ ಭಾರತ ಬೆಳೆ ಸ್ಥಿತಿ ವರದಿಯ ಪ್ರಕಾರ ಇದುವರೆಗೆ 499.87 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಮುಗಿದಿದೆ, ಆದರೆ ಕಳೆದ ವರ್ಷ ಈ ಸಮಯದವರೆಗೆ 558.11 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಕಾರ್ಯ ಕೊನೆಗೊಂಡಿತ್ತು, ಹೆಸರು, ಸೋಯಾಬೀನ್, ಭತ್ತ ಮತ್ತು ಹತ್ತಿ ಸೇರಿದಂತೆ ಎಲ್ಲಿ ಪ್ರಮುಖ ಬೆಳೆಗಳ ಬಿತ್ತನೆಯಲ್ಲಿ ಇಳಿಕೆ ಕಂಡುಬಂದಿದೆ.

ಕಳೆದ ವರ್ಷ ರೈತರಿಗೆ ಬಂಪರ್ ಬಿತ್ತನೆ ಕೆಲಸವಾಗಿತ್ತು. ರೈತಾಪಿ ಜನರು, ಸೋಯಾಬೀನ್ 92.36 ಲಕ್ಷ ಹೆಕ್ಟೇರ್, ಹೆಸರು. 13.49 ಲಕ್ಷ ಹೆಕ್ಟೇರ್, ಮತ್ತು ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಹತ್ತಿಯನ್ನು 104.83 ಲಕ್ಷ ಹೆಕ್ಟೇರ್ ಜಮೀನುಗಳಲ್ಲಿ ಬಿತ್ತಿದ್ದರು, ಆದರೆ ಈ ವರ್ಷ ಈ ಬೆಳೆಗಳನ್ನು ಕ್ರಮವಾಗಿ 82.14 ಲಕ್ಷ ಹೆಕ್ಟೇರ್, 11.92 ಲಕ್ಷ ಹೆಕ್ಟೇರ್ ಮತ್ತು 86.45 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮಾತ್ರ ಬಿತ್ತಲಾಗಿದೆ.

ಹಾಗೆಯೇ, ದವಸ ಧಾನ್ಯಗಳಾಗಿರುವ ಸಜ್ಜೆಯನ್ನು ಈ ವರ್ಷ 15.74 ಲಕ್ಷ ಹೆಕ್ಟೇರ್ (ಕಳೆದ ವರ್ಷ 25.32 ಲಕ್ಷ ಹೆಕ್ಟೇರ್), ಎಣ್ಣೆಕಾಳುಗಳು ಪ್ರಸಕ್ತ ವರ್ಷ 112.55 ಲಕ್ಷ ಹೆಕ್ಟೇರ್ (ಕಳೆದ ವರ್ಷ 126 13 ಲಕ್ಷ ಹೆಕ್ಟೇರ್), ಬೇಳೆಕಾಳುಗಳು ಈ ವರ್ಷ 52.49 ಲಕ್ಷ ಹೆಕ್ಟೇರ್ (ಕಳೆದ ವರ್ಷ 53.35 ಲಕ್ಷ ಹೆಕ್ಟೇರ್) ಬಿತ್ತನೆಯಾಗಿದೆ.
ಮತ್ತೊಂದು ಕಮರ್ಶಿಯಲ್ ಕ್ರಾಪ್​ ಆಗಿರುವ ಕಬ್ಬಿನ ನಾಟಿ ಕಾರ್ಯದಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲ, ಈ ಬಾರಿ 53.56 ಲಕ್ಷ ಹೆಕ್ಟೇರ್​ ಗದ್ದೆಗಳಲ್ಲಿ ನಾಟಿ ಕಾರ್ಯ ಮುಗಿದಿದ್ದರೆ, ಕಳೆದ ವರ್ಷ ಇದೇ ಸಮಯಕ್ಕೆ 52.65 ಲಕ್ಷ ಹೆಕ್ಟೇರ್ನಲ್ಲಿ ನಾಟಿ ಕೆಲಸ ಮುಗಿದಿದೆ.

ಮಳೆ ಅಭಾವವು ರೈತರಿಗೆ ಒಂದೋ ಅಲ್ಫಾವದಿಯ ಬೆಳೆಗಳನ್ನು ಬಿತ್ತುವಂಥ ಅನಿವಾರ್ಯತೆ ಸೃಷ್ಟಸಿದೆ ಇಲ್ಲವೇ ಮಳೆಗಾಗಿ ಕಾಯುವಂತೆ ಮಾಡಿದೆ.

2020ರಿಂದ ಭಾರತದ ಹವಾಮಾನ ಇಲಾಖೆಯು (ಐಎಮ್​ಡಿ) ಒಂದು ಪರಿಷ್ಕೃತ ಮಾನ್ಸೂನ್ ಆರಂಭ ಮತ್ತು ಕೊನೆಗೊಳ್ಳುವ ಸಮಯವನ್ನು ಅನುಸರಿಸುತ್ತಿದೆ. ಅದರ ಪ್ರಕಾರ ಭಾರತದ ಎಲ್ಲ ಪ್ರಾಂತ್ಯಗಳನ್ನು ಮಾನ್ಸೂನ್ ಜುಲೈ 8ರಂದು ತಲುಪುತ್ತದೆ. ಶುಕ್ರವಾರದ ವೇಳೆಗೆ ದೇಶದಲ್ಲಿ 229.7 ಎಮ್ಎಮ್ ಮಳೆಯಾಗಿದ್ದು ಇದು ಸಾಮಾನ್ಯ ಪ್ರಮಾಣವಾಗಿರುವ 243.6 ಎಮ್​ ಎಮ್​ ಕ್ಕಿಂತ ಶೇಕಡಾ 6 ರಷ್ಟು ಕಮ್ಮಿಯಾಗಿದೆ. ಜೂನ್ ತಿಂಗಳಿನ ಮೊದಲ ಎರಡು ವಾರಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳಲ್ಲಿ ಮಳೆಯ ಅಭಾವ ಎದುರಾಗಿದೆ.

ಭಾರತದ ವಾಯುವ್ಯ ಭಾಗದಲ್ಲಿ ಎಲ್ಲಕ್ಕಿಂತ ಜಾಸ್ತಿ ಅಂದರೆ ಶೇಕಡಾ 18 ರಷ್ಟು ಮಳೆಯ ಕೊರತೆ ವರದಿಯಾಗಿದೆ. ಶುಕ್ರವಾರದವೆರೆಗೆ ರಾಜಧಾನಿ ದೆಹಲಿ, ಪಂಜಾಬ್, ಹರಿಯಾಣ ಮತ್ತಯ ಪಶ್ಚಿಮ ರಾಜಸ್ತಾನಗಳಲ್ಲಿ ಮಳೆ ವಿಳಂಬವಾಗಿತ್ತು. ದೆಹಲಿಯಲ್ಲಿ ಮಳೆ ಕೊರತೆ -58 ಶೇಕಡಾ ಆಗಿದ್ದು ಇದು ಈ ಋತುವಿನಲ್ಲಿ ದೇಶದಲ್ಲೇ ಅತಿ ಕಡಿಮೆ ಮಳೆ ಕಂಡಿರುವ ರಾಜ್ಯವಾಗಿದೆ.

ಸಾಮಾನ್ಯವಾಗಿ. ಭೂಮಿಯಲ್ಲಿ ತೇವಾಂಶ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಲಿ ಎಂಬ ದೃಷ್ಟಿಯಿಂದ; ಶೇಂಗಾ, ಹೆಸರು, ಮತ್ತು ಉದ್ದಿನ ಬೇಳೆ ಮೊದಲಾದವುಗಳ ಬಿತ್ತನೆ ಕಾರ್ಯವನ್ನು ಜುಲೈ 15 ರ ನಂತರ ಆರಂಭಿಸಲು ರೈತರಿಗೆ ಸಲಹೆ ನೀಡಲಾಗುತ್ತದೆ. ಮಳೆ ಅಭಾವ ಹೀಗೆಯೇ ಮುಂದುವರೆದರೆ ಹತ್ತಿ ಬೀಜ ಬಿತ್ತನೆ ಕಾರ್ಯವೂ ಪ್ರಭಾವಕ್ಕೊಳಗಾಗಲಿದೆ.

ಆದರೆ, 2021 ವರ್ಷವನ್ನು ಮಳೆ ಅಭಾವದ ವರ್ಷ ಅಂತೇನೂ ಪರಿಗಣಿಸಲಾಗದು ಅಂತ ಹೇಳಲಾಗುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದೆ. 2012 ರಲ್ಲಿ ದೆಹಲಿ ಮಾಮೂಲಿ ಜೂನ್ 29 ರ ಬದಲಿಗೆ ಜುಲೈ 7ರಂದು ಮಳೆ ಕಂಡಿತು. 2010 ರಿಂದ 2020 ರವರೆಗಿನ ಎಲ್ಲ ಮಾನ್ಸೂನ್ ಸೀಸನ್​ಗಳು ಜೂನ್​ 4ನೇ ವಾರ ಮತ್ತು ಜುಲೈ ತಿಂಗಳಿನ ಆರಂಭದ ದಿನಗಳಲ್ಲಿ ಮಳೆ ಹೊತ್ತು ತಂದಿವೆ. ಈ ಬಾರಿ ಮಳೆ ಸುರಿಯುವುದು ಹೆಚ್ಚು ಕಡಿಮೆ ಮೂರು ವಾರ ವಿಳಂಬವಾಗಿದೆ. ಐಎಮ್​ಡಿ ಪ್ರಕಾರ 2013 ರ ಮಾನ್ಸೂನ್ ಅತಿ ವೇಗವಾಗಿ ಆಂದರೆ ಕೇವಲ 10 ದಿನಗಳಲ್ಲಿ ದೇಶದೆಲ್ಲೆಡೆ ಪಸರಿಸಿತ್ತು. 1941 ರ ಬಂತರ ಮೊದಲ ಬಾರಿಗೆ ಮಾನ್ಸೂನ್ ಅಷ್ಟು ವೇಗವಾಗಿ ಹಬ್ಬಿತ್ತು ಎಂದು ಇಲಾಖೆ ಹೇಳಿದೆ.

ಆದರೆ, ಹವಾಮಾನ ಮುನ್ಸೂಚನೆ ಪ್ರಕಾರ ಬಂಗಾಳ ಕೊಲ್ಲಿಯ ಕೆಳ ಹಂತದಿಂದ ತೆಂಕಣ ಗಾಳಿ ಬೀಸಲಾರಂಭಿಸಿರುವುದರಿಂದ ಮಾನ್ಸೂನ್ ಚುರುಕುಗೊಳ್ಳಲಿದೆ. ‘ಜುಲೈ 10 ರ ವೇಳೆಗೆ ಮಾನ್ಸೂನ್, ಪಶ್ಚಿಮ ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಚಂಡೀಗಡ್​, ಪಂಜಾಬ್ ಮತ್ತು ರಾಜಸ್ತಾನಗಳನ್ನು ತಲುಪಲಿದೆ,’ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Monsoon 2021 Update: ಭಾರತದ ಮಾನ್ಸೂನ್​ ಬಗ್ಗೆ ಆತಂಕಕಾರಿ ವಿಷಯ ಬಹಿರಂಗ ಪಡಿಸಿದ ಅಧ್ಯಯನ; 30 ವಿಜ್ಞಾನಿಗಳಿಂದ ಸಂಶೋಧನೆ