Monsoon 2021 Update: ಭಾರತದ ಮಾನ್ಸೂನ್​ ಬಗ್ಗೆ ಆತಂಕಕಾರಿ ವಿಷಯ ಬಹಿರಂಗ ಪಡಿಸಿದ ಅಧ್ಯಯನ; 30 ವಿಜ್ಞಾನಿಗಳಿಂದ ಸಂಶೋಧನೆ

ಅಸ್ತಿತ್ವದಲ್ಲಿರುವ ಹವಾಮಾನ ಬದಲಾವಣೆಗಳನ್ನು ಆಧರಿಸಿ ಸಂಶೋಧನೆಗಳನ್ನು ಮಾಡಲಾಗಿದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಡಾ. ಪಲ್ಲವಿ ಆನಂದ್​ ತಿಳಿಸಿದ್ದಾರೆ. ಹಾಗೇ, ತಾವು ಸಾವಿರಾರು ವರ್ಷಗಳ ಹಿಂದಿನ ಮಾನ್ಸೂನ್​ ಮಳೆಯ ಸ್ವರೂಪಗಳ ಬಗ್ಗೆಯೂ ಅಧ್ಯಯನ ಮಾಡಿದ್ದೇವೆ ಎಂದೂ ತಿಳಿಸಿದ್ದಾರೆ.

Monsoon 2021 Update: ಭಾರತದ ಮಾನ್ಸೂನ್​ ಬಗ್ಗೆ ಆತಂಕಕಾರಿ ವಿಷಯ ಬಹಿರಂಗ ಪಡಿಸಿದ ಅಧ್ಯಯನ; 30 ವಿಜ್ಞಾನಿಗಳಿಂದ ಸಂಶೋಧನೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jun 13, 2021 | 1:25 PM

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಕಾರಣದಿಂದ ಶೀಘ್ರದಲ್ಲೇ ಭಾರತೀಯ ಮಾನ್ಸೂನ್​​ಗಳು ಅನಿರ್ದಿಷ್ಟ ಮತ್ತು ತುಂಬ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ನ್ಯೂಯಾರ್ಕ್​ ಟೈಂ ವರದಿ ಮಾಡಿದೆ. ಇದು ಅಧ್ಯಯನವೊಂದರ ವರದಿ ಎಂದೂ ಅದು ಉಲ್ಲೇಖಿಸಿದೆ. ಲಕ್ಷಾಂತರ ವರ್ಷಗಳಿಂದಲೂ ವಾತಾವಾರಣದಲ್ಲಿ ಕಾರ್ಬನ್ ಡೈಆಕ್ಸೈಡ್​ ಪ್ರಮಾಣ ಹೆಚ್ಚುತ್ತಿದೆ. ಇದರಿಂದಾಗಿ ದಕ್ಷಿಣ ಏಷ್ಯಾದಲ್ಲಿ ಮಾನ್ಸೂನ್​ ಮಳೆಯ ಪ್ರಮಾಣವೂ ಅಧಿಕವಾಗಿದೆ ಎಂದು ಈ ಅಧ್ಯಯನದ ಪ್ರಮುಖ ಸಂಶೋಧಕರಾದ ಸ್ಟೀವನ್​ ಕ್ಲೆಮೆನ್ಸ್​ ಹೇಳಿದ್ದಾಗಿ ನ್ಯೂಯಾರ್ಕ್​ ಟೈಮ್ಸ್​​​ ಉಲ್ಲೇಖಿಸಿದೆ.

ಮಾನವನ ಚಟುವಟಿಕೆಗಳು ವಾರ್ಷಿಕ ಮಾನ್ಸೂನ್​ ಋತುಮಾನದ ಮೇಲೆ ಪ್ರಭಾವ ಬೀರಿದೆಯೇ ಎಂಬುದನ್ನು ಪತ್ತೆ ಹಚ್ಚಲು, ಲಕ್ಷಾಂತರ ವರ್ಷಗಳ ಡಾಟಾವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಭಾರತ, ಯುಎಸ್​, ಆಸ್ಟ್ರೇಲಿಯಾ, ಜಪಾನ್​ ಮತ್ತು ಯುರೋಪ್​ನ ಸುಮಾರು 30 ವಿಜ್ಞಾನಿಗಳು 2014ರಲ್ಲಿ ಬಂಗಾಳಕೊಲ್ಲಿಗೆ ಪ್ರಯಾಣ ಬೆಳೆಸಿದ್ದರು. ಎರಡು ತಿಂಗಳು ಅಲ್ಲೇ ಇದ್ದು, ಅಧ್ಯಯನ ನಡೆಸಿದ್ದರು. ಹಾಗೇ ಸಾಗರದ ಮಧ್ಯದ ಸಾರವನ್ನು ತೆಗೆದು ಸಂಶೋಧನೆಗೆ ಒಳಪಡಿಸಿದ್ದಾರೆ.

ಇದೀಗ ಸಮಗ್ರ ಅಧ್ಯಯನ ವರದಿ ಹೊರಬಿದ್ದಿದ್ದು, ಅದರ ಪ್ರಕಾರ 21ನೇ ಶತಮಾನದಲ್ಲಿ ಹಸಿರುಮನೆ ಅನಿಲಗಳ ಉಷ್ಣಬಲದ ಪರಿಣಾಮದಿಂದ ಮತ್ತು ದಕ್ಷಿಣಾರ್ಧಗೋಳ ಹಿಂದೂ ಮಹಾಸಾಗರದಿಂದ ತೇವಾಂಶ ಹೆಚ್ಚು ಉಂಟಾಗುವ ಕಾರಣ ದಕ್ಷಿಣ ಏಷ್ಯಾದ ಮಳೆಯ ಪ್ರಮಾಣ ಅಧಿಕವಾಗಲಿದೆ ಮತ್ತು ಅದರಲ್ಲಿ ವಿಭಿನ್ನತೆ ಕಾಣಿಸಿಕೊಳ್ಳಲಿದೆ ಎಂದು ಅಧ್ಯಯನ ವರದಿ ಮಾಡಿದೆ.

ಅಸ್ತಿತ್ವದಲ್ಲಿರುವ ಹವಾಮಾನ ಬದಲಾವಣೆಗಳನ್ನು ಆಧರಿಸಿ ಸಂಶೋಧನೆಗಳನ್ನು ಮಾಡಲಾಗಿದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಡಾ. ಪಲ್ಲವಿ ಆನಂದ್​ ತಿಳಿಸಿದ್ದಾರೆ. ಹಾಗೇ, ತಾವು ಸಾವಿರಾರು ವರ್ಷಗಳ ಹಿಂದಿನ ಮಾನ್ಸೂನ್​ ಮಳೆಯ ಸ್ವರೂಪಗಳ ಬಗ್ಗೆಯೂ ಅಧ್ಯಯನ ಮಾಡಿದ್ದೇವೆ. ಹೋಲಿಕೆಯನ್ನೂ ಮಾಡಿದ್ದೇವೆ. ಇನ್ನು ಕೆಲವೇ ವರ್ಷಗಳಲ್ಲಿ ಈ ಮಾನ್ಸೂನ್​ಗಳು ಇನ್ನಷ್ಟು ಅಪಾಯಕಾರಿಯಾಗಬಹುದು. ಮಾರಣಾಂತಿಕವಾಗಿ ಪರಿಣಮಿಸಬಹುದು ಎಂದೂ ಅವರು ತಿಳಿಸಿದ್ದಾರೆ.

ಭಾರತದಲ್ಲಿ ಸಾಮಾನ್ಯವಾಗಿ ಜೂನ್​​ನಿಂದ ಸೆಪ್ಟೆಂಬರ್​ವರೆಗೆ ಮಳೆಗಾಲ ಇರುತ್ತದೆ. ಜೂನ್​​ನಲ್ಲಿ ಶುರುವಾಗುವ ಮುಂಗಾರು ಮಳೆಯನ್ನು ನಂಬಿಕೊಂಡೇ ನಮ್ಮ ದೇಶದಲ್ಲಿ ಕೃಷಿ ನಡೆಯುತ್ತದೆ. ಕಳೆದ ಕೆಲವು ವರ್ಷಗಳಿಂದಲೂ ನಮ್ಮಲ್ಲಿ ಒಂದೋ ಮಳೆ ಸಾಕಾಗುತ್ತಿಲ್ಲ..ಇಲ್ಲವೇ ಅತಿಯಾದ ಮಳೆಯಿಂದ ಬೆಳೆನಾಶ ಉಂಟಾಗುತ್ತಿದೆ.

ಇದನ್ನೂ ಓದಿ: ಕೊವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ: ಲ್ಯಾನ್ಸೆಟ್ ವರದಿ

Published On - 12:23 pm, Sun, 13 June 21

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ