Monsoon 2021: ಮುಂಬೈನಲ್ಲಿ ಮಹಾ ಮಳೆ; ಮುಂದಿನ ಎರಡು ದಿನ ಆರೆಂಜ್​ ಅಲರ್ಟ್​​, ಪರಿಸ್ಥಿತಿ ಎದುರಿಸಲು ರಕ್ಷಣಾ ತಂಡಗಳು ಸನ್ನದ್ಧ

Mumbai Rain: ಮುಂಬೈನ ದಕ್ಷಿಣ ಭಾಗಗಳಲ್ಲಿ ವಿಪರೀತ ಮಳೆಬೀಳುವ ಸಾಧ್ಯತೆ ಇದೆ. ಹಾಗೇ ಉಪನಗರಗಳಲ್ಲೂ ಹೆಚ್ಚು ಮಳೆಯಾಗಲಿದೆ ಎಂದು ಮುಂಬೈ ಹವಾಮಾನ ಇಲಾಖೆಯ ಉಪ ನಿರ್ದೇಶಕರಾದ ಶುಭಾಂಗಿ ಭೂತೆ ತಿಳಿಸಿದ್ದಾರೆ.

Monsoon 2021: ಮುಂಬೈನಲ್ಲಿ ಮಹಾ ಮಳೆ; ಮುಂದಿನ ಎರಡು ದಿನ ಆರೆಂಜ್​ ಅಲರ್ಟ್​​, ಪರಿಸ್ಥಿತಿ ಎದುರಿಸಲು ರಕ್ಷಣಾ ತಂಡಗಳು ಸನ್ನದ್ಧ
ಮುಂಬೈ ಮಳೆ
Follow us
TV9 Web
| Updated By: Lakshmi Hegde

Updated on:Jun 13, 2021 | 1:25 PM

ಮುಂಬೈ: ನಗರದಲ್ಲಿ ವಿಪರೀತ ಮಳೆ ಮುಂದುವರಿದಿದ್ದು, ಹವಾಮಾನ ಇಲಾಖೆ ಆರೆಂಜ್​ ಅಲರ್ಟ್​ ಘೋಷಿಸಿದೆ. ಭಾನುವಾರ ಮತ್ತು ಸೋಮವಾರ ಎರಡೂ ದಿನ ಈ ಆರೆಂಜ್​ ಅಲರ್ಟ್​ ಇರಲಿದೆ. ಶನಿವಾರದವರೆಗೆ ಮುಂಬೈ ನಗರಿಯಲ್ಲಿ ರೆಡ್ ಅಲರ್ಟ್​ ಇತ್ತು. ನಿನ್ನೆ ರಾತ್ರಿಯಿಂದ ಅದನ್ನು ಆರೆಂಜ್​ ಅಲರ್ಟ್​​ಗೆ ಬದಲಿಸಲಾಗಿದೆ. ಅಂದರೆ ಮುಂದಿನ ಎರಡು ದಿನ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದ್ದು, ಜನರು ತೀವ್ರ ಎಚ್ಚರಿಕೆಯಿಂದ ಇರಬೇಕಾಗಿದೆ. ಮುಂಬೈನ ದಕ್ಷಿಣ ಭಾಗಗಳಲ್ಲಿ ವಿಪರೀತ ಮಳೆಬೀಳುವ ಸಾಧ್ಯತೆ ಇದೆ. ಹಾಗೇ ಉಪನಗರಗಳಲ್ಲೂ ಹೆಚ್ಚು ಮಳೆಯಾಗಲಿದೆ ಎಂದು ಮುಂಬೈ ಹವಾಮಾನ ಇಲಾಖೆಯ ಉಪ ನಿರ್ದೇಶಕರಾದ ಶುಭಾಂಗಿ ಭೂತೆ ತಿಳಿಸಿದ್ದಾರೆ. ಹಾಗೆ ಮಳೆಯಿಂದಾಗುವ ಅಸ್ತವ್ಯಸ್ತ ಪರಿಸ್ಥಿತಿ ನಿಭಾಯಿಸಲು ಬೃಹನ್​​ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್​ (ಬಿಎಂಸಿ) ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ಎಲ್ಲ ಸಿವಿಕ್​ ಕಂಟ್ರೋಲ್​ ರೂಂಗಳು, ವಿದ್ಯುತ್​ ಸಂಸ್ಥೆಗಳಿಗೆ ಹೈಅಲರ್ಟ್​ ಆಗಿರುವಂತ ನಿರ್ದೇಶನ ನೀಡಲಾಗಿದೆ. ಇನ್ನುಳಿದಂತೆ ಕರಾವಳಿ ಭದ್ರತಾ ಪಡೆ, ನೌಕಾಪಡೆ, ಎನ್​ಡಿಆರ್​ಎಫ್​ ತಂಡಗಳೂ ಸಹ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿವೆ. ಶನಿವಾರ ಬೆಳಗ್ಗೆ 8ಗಂಟೆಗೆ ಕೊನೆಯಾಗುವಂತೆ 24 ಗಂಟೆಯಲ್ಲಿ ಮುಂಬೈನಲ್ಲಿ ಸರಾಸರಿ 79.66 ಎಂಎಂ ಮಳೆಯಾಗಿದೆ. ಹಾಗೇ ಪೂರ್ವ ಮತ್ತು ಪಶ್ವಿಮ ಉಪನಗರಗಳಲ್ಲಿ ಅನುಕ್ರಮವಾಗಿ 92.68 ಎಂಎಂ ಮತ್ತು 89.30 ಮಿಮೀ ಮಳೆಯಾಗಿದೆ.

ಕರ್ನಾಟಕದಲ್ಲಿ ಜೂ.16ರವರೆಗೆ ಭಾರಿ ಮಳೆ ಇನ್ನು ಕರ್ನಾಟಕದಲ್ಲಿ ಸಹ ಮುಂದಿನ ಮೂರು ದಿನ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್​ ಪಾಟೀಲ್​ ಮಾಹಿತಿ ನೀಡಿದ್ದಾರೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಈಗಾಗಲೇ ಆರೆಂಜ್​ ಅಲರ್ಟ್ ಘೋಷಣೆಯಾಗಿದೆ. ಜೂನ್​ 1ರಿಂದಲೂ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಇದನ್ನೂ ಓದಿ: Salt: ಹೆಚ್ಚು ಉಪ್ಪು ಸೇವಿಸುವ ಅಭ್ಯಾಸವಿದೆಯೇ? ಹಾಗಿದ್ದರೆ ಈ ರೋಗಲಕ್ಷಣಗಳ ಬಗ್ಗೆ ಎಚ್ಚರವಹಿಸಿ

(Amid Heavy Rain Lashes IMD issues Orange alert in Mumbai)

Published On - 1:00 pm, Sun, 13 June 21

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು