ಚೆನ್ನೈ: ಸಂಗೀತ ಲೋಕದ ‘ವಾರಸ್ದಾರ’, ‘ಪಲ್ಲವಿ’ ‘ಚರಣ’ಗಳಲ್ಲೇ ‘ಅನುರಕ್ತ’ರಾಗಿದ್ದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮೌನ ತಾಳಿದ್ದಾರೆ. ಗಾನ ಗಾರುಡಿಗನ ಪಾರ್ಥಿವ ಶರೀರವನ್ನು ಎಂಜಿಎಂ ಆಸ್ಪತ್ರೆಯಿಂದ ಅವರ ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ.
ಆ್ಯಂಬುಲೆನ್ಸ್ ಮೂಲಕ ಚೆನ್ನೈನ MGM ಆಸ್ಪತ್ರೆಯಿಂದ ಕೋಡಂಬಾಕಂನಲ್ಲಿರುವ ಎಸ್‌ಪಿಬಿಯವರ ಮನೆಗೆ ದೇಹವನ್ನು ಸ್ಥಳಾಂತರಿಸಲಾಗುತ್ತಿದೆ. ಮನೆಯ ಮುಂದೆ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದಾರೆ.
ನಾಳೆ ಬೆಳಿಗ್ಗೆ 9ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, 9 ಗಂಟೆಯ ನಂತರ 11ಗಂಟೆಯ ರವರೆಗೆ ತಾಮರೈಪಾಕಂ ಫಾರ್ಮ್ ಹೌಸ್ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅಂತಿಮ ವಿಧಿ ವಿಧಾನ ನೆರವೇರಲಿದೆ. ಚೆನ್ನೈ ಕೊಡಂಬಾಕಂ ಮನೆಯಿಂದ ಫಾರ್ಮ್ ಹೌಸ್ ಮೂವತ್ತು ಕಿಮೀ ದೂರದಲ್ಲಿದೆ.
Published On - 4:42 pm, Fri, 25 September 20